ಅಪರಿಚಿತರ ಕೈಗೆ ATM ಕೊಟ್ಟು ಹಣ ಡ್ರಾ ಮಾಡುವ ಮುನ್ನ ಈ ಸುದ್ದಿ ಮಿಸ್‌ ಮಾಡದೇ ಓದಿ

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ಅಪರಿಚಿತರ ಕೈಗೆ ಕಾರ್ಡ್ ಕೊಟ್ಟು ಈಗ ಕಾರ್ಡ್‌ ದಾರರ ತನ್ನ ಖಾತೆಯಲ್ಲಿದ್ದ ಹಣವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ.

ಘಟನೆ ಹಿನ್ನಲೆ: ಪಟ್ಟಣದ ಕೆನರಾ ಬ್ಯಾಂಕ್ ಎಟಿಎಂಗೆ ಕಳೆದ ಎರಡ್ಮೂರು‌ ದಿನಗಳ ಹಿಂದೆ ಜಾಗೇರಿ ಗ್ರಾಮದ‌ ಶೇಶುರಾಜ್ ಎನ್ನುವವರು ಹೋಗಿದ್ದರು, ಈ ವೇಳೆಯಲ್ಲಿ ಅಲ್ಲೇ ಇದ್ದ ಅಪರಿಚಿತ ವ್ಯಕ್ತಿಯ ಕೈಗೆ ಎಟಿಎಂ ಕಾರ್ಡ್ ಕೊಟ್ಟು 500 ರೂ.

ಪಡೆದು ಕೊಂಡು ಮನೆಗೆ ಹೋಗಿದ್ದಾರೆ. ಇನ್ನೂ ಇದೇ ವೇಳೆ ಹಣ ಪಡೆದುಕೊಂಡು ಎಟಿಎಂ ಕಾರ್ಡ್‌ ತೆಗೆದುಕೊಂಡು ಹೋಗಿದ್ದ ಶೇಶ್‌ ರಾಜ್‌ಗೆ ಮರುದಿನ ನಿಮ್ಮ ಖಾತೆಯಿಂದ 19 ಸಾವಿರ ರೂ. ಡ್ರಾ ಆಗಿರೋ ಸಂದೇಶ ಬಂದಿದೆ. ಎಟಿಎಂ ಕಾರ್ಡ್‌ ತನ್ನ ಬಳಿ ಇದ್ದರು ಕೂಡ ಹೇಗೆ ಹಣ ಆಯ್ತು ಅಂತ ಶೇಶುರಾಜ್ ಗಮನ ಹರಿಸಿದ ವೇಳೇಯಲ್ಲಿ, ಶೇಶುರಾಜ್ ಗೆ ಅಪರಿಚಿತ ವ್ಯಕ್ತಿ ತನ್ನ ಕಾರ್ಡ್‌ ಬದಲು ಇನ್ನೊಂದು ಕಾರ್ಡ್‌ ನೀಡಿರುವುದನ್ನು ನೋಡಿ ಗಾಬರಿಯಾಗಿದ್ದಾನೆ. ಇದೇ ವೇಳೆ ತನಗೆ ಆಗಿರುವ ಮೋಸಕ್ಕೆ ನ್ಯಾಯಾ ಒದಗಿಸುವಂತೆ ಶೇಶುರಾಜ್ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಶೇಶುರಾಜ್ ದೂರು ದಾಖಲಿಸಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

.

Please follow and like us:

Leave a Reply

Your email address will not be published. Required fields are marked *

Next Post

'ಗೌರವಯುತ' ಉಕ್ರೇನ್ ಕ್ಷಣವನ್ನು ಒಳಗೊಂಡ ಆಸ್ಕರ್ ಪ್ರಶಸ್ತಿಗಳು!

Fri Mar 25 , 2022
ಭಾನುವಾರದ ಅಕಾಡೆಮಿ ಪ್ರಶಸ್ತಿಗಳಲ್ಲಿ ಹಾಲಿವುಡ್‌ನ ಎ-ಲಿಸ್ಟ್ ಸೆಲೆಬ್ರಿಟಿಗಳು ತಮ್ಮ ವಾರ್ಷಿಕ ಚಲನಚಿತ್ರಗಳ ಆಚರಣೆಗಾಗಿ ಒಟ್ಟುಗೂಡುತ್ತಿದ್ದಂತೆ, ನೇರ ಪ್ರಸಾರವು ಉಕ್ರೇನ್‌ನ ರಷ್ಯಾದ ಆಕ್ರಮಣದ ಪರಿಣಾಮಗಳನ್ನು ಗುರುತಿಸುತ್ತದೆ. ಸಂಘಟಕರು ಗುರುವಾರ ಕೆಲವು ವಿವರಗಳನ್ನು ಒದಗಿಸಿದರು ಆದರೆ ಆಸ್ಕರ್ ಸಮಾರಂಭದಲ್ಲಿ ಆಕ್ರಮಣವನ್ನು ಅಂಗೀಕರಿಸುವ ಒಂದು ಕ್ಷಣ ಇರುತ್ತದೆ ಎಂದು ಹೇಳಿದರು, ಇದು ಸಾವಿರಾರು ಜನರನ್ನು ಕೊಂದು ಉಕ್ರೇನ್‌ನ 44 ಮಿಲಿಯನ್ ಜನರಲ್ಲಿ ಕಾಲು ಭಾಗದಷ್ಟು ಜನರನ್ನು ಅವರ ಮನೆಗಳಿಂದ ಓಡಿಸಿದೆ. “ನಾವು ರಾತ್ರಿ ವಿನೋದ […]

Advertisement

Wordpress Social Share Plugin powered by Ultimatelysocial