ಮುಂಬಯಿ: ಕೋವಿಡ್-19 ರೋಗಿಗಳಿಗೆ ಐಸೋಲೇಷನ್ ಕೇಂದ್ರವಾಗಿ ಬಳಸಿಕೊಳ್ಳಲು ಬಾಲಿವುಡ್ ನಟ ಶಾರೂಖ್ ಖಾನ್ ಅವರು ಮುಂಬಯಿಯ ಸಿಡಿ ಮಾರ್ಗ್ನಲ್ಲಿರುವ ತಮ್ಮ ಒಡೆತನದ ನಾಲ್ಕು ಮಹಡಿಗಳ ಕಟ್ಟಡವನ್ನು ಬಿಟ್ಟುಕೊಟ್ಟಿದ್ದರೂ, ವೈದ್ಯರ ಕೊರತೆಯಿಂದಾಗಿ ಅದು ಬಳಕೆಯೇ ಆಗದಿರುವುದು ಬೆಳಕಿಗೆ ಬಂದಿದೆ.ಶಾರೂಖ್ ದಂಪತಿ ಏ.24ರಂದೇ ಈ ಕಟ್ಟಡವನ್ನು ಬೃಹನ್ಮುಂಬಯಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದ್ದರು. ಅಲ್ಲದೇ ಶಾರೂಖ್ ಅವರ ‘ಮೀರ್ ಫೌಂಡೇಷನ್’ ಎನ್ಜಿಒ ಇಲ್ಲಿ22 ಬೆಡ್ಗಳ ವ್ಯವಸ್ಥೆಯನ್ನೂ ಮಾಡಿತ್ತು. ಆದರೆ ಪಾಲಿಕೆಯ ಬೇಜವಾಬ್ದಾರಿಯಿಂದ ಇಲ್ಲಿ ವೈದ್ಯರ ನಿಯೋಜನೆಯೇ ಆಗಿಲ್ಲ. ಒಂದು ತಿಂಗಳಾದರೂ ಒಬ್ಬ ಕೋವಿಡ್-19 ರೋಗಿ ಇಲ್ಲಿ ಚಿಕಿತ್ಸೆ ಪಡೆದಿಲ್ಲಎಂಬುದು ಬೆಳಕಿಗೆ ಬಂದಿದೆ.
ಬಳಕೆಯಾಗದೆ ಉಳಿದ ಶಾರೂಖ್ ಖಾನ್ ಕಟ್ಟಡ

Please follow and like us: