7 ರಾಜ್ಯಗಳ 14 ಮಂದಿಯನ್ನು ಮದ್ವೆಯಾದ ಭೂಪ: ಬಲೆಗೆ ಬಿದ್ದವರೆಲ್ಲಾ ವೈದ್ಯರು, ವಕೀಲರು, ಉನ್ನತ ಅಧಿಕಾರಿಗಳು!

(ಒಡಿಶಾ): ಎಷ್ಟೋ ಯುವಕರು ವಯಸ್ಸಾದರೂ ತಮಗೆ ಇನ್ನೂ ಮದ್ವೆಯಾಗಿಲ್ಲ ಎಂಬ ಚಿಂತೆಯಲ್ಲಿ ಇದ್ದಾರೆ. ಎಷ್ಟು ನೋಡಿದರೂ ಸೂಕ್ತ ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗು ಅವರದ್ದು. ಆದರೆ ಇಲ್ಲೊಬ್ಬ ಭೂಪ ಒಂದಲ್ಲ… ಎರಡಲ್ಲ 14 ಮದುವೆಯಾಗಿದ್ದಾನೆ.

ಅದೂ ಏಳು ಬೇರೆ ಬೇರೆ ರಾಜ್ಯಗಳ ಹೆಣ್ಣುಮಕ್ಕಳನ್ನು. ಅಷ್ಟೇ ಅಲ್ಲ, ಹೀಗೆ ಮದ್ವೆಯಾದವರೆಲ್ಲರೂ ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದವರು!

65 ವರ್ಷ ವಯಸ್ಸಿನ ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಗ್ರಾಮದ ನಿವಾಸಿ ಕಳೆದ 48 ವರ್ಷಗಳಿಂದ ಮದುವೆಯಾಗುವ ಕಾಯಕವನ್ನೇ ಮಾಡಿಕೊಂಡು ಬಂದಿದ್ದಾನೆ. 7 ರಾಜ್ಯಗಳ 14 ಮಹಿಳೆಯರನ್ನು ಈತ ಇದಾಗಲೇ ಮದುವೆಯಾಗಿದ್ದು, ಕೊನೆಗೂ ಬಂಧನಕ್ಕೆ ಒಳಗಾಗಿದ್ದಾನೆ. ವಿಚಿತ್ರ ಎಂದರೆ ಈತನ ಬಲೆಗೆ ಬಿದ್ದವರ ಪೈಕಿ ಹಲವರು ವೈದ್ಯರು, ವಕೀಲರು, ಶಿಕ್ಷಕಿಯರು ಹಾಗೂ ದೊಡ್ಡ ದೊಡ್ಡ ಅಧಿಕಾರಿಗಳು. ಅಲ್ಲದೇ ಪ್ಯಾರಾ ಮಿಲಿಟರಿ ಪಡೆಗಳಲ್ಲಿ ಕೆಲಸ ಮಾಡುವ ಮಹಿಳೆಯನ್ನೂ ಕೂಡ ಈತ ಮದುವೆಯಾಗಿದ್ದಾನೆ!

ಅಷ್ಟಕ್ಕೂ ಈತ ಮಾಡುತ್ತಿದ್ದುದು ಏನೆಂದರೆ, ಮ್ಯಾಟ್ರಿಮೋನಿ ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದ. ತನ್ನನ್ನು ತಾನು ದೊಡ್ಡ ವೈದ್ಯ ಎಂದು ಹೇಳಿಕೊಂಡು ಪ್ರೊಫೈಲ್‌ ಸೃಷ್ಟಿಸಿಕೊಂಡಿದ್ದ. ನಂತರ ಅಲ್ಲಿ ಮದುವೆಗಾಗಿ ಜಾಹೀರಾತು ನೀಡುವ ದೊಡ್ಡ ದೊಡ್ಡ ಹುದ್ದೆಯ ಮಹಿಳೆಯರು, ಸಿರಿವಂತರನ್ನು ಟಾರ್ಗೆಟ್‌ ಮಾಡುತ್ತಿದ್ದ. ನಂತರ ತಾನು ವೈದ್ಯ, ಇಂತಿಷ್ಟು ಆದಾಯ ಎಂದೆಲ್ಲಾ ರೀಲು ಬಿಟ್ಟು ಅವರನ್ನು ನಂಬಿಸುತ್ತಿದ್ದ. ಹಿಂದೆ ಮುಂದೆ ಯೋಚಿಸದ ಮಹಿಳೆಯರು ಈತನ ಬಲೆಗೆ ಬೀಳುತ್ತಿದ್ದರು. ಅವರನ್ನು ಮದುವೆಯಾಗುತ್ತಿದ್ದ ಆಸಾಮಿ, ಅವರಿಂದ ಚಿನ್ನ, ಹಣ ಕದ್ದು ಎಸ್ಕೇಪ್‌ ಆಗುತ್ತಿದ್ದ. ಮರ್ಯಾದೆಗೆ ಅಂಜಿ ಮಹಿಳೆಯರು ದೂರು ಕೊಡುತ್ತಿರಲಿಲ್ಲ.

ಹೀಗೆ 1982ರಿಂದ ಇದೇ ಕಾಯಕ ಮಾಡಿಕೊಂಡು ಬಂದ. ಈತ ಮೊದಲು ವಿವಾಹವಾಗಿದ್ದು 1982ರಲ್ಲಿ, ಕೊನೆಯಲ್ಲಿ ಮದುವೆಯಾದದ್ದು 2022ರಲ್ಲಿ. ಈತನಿಗೆ ಐವರು ಮಕ್ಕಳಿದ್ದಾರೆ. ಹೆಚ್ಚಾಗಿ ಈತ ಮಧ್ಯವಯಸ್ಕ ಒಂಟಿ ಮಹಿಳೆಯರನ್ನು ಗುರಿಯಾಗಿಸುತ್ತಿದ್ದ. ಈತನ ಬಲೆಗೆ ಬಿದ್ದವರ ಪೈಕಿ ಹಲವರು ವಿಚ್ಛೇದಿತರು ಎಂದು ಭುವನೇಶ್ವರ ಉಪ ಪೊಲೀಸ್ ಆಯುಕ್ತ ಉಮಾಶಂಕರ್ ದಾಸ್ ಹೇಳಿದ್ದಾರೆ.

ದೆಹಲಿ, ಪಂಜಾಬ್, ಅಸ್ಸಾಂ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಏಳು ರಾಜ್ಯಗಳಲ್ಲಿ ಮಹಿಳೆಯರನ್ನು ಈ ವ್ಯಕ್ತಿ ವಂಚಿಸಿದ್ದಾನೆ. ಅವರ ಮೊದಲ ಇಬ್ಬರು ಪತ್ನಿಯರು ಒಡಿಶಾದರಾಗಿದ್ದಾರೆ. ಕೊನೆಯ ಪತ್ನಿ ದೆಹಲಿಯಲ್ಲಿದ್ದು ಶಿಕ್ಷಕಿಯಾಗಿದ್ದಾರೆ. ಶಿಕ್ಷಕಿಗೆ ಮದುವೆಯಾದ ಮೇಲೆ ಅನುಮಾನ ಬಂದು ಪೊಲೀಸರಲ್ಲಿ ದೂರು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಇಲ್ಲದಿದ್ದರೆ ಇನ್ನೂ ಅನೇಕ ಮಹಿಳೆಯರು ಈತನ ಜಾಲಕ್ಕೆ ಬೀಳುವ ಸಾಧ್ಯತೆ ಇತ್ತು.

ಆರೋಪಿಯ ಬಳಿಯಿದ್ದ 11 ಎಟಿಎಂ ಕಾರ್ಡ್‌ಗಳು, ನಾಲ್ಕು ಆಧಾರ್ ಕಾರ್ಡ್‌ಗಳು ಮತ್ತು ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೈದರಾಬಾದ್ ಮತ್ತು ಎರ್ನಾಕುಲಂನಲ್ಲಿ ನಿರುದ್ಯೋಗಿ ಯುವಕರಿಗೆ ವಂಚನೆ ಮಾಡಿದ ಆರೋಪ ಮತ್ತು ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಈತ ಈ ಹಿಂದೆ ಎರಡು ಬಾರಿ ಬಂಧನಕ್ಕೆ ಒಳಗಾಗಿದ್ದ ಎಂದು ತಿಳಿದುಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ 4 ಪ್ರಿಪೇಯ್ಡ್​ ಪ್ಲಾನ್​ಗಳನ್ನು ಪರಿಚಯಿಸಿದ Jio; ಒಂದಕ್ಕಿಂತ ಒಂದು ಸಖತ್ತಾಗಿದೆ..

Tue Feb 15 , 2022
ಭಾರತದಲ್ಲಿ ಮೂರು ಪ್ರಮುಖ ಟೆಲಿಕಾಂ (Telecom Company) ಕಂಪನಿಗಳು ತಮ್ಮ ಗ್ರಾಹಕರಿಗಾಗಿ ಅದ್ಭುತ ಪ್ರಿಪೇಯ್ಡ್ (Prepaid) ಮತ್ತು ಪೋಸ್ಟ್‌ಪೇಯ್ಡ್ (Postpaid) ಯೋಜನೆಗಳನ್ನು ಆಗಾಗ ಪರಿಚಯಿಸುತ್ತಿರುತ್ತದೆ. ಹಲವಾರು ಅದ್ಭುತ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿರುವ ರಿಲಯನ್ಸ್ ಜಿಯೋ (Reliance Jio) ಕಂಪನಿ ಏರ್‌ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾಗೆ (Vodaphone Idea) ಪೈಪೋಟಿ ನೀಡಲು ಹೊಸ ಯೋಜನೆ (New plan) ಪರಿಚಯಿಸಿದೆ. ಜಿಯೋದ ಅದ್ಭುತ ಪ್ರಿಪೇಯ್ಡ್ ಯೋಜನೆಗಳು: ಜಿಯೋ ನಾಲ್ಕು ಯೋಜನೆಗಳನ್ನು ಜಾರಿಗೆ ತಂದಿದೆ. […]

Advertisement

Wordpress Social Share Plugin powered by Ultimatelysocial