ಮಾಸ್ಕ್ ಧರಿಸಲು ಕಷ್ಟಪಟ್ಟ ದಕ್ಷಿಣ ಆಫ್ರಿಕಾ ಅಧ್ಯಕ್ಷ

ಜೋಹಾನ್ಸ್ ಬರ್ಗ: ದಕ್ಷಿಣ ಆಫ್ರಿಕಾದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಧ್ಯಕ್ಷ ಸಿರಿಲ್ ರಾಮಫೋಸಾ ಮಾಸ್ಕ್ ಧರಿಸುವುದು ಹೇಗೆ ಎಂದು ತೋರಿಸಲು ಹೋಗಿ ಫುಲ್ ಟ್ರೋಲ್ ಆಗಿದ್ದಾರೆ.ಕೊರೊನಾ ಸೋಂಕು ತಡೆಯಲು ದಕ್ಷಿಣ ಆಫ್ರಿಕಾದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಮೇ ೧ರ ನಂತರ ದೇಶದಲ್ಲಿ ಲಾಕ್‌ಡೌನ್ ಅನ್ನು ಸ್ವಲ್ಪಮಟ್ಟಿಗೆ ಸಡಿಲಗೊಳಿಸಲಾಗುವುದು ಎಂದು ಘೋಷಿಸಿದ್ದು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.ತಮ್ಮ ಭಾಷಣ ಮುಗಿಯುತ್ತಿದ್ದಂತೆ ಮಾಸ್ಕ್ ಧರಿಸಲು ಮುಂದಾಗಿದ್ದಾರೆ. ಸರಿಯಾಗಿ ಮಾಸ್ಕ್ ಧರಿಸಲಾಗದೆ ಕಷ್ಟಪಟ್ಟಿದ್ದಾರೆ. ಈ ಕುರಿತ ವಿಡಿಯೋ ಸಖತ್ ವೈರಲ್ ಆಗಿದ್ದು ಕ್ಷಣ ಕಾಲ ಸಂತೋಷ ನೀಡಿದ್ದಕ್ಕೆ ದಕ್ಷಿಣ ಆಫ್ರಿಕಾ ಜನರು ಅಧ್ಯಕ್ಷರಿಗೆ ಧನ್ಯವಾದ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸಾಮಾಜಿಕ ಅಂತರಕ್ಕಾಗಿ ವಿಶೇಷ ಟೋಪಿ ಧರಿಸಿದ ಶಾಲಾ ಮಕ್ಕಳು

Wed Apr 29 , 2020
ಬೀಜಿಂಗ್: ಮೂರು ತಿಂಗಳ ಅವಧಿಯ ಸುದೀರ್ಘ ಲಾಕ್‌ಡೌನ್ ಮುಗಿಸಿ ಚೀನಾದಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ಈ ವೇಳೆ ಪರಸ್ಪರ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ವಿಶೇಷವಾಗಿ ವಿನ್ಯಾಸ ಮಾಡಲಾದ ‘ಒಂದು ಮೀಟರ್ ಟೋಪಿ’ಗಳನ್ನು ಧರಿಸಿ ಮಕ್ಕಳು ಶಾಲೆಗೆ ಬಂದಿದ್ದಾರೆ. ಈ ಟೋಪಿಗಳನ್ನು ಕಾರ್ಡ್ಬೋರ್ಡ್ ಶೀಟ್, ಕಡ್ಡಿಗಳನ್ನು ಬಳಸಿ ಮಾಡಲಾಗಿವೆ. ಟೋಪಿಯ ಎರಡೂ ತುದಿಯಲ್ಲಿ ಉದ್ದದ ಕಡ್ಡಿಗಳನ್ನು ಸಿಕ್ಕಿಸಲಾಗಿದ್ದು, ಇದು ಅಂತರ ಕಾಯ್ದುಕೊಳ್ಳಲು ನೆರವಾಗಲಿದೆ. ಇಂತಹ ವಿಚಿತ್ರ ವಿನ್ಯಾಸದ ಟೋಪಿಗಳನ್ನು ತೊಟ್ಟು ಮಕ್ಕಳು ಶಾಲೆಯಲ್ಲಿ […]

Advertisement

Wordpress Social Share Plugin powered by Ultimatelysocial