ಮದ್ಯ ಖರೀದಿಯ ಕಾಸ್ಟ್ಲೀ ಬಿಲ್ ವೈರಲ್..! ವ್ಯಾಪಾರಿ, ಗ್ರಾಹಕನಿಗೂ ಕುತ್ತು..!

ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದ ಮದ್ಯ ಖರೀದಿಯ ಕಾಸ್ಟ್ಲೀ ಬಿಲ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನಿನ್ನೆ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. ಅಲ್ಲದೇ ಒಬ್ಬ ವ್ಯಕ್ತಿಗೆ ಇಂತಿಷ್ಟು ಮದ್ಯ ಮಾರಾಟ ಮಾಡಬೇಖು ಎಂದು ನಿಗದಿ ಮಾಡಲಾಗಿತ್ತು. ಇದೇ ವೇಳೆ ಬೆಂಗಳೂರು ನಗರದೆಲ್ಲೆಡೆ ಮದ್ಯ ಖರೀದಿಗೆ ಪಾನ ಪ್ರಿಯರು ಮುಗಿ ಬಿದ್ದಿದ್ದರು. ಈ ಎಲ್ಲದರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ 52,800 ರೂ.ಗಳ ಮದ್ಯದ ಖರೀದಿ ಬಿಲ್ ಪೋಟೋ ಹರಿದಾಡಿತ್ತು. ಇದನ್ನು ಕಂಡ ಸಾರ್ವಜನಿಕರು ಮತ್ತು ಅಧಿಕಾರಿಗಳ ಹುಬ್ಬೇರಿಸುವಂತೆ ಮಾಡಿತ್ತು. ಸದ್ಯ ಇಷ್ಟು ದೊಡ್ಡ ಮೊತ್ತದ ಬಿಲ್ ಮಾರಾಟಗಾರ ಮತ್ತು ಖರೀದಿದಾರ ಇಬ್ಬರನ್ನೂ ತೊಂದರೆಗೆ ಸಿಲುಕಿಸಿದೆ. ಈ ಬಿಲ್ ಪೋಟೋವನ್ನು ಗಮನಿಸಿದ ಅಬಕಾರಿ ಇಲಾಖೆ, ಅನುಮತಿ ನೀಡಿರುವ ಮಿತಿಗಿಂತ ಹೆಚ್ಚು ಮದ್ಯವನ್ನು ಮಾರಾಟ ಮಾಡಿದ್ದಕ್ಕಾಗಿ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿದೆ. ಚಿಲ್ಲರೆ ಮದ್ಯದಂಗಡಿಗಳು ದಿನಕ್ಕೆ 2.6 ಲೀಟರ್ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ (ಐಎಂಎಫ್‌ಎಲ್) ಅಥವಾ 18 ಲೀಟರ್ ಬಿಯರ್ ಕ್ಕಿಂತ ಹೆಚ್ಚಿನದನ್ನು ಗ್ರಾಹಕರಿಗೆ ಮಾರಾಟ ಮಾಡೋದು ಅಬಕಾರಿ ಕಾಯ್ದೆಯ ಅನ್ವಯ ಅಪರಾಧವಾಗಿದೆ.

ಬೆಂಗಳೂರು ದಕ್ಷಿಣದ ತಾವರೆಕೆರೆಯ ವೆನಿಲ್ಲಾ ಸ್ಪಿರಿಟ್ ಜೋನ್ ನಲ್ಲಿ ಮದ್ಯದಂಗಡಿ ಒಬ್ಬನೇ ಕಸ್ಟಮರ್ಗೆ 35 ಲೀಟರ್ ಬಿಯರ್ ಮತ್ತು 13 ಲೀಟರ್ಗೂ ಹೆಚ್ಚು ಮದ್ಯ ಮಾರಾಟ ಮಾಡಿದ್ದಾನೆ. ಲಾಕ್ ಡೌನ್ ಬಳಿಕ ರಾಜ್ಯ ಸರ್ಕಾರ ಬಾರ್ ಬಾಗಿಲು ತೆಗೆಯಲು ಅನುಮತಿ ಕೊಟ್ಟ ಕೆಲವೇ ಸಮಯದಲ್ಲಿ ಈ ಬಿಲ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಲ್ಲದೇ ಈ ಬಿಲ್ ಅಬಕಾರಿ ಇಲಾಖೆ ಗಮನಕ್ಕೆ ಬಂದ ತಕ್ಷಣವೇ ತನಿಖೆಗೆ ಮುಂದಾಗಿದ್ದಾರೆ. ಅಬಕಾರಿ ನಿಯಮಗಳನ್ನು ಗಾಳಿಗೆ ತೂರಿ ಮದ್ಯ ಮಾರಾಟ ಮಾಡಿರುವ ಮಾಲೀಕ ಮತ್ತು 2.6 ಲೀಟರಗೂ ಹೆಚ್ಚು ಮದ್ಯ ಖರೀದಿ ಮಾಡಿದ ಗ್ರಾಹಕನ ವಿರುದ್ಧ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳಲಿದೆ.

Please follow and like us:

Leave a Reply

Your email address will not be published. Required fields are marked *

Next Post

ಪವರ್ ಸ್ಟಾರ್ ವರ್ಕೌಟ್​ ಹೇಗಿದೆ ಗೊತ್ತಾ..!

Tue May 5 , 2020
ಕನ್ನಡದ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ ಈಗಲೂ ತುಂಬ ಎರ‍್ಜಿಟಿಕ್. ವಯಸ್ಸು ೪೫ ಆದರೂ, ಇಂದಿಗೂ ಚರ‍್ಮಿಂಗ್​ ಮತ್ತು ಸದಾ ಆ್ಯಕ್ಟೀವ್. ಅದಕ್ಕೆ ಕಾರಣ ಅವರ ನಿತ್ಯದ ಜೀವನ ಶೈಲಿ. ಪುನೀತ್​ ಅತ್ಯುತ್ತಮ ಡಾನ್ಸರ್​ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತು. ಆ ಡಾನ್ಸ್​ನಿಂದಲೇ ಪುನೀತ್​ ಈಗಲೂ ಯಂಗ್​ ಆಗಿದ್ದಾರೆ. ಈ ಹಿಂದೆ ಸಂರ‍್ಶನವೊಂದರಲ್ಲಿ ಅವರೇ ಈ ಸತ್ಯವನ್ನು ಬಾಯ್ಬಿಟ್ಟಿದ್ದರು. ನನ್ನ ಫಿಟ್​ನೆಸ್​ಗೆ ಡಾನ್ಸ್ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದೀಗ ಡಾನ್ಸ್ ಬದಲು […]

Advertisement

Wordpress Social Share Plugin powered by Ultimatelysocial