ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ  ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ..!

ಕಾರವಾರ: ಕಳೆದ 40 ದಿನಗಳಿಂದ ಮದ್ಯವಿಲ್ಲದೆ ಕಂಗೆಟ್ಟಿದ್ದ ಮದ್ಯಪ್ರಿಯರಿಗೆ ಸರ್ಕಾರ ನಾಳೆಯಿಂದ ಮದ್ಯ ನೀಡಲು ಮುಂದಾಗಿದ್ದು, ಕಾರವಾರದಲ್ಲಿ ಅಬಕಾರಿ ಇಲಾಖೆ ಮದ್ಯ ಮಾರಾಟದ ಅಂಗಡಿಗಳ ಮುಂದೆ ಮಾರ್ಕ್ ಮಾಡಿ ಸಿದ್ಧತೆ ನಡೆಸಿದೆ. ಕಾರವಾರದಲ್ಲಿ ಅಬಕಾರಿ ಇಲಾಖೆಯಿಂದ ಸಿದ್ಧತೆಹೌದು, ಲಾಕ್​ಡೌನ್​ನಿಂದಾಗಿ ಮಾರ್ಚ್ 24 ರಿಂದ ಬಂದಾಗಿದ್ದ ಮದ್ಯದ ಅಂಗಡಿಗಳನ್ನು ಸರ್ಕಾರ ಮೇ 4 ರಿಂದ ತೆರೆಯಲು ಒಪ್ಪಿಗೆ ಸೂಚಿಸಿವೆ. ಎಂಎಸ್​ಐಎಲ್ ಮತ್ತು ವೈನ್ ಶಾಪ್ ಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಕಾರವಾರದಲ್ಲಿ ಇಂದು ಮದ್ಯದ ಅಂಗಡಿಗಳ ಮುಂದೆ ಅಬಕಾರಿ ಇಲಾಖೆ ಮದ್ಯ ಖರೀದಿಗೆ ಬರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್ ಮಾಡಿದೆ. ಕೇವಲ ಎಂಎಸ್ಐಎಲ್ ಮತ್ತು ವೈನ್ ಶಾಪ್​ಗಳಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕಾರವಾರದಲ್ಲಿ ಸ್ವತಃ ಅಬಕಾರಿ ಇಲಾಖೆ ಅಧಿಕಾರಿಗಳ ಸುವರ್ಣಾ ನಾಯ್ಕ ನೇತೃತ್ವದ ತಂಡ ಮದ್ಯದ ಅಂಗಡಿಗಳ ಎದುರು ಅಳತೆ ಮಾಡಿ ಸರ್ಕಲ್​ಗಳನ್ನು ಹಾಕಿಸಿದ್ದಾರೆ. ದೀರ್ಘ ಸಮಯದ ನಂತರ ಮತ್ತೆ ಬಾಗಿಲು ತೆಗೆಯುತ್ತಿದ್ದು ಮದ್ಯ ಪ್ರಿಯರಿಗೆ ಖುಷಿಗೆ ಕಾರಣವಾಗಿದೆ. ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಶಾಪ್​ ತೆರೆಯಲು ಅವಕಾಶ ನೀಡಲಾಗಿದ್ದು, 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಅಂಗಡಿಗಳಲ್ಲಿ 5 ಜನರಿಗೆ ಮಾತ್ರ ಪ್ರವೇಶಾವಕಾಶವಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಅಂತರ ಜಿಲ್ಲೆ, ಅಂತರ ರಾಜ್ಯಗಳ ವಾಹನ ಸಂಚಾರಕ್ಕೆ ಅವಕಾಶ

Sun May 3 , 2020
ಬೆಂಗಳೂರು : ರಾಜ್ಯ ಸರ್ಕಾರದಿಂದ ಮೇ.4ರಿಂದ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯಂತೆ ಅಂತರ ಜಿಲ್ಲೆ, ಅಂತರ ರಾಜ್ಯಗಳಿಗೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದ್ರೇ ಹೀಗೆ ತೆರಳಲು ಆಯಾ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲ್ಲವೇ ಡಿಸಿಪಿಗಳಿಂದ ಪಾಸ್ ಪಡೆದು ಸಂಚರಿಸುವುದು ಕಡ್ಡಾಯವಾಗಿದೆ. ಈ ಕುರಿತಂತೆ ಸುತ್ತೋಲೆ ಹೊರಡಿಸಿರುವಂತ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಿಕ್ಕಬಳ್ಳಾಪರ ಮತ್ತು ಕೋಲಾರ […]

Advertisement

Wordpress Social Share Plugin powered by Ultimatelysocial