ಮದ್ಯ ಡೆಲೆವರಿ ಮಾಡಲು ಝೊಮ್ಯಾಟೊ ನಿರ್ಧಾರ

ನವದೆಹಲಿ: ಆಹಾರ ಪದಾರ್ಥ ಡೆಲಿವರಿ ಮಾಡುತ್ತಿದ್ದ ಝೊಮ್ಯಾಟೊ ಕಂಪನಿ ಲಾಕ್‌ಡೌನ್ ಹಿನ್ನೆಲೆ ದಿನಸಿ ಪದಾರ್ಥಗಳನ್ನೂ ಡೆಲಿವರಿ ಮಾಡುತ್ತಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮದ್ಯವನ್ನೂ ಡೆಲಿವರಿ ಮಾಡಲು ನಿರ್ಧರಿಸಿದೆ. ೪೦ ದಿನಗಳ ಲಾಕ್‌ಡೌನ್ ಬಳಿಕ ಇದೀಗ ಸಡಿಲಿಕೆ ನೀಡಲಾಗಿದ್ದು, ಬಾರ್‌ಗಳ ಮುಂದೆ ಮದ್ಯ ಪ್ರಿಯರು ಕ್ಯೂನಲ್ಲಿ ನಿಂತು ಮದ್ಯ ಖರೀದಿಸಬೇಕಿದೆ. ಅಲ್ಲದೆ ಈ ವೇಳೆ ಹೆಚ್ಚಿನ ಗಲಾಟೆಗಳು ನಡೆಯುತ್ತಿದ್ದು, ಸಾಮಾಜಿಕ ಅಂತರ ಕಾಪಾಡುವುದು ಸಾಹಸವಾಗಿದೆ. ಹೀಗಾಗಿ ಮದ್ಯಪ್ರಿಯರನ್ನು ನಿರ್ವಹಿಸುವುದು ಸವಾಲಾಗಿದೆ. ಇದನ್ನರಿತ ಝೊಮ್ಯಾಟೊ ಮದ್ಯವನ್ನೂ ಡೆಲಿವರಿ ಮಾಡಲು ಮುಂದಾಗಿದ್ದು, ಇದಕ್ಕೆ ಸರ್ಕಾರದ ಒಪ್ಪಿಗೆ ಸಿಗಬೇಕಿದೆ. ಲಾಕ್‌ಡೌನ್ ಹಿನ್ನೆಲೆ ದೇಶದ ಬಹುತೇಕ ನಗರಗಳಲ್ಲಿ ನೂರಾರು ಜನ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದು, ಉದ್ದದ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದಾರೆ. ಮಹಿಳೆಯರು ಸಹ ಸಾಲಿನಲ್ಲಿ ನಿಂತು ಮದ್ಯ ಕೊಂಡೊಯ್ಯುತ್ತಿದ್ದಾರೆ. ಹೀಗಾಗಿ ಬಹುತೇಕ ಕಡೆ ಗಲಾಟೆ ಹೆಚ್ಚುತ್ತಿದೆ. ಇದೆಲ್ಲದರ ಮದ್ಯೆ ದೆಹಲಿಯಲ್ಲಿ ಕೊರೊನಾ ವಿಶೇಷ ಶುಲ್ಕವೆಂದು ಪ್ರತಿ ಬಾಟಲಿ ಮೇಲೆ ಶೇ.೭೦ರಷ್ಟು ದರವನ್ನು ಹೆಚ್ಚಿಸಲಾಗಿದೆ. ಕೊರೊನಾ ಹಾಟ್‌ಸ್ಪಾಟ್ ಆಗಿರುವ ಮುಂಬೈನಲ್ಲಿ ಬಾರ್‌ಗಳನ್ನು ತೆರೆದ ಎರಡೇ ದಿನಗಳಲ್ಲಿ ಮತ್ತೆ ಮುಚ್ಚಲಾಗಿದೆ.
ಮದ್ಯವನ್ನು ಹೋಮ್ ಡೆಲಿವರಿ ಮಾಡಲು ಭಾರತದ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಈ ಕುರಿತು ಕೈಗಾರಿಕಾ ವಿಭಾಗ ಹಾಗೂ ಅಂತರಾಷ್ಟ್ರೀಯ ಸ್ಪಿರಿಟ್ಸ್ ಆ್ಯಂಡ್ ವೈನ್ಸ್ ಅಸೋಷಿಯೇಶನ್ ಆಫ್ ಇಂಡಿಯಾ(ಐಎಸ್ಡಬ್ಲ್ಯೂಎಐ) ಲಾಬಿ ನಡೆಸುತ್ತಲೇ ಇವೆ. ಕಡಿಮೆ ಸೋಂಕು ಹೊಂದಿರುವ ಪ್ರದೇಶಗಳಲ್ಲಿ ಮದ್ಯ ವಿತರಿಸಲು ಝೊಮ್ಯಾಟೊ ಪ್ಲ್ಯಾನ್ ಮಾಡಿದೆ

Please follow and like us:

Leave a Reply

Your email address will not be published. Required fields are marked *

Next Post

ಕಳಪೆ ಬೀಜ ಮಾರಾಟ ಮಾಡುವ ಮಾಫಿಯಾ ಸಿಕ್ಕಿದೆ

Thu May 7 , 2020
ರಾಜ್ಯ ಸರ್ಕಾರ ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವ ಮೂಲಕ ರೈತರನ್ನು ಏಮಾರಿಸುತ್ತಿದ್ದ ಆಂಧ್ರಪ್ರದೇಶ ಮೂಲದ ಮಾಫಿಯಾವನ್ನು ಬಯಲು ಮಾಡಿದೆ. ಅಲ್ಲದೆ, ಈ ಮಾಫಿಯಾ ವಿರುದ್ಧ 8 ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಆಂಧ್ರದಲ್ಲಿ ರಿಜೆಕ್ಟ್ ಆಗಿದ್ದ ಬೀಜಗಳನ್ನು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆಂಧ್ರಪ್ರದೇಶದ ಮೂಲದ ಕೆಲವರು ಈ ಮಾಫಿಯಾದಲ್ಲಿ ತೊಡಗಿದ್ದರು. ಈ ಎಲ್ಲರನ್ನೂ ವಶಕ್ಕೆ ಪಡೆಯಲಾಗಿದೆ.ಇವರಿಂದ […]

Advertisement

Wordpress Social Share Plugin powered by Ultimatelysocial