ಕೇರಳ: ಕೋವಿಡ್ ಸೋಂಕಿನ ನಡುವೆ ಕೇರಳದ ವಯನಾಡ್ ಜಿಲ್ಲೆಯಲ್ಲಿ ಬೆಕ್ಕುಗಳು ಸಾವನ್ನಪ್ಪಿವೆ. ಆದರೆ ಈ ಪ್ರಕರಣಕ್ಕೆ ಫೆಲೆನ್ ಪಾರ್ವೋ ವೈರಸ್ ಕಾರಣ ಎಂಬುದು ಗೊತ್ತಾಗಿದೆ. ಜಿಲ್ಲೆಯ ಮಾನಂದವಾಡಿ ಎಂಬಲ್ಲಿ ಕಳೆದ ಮೂರು ದಿನಗಳಲ್ಲಿ ೧೫ಕ್ಕೂ ಹೆಚ್ಚು ಬೆಕ್ಕುಗಳು ಮೃತ ಪಟ್ಟಿವೆ. ಹೀಗೆ ಸಾವಿಗೀಡಾದ ಬೆಕ್ಕುಗಳ ದೇಹದ ಅಸ್ಥಿಪಂಜರ ಸಂಗ್ರಹಿಸಿದ ಪಶುಸಂಗೋಪನಾ ಇಲಾಖೆ ವೈದ್ಯರು, ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಬೆಕ್ಕುಗಳ ಸಾವು ವೈರಸ್ನಿಂದ ಸಂಭವಿಸಿದೆ ಎಂಬುದು ದೃಢಪಟ್ಟಿದೆ. ಈ ಸುದ್ದಿ ಕೇಳಿದ ಜನರು ಕೊರೊನಾವನ್ನೇ ಸಹಿಸಿಕೊಳ್ಳಲಾಗುತ್ತಿಲ್ಲ. ಇದಾವುದೋ ಹೊಸ ವೈರಸ್ ಬಂದಿದೆ ಎಂದು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ಆದರೆ ಈ ವೈರಸ್ ಮನುಷ್ಯನಿಗೆ ಅಂಟುವುದಿಲ್ಲ ಎಂದು ತಜ್ಞರು ಖಾತ್ರಿಪಡಿಸಿದ ಬಳಿಕ ಕೊಂಚ ನಿರಾಳರಾಗಿದ್ದಾರೆ.
ಬೆಕ್ಕುಗಳಿಗೆ ಫೆಲೆನ್ ಪಾರ್ವೋವೈರಸ್ ಭೀತಿ
Please follow and like us: