ಬೆಂಗಳೂರು: ಕೊರೊನಾ ವೈರಸ್ ನಿಂದ ಜನರು ತುಂಬಾ ಆತಂಕ ಪಡುವಂತಾಗಿದೆ. ಮದುವೆಗೆ ೫೦ ಜನ ಅಂತ್ಯ ಕ್ರೀಯೆಗೆ ೨೫ ಜನ ಸೇರಬೇಕು ಎಂದು ಆದೇಶ ಹೊರಡಿಸಿದೆ. ಇದರ ಮಧ್ಯೆ ಜನನಾಯಕ ಮಾಜಿ ಶಾಸಕ ಮುನಿರಾಜು ಸಾಮಾಜಿಕ ಅಂತರವನ್ನು ಮರೆತು. ದಾಸರಹಳ್ಳಿ ಯ ಮೆಟ್ರೋ ನಿಲ್ದಾಣದಲ್ಲಿ ಕೊರೊನಾ ವಾರಿಯರ್ಸ್ಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಡಾಕ್ಟರ್ ಗಳು, ಪೋಲಿಸರು, ಟ್ರಾಫಿಕ್ ಪೋಲಿಸರು, ಆಶಾ ಕಾರ್ಯಕರ್ತರರು ಹಾಗೂ ಇನ್ನುಳಿದ ಕೊರೊನಾ ವಾರಿಯರ್ಸ್ಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಲಾಕ್‌ಡೌನ್ ನಿಯಮಗಳು ಉಲ್ಲಂಘನೆಯಾಗಿವೆ. ಸರಿಯಾಗಿ ಮಾಸ್ಕ್ ಹಾಕಿರಲಿಲ್ಲ. ಸಾಮಾಜಿಕ ಅಂತರ ಮೊದಲೇ ಇರಲಿಲ್ಲ. ಇದರಿಂದ ಕೊರೊನಾ ಹಬ್ಬುವ ಭಯ ಜನರಲ್ಲಿ ಇನ್ನೂ ಹೆಚ್ಚಾಗುತ್ತಿದೆ. ಕೊರೊನಾ ವಾರಿಯರ್ಸ್ಗೆ ಒಟ್ಟೂಗೂಡಿಸಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೋಂಡಿರುವುದು ಕೊರೊನಾಕ್ಕೆ ಆಮಂತ್ರಿಸಿದಂತೆ ಕಾಣುತ್ತಿತ್ತು. ಕೊರೊನಾ ವಾರಿಯರ್ಸ್ಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ..?
ಮಾಜಿ ಶಾಸಕ ಮುನಿರಾಜು ಎಡವಟ್ಟು

Please follow and like us: