ಬೆಕ್ಕುಗಳಿಗೆ ಫೆಲೆನ್ ಪಾರ್ವೋವೈರಸ್ ಭೀತಿ

ಕೇರಳ: ಕೋವಿಡ್ ಸೋಂಕಿನ ನಡುವೆ ಕೇರಳದ ವಯನಾಡ್ ಜಿಲ್ಲೆಯಲ್ಲಿ ಬೆಕ್ಕುಗಳು ಸಾವನ್ನಪ್ಪಿವೆ. ಆದರೆ ಈ ಪ್ರಕರಣಕ್ಕೆ ಫೆಲೆನ್ ಪಾರ್ವೋ ವೈರಸ್ ಕಾರಣ ಎಂಬುದು ಗೊತ್ತಾಗಿದೆ. ಜಿಲ್ಲೆಯ ಮಾನಂದವಾಡಿ ಎಂಬಲ್ಲಿ ಕಳೆದ ಮೂರು ದಿನಗಳಲ್ಲಿ ೧೫ಕ್ಕೂ ಹೆಚ್ಚು ಬೆಕ್ಕುಗಳು ಮೃತ ಪಟ್ಟಿವೆ. ಹೀಗೆ ಸಾವಿಗೀಡಾದ ಬೆಕ್ಕುಗಳ ದೇಹದ ಅಸ್ಥಿಪಂಜರ ಸಂಗ್ರಹಿಸಿದ ಪಶುಸಂಗೋಪನಾ ಇಲಾಖೆ ವೈದ್ಯರು, ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಬೆಕ್ಕುಗಳ ಸಾವು ವೈರಸ್‌ನಿಂದ ಸಂಭವಿಸಿದೆ ಎಂಬುದು ದೃಢಪಟ್ಟಿದೆ. ಈ ಸುದ್ದಿ ಕೇಳಿದ ಜನರು ಕೊರೊನಾವನ್ನೇ ಸಹಿಸಿಕೊಳ್ಳಲಾಗುತ್ತಿಲ್ಲ. ಇದಾವುದೋ ಹೊಸ ವೈರಸ್ ಬಂದಿದೆ ಎಂದು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ಆದರೆ ಈ ವೈರಸ್ ಮನುಷ್ಯನಿಗೆ ಅಂಟುವುದಿಲ್ಲ ಎಂದು ತಜ್ಞರು ಖಾತ್ರಿಪಡಿಸಿದ ಬಳಿಕ ಕೊಂಚ ನಿರಾಳರಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಾಮನಗರ ಜೈಲಿಗೆ ಆರೋಪಿಗಳು ಶಿಫ್ಟ್

Wed Apr 22 , 2020
ಬೆಂಗಳೂರು: ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕರ ತೀವ್ರ ವಿರೋಧದ ನಡುವೆಯೂ  ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿಗಳನ್ನ ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪಾದರಾಯನ ಪುರ ಗಲಭೆ ಪ್ರಕರಣದ 54 ಆರೋಪಿಗಳನ್ನು ನಿನ್ನೆ ರಾಮನಗರ ಕಾರಾಗೃಹಕ್ಕೆ ರವಾನಿಸಲಾಗಿತ್ತು. ಇವತ್ತು ಉಳಿದ 76 ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್​ ಮಾಡಲು ಸಿದ್ಧತೆ ನಡೆದಿದೆ.  ರಾಮನಗರ ಗ್ರೀನ್ ಝೋನ್ ಆಗಿರುವ ಹಿನ್ನೆಲೆ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗ್ತಿದೆ. ಅಲ್ಲಿನ ಕಾರಾಗೃಹಕ್ಕೆ ಶಿಫ್ಟ್ ಮಾಡುವ […]

Advertisement

Wordpress Social Share Plugin powered by Ultimatelysocial