ತೆಹ್ರಾನ್: ಮಲಗಿದ್ದ ವೇಳೆ ಅಪ್ರಾಪ್ತ ಮಗಳ ತಲೆಯನ್ನು ತಂದೆಯೇ ತುಂಡರಿಸಿದ ಆತಂಕಕಾರಿ ಘಟನೆ ಇರಾನ್ನಲ್ಲಿ ನಡೆದಿದ್ದು, ಇದೊಂದು ಮರ್ಯಾದೆ ಹತ್ಯೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರೊಮಿನಾ ಅಶ್ರಫಿ (13) ಮೃತ ದುರ್ದೈವಿ. ಇರಾನ್ನ ತಲೇಶ್ ಕೌಂಟಿಯಲ್ಲಿರುವ ತಮ್ಮ ನಿವಾಸದಲ್ಲಿ ರಾತ್ರಿ ಮಲಗಿದ್ದಾಗ ಕುಡುಗೋಲಿನಿಂದ ತಲೆಯನ್ನು ಕತ್ತರಿಸಲಾಗಿದೆ. ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಆಕೆ ಓಡಿ ಹೋಗಲು ತಯಾರಾಗಿದ್ದಾರಿಂದ ಮರ್ಯಾದೆಗೆ ಅಂಜಿ ಹತ್ಯೆ ಮಾಡಲಾಗಿದೆ.
ಮಗಳ ತಲೆಯನ್ನೇ ತುಂಡರಿಸಿದ ತಂದೆ

Please follow and like us: