ಮಾಹಿತಿ ನೀಡಿದವರಿಗೆ ೧೧ ಸಾವಿರ ಬಹುಮಾನ

ಲಖನೌ: ಕೊರೊನಾ ಪತ್ತೆ ಪರೀಕ್ಷೆಗೆ ಒಳಗಾಗದೆ ತಲೆಮರೆಸಿಕೊಂಡು ಓಡಾಡುವ ತಬ್ಲಿಗಿ ಜಮಾತ್ ಸದಸ್ಯರ ಕುರಿತು ಮಾಹಿತಿ ನೀಡುವವರಿಗೆ ರೂ.೧೧ ಸಾವಿರ ನಗದು ಬಹುಮಾನ ನೀಡುವುದಾಗಿ ಉತ್ತರ ಪ್ರದೇಶದ ಸಲೀಮ್‌ಪುರದ ಬಿಜೆಪಿ ಸಂಸದ ರವೀಂದ್ರ ಕುಶ್ವಾಹ ಘೋಷಿಸಿದ್ದಾರೆ. ದೆಹಲಿಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆದಿದ್ದ ತಬ್ಲಿಗಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ ಅನೇಕರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ದೇಶದ ನಾನಾ ಕಡೆಗಳಿಂದ ಜನ ಆ ಸಮಾವೇಶದಲ್ಲಿ ಭಾಗವಹಿಸಿದ್ದರು. ಪರಿಣಾಮವಾಗಿ ದೇಶದ ವಿವಿಧೆಡೆಗಳಿಗೆ ಸೋಂಕು ಹರಡಿದೆ. ಅಂತಹವರು ತಮ್ಮ ಪ್ರಯಾಣದ ಇತಿಹಾಸದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಹಾಗೂ ಕೊರೊನಾ ಪರೀಕ್ಷೆಗೆ ಒಳಪಡಬೇಕು ಎಂದು ಸಂಸದರು ಹೇಳಿದ್ದಾರೆ. ಒಂದು ವೇಳೆ ಮಾಹಿತಿ ನೀಡದೇ ಇದ್ದಲ್ಲಿ ಅಂತಹವರ ಬಗ್ಗೆ ತಿಳಿಸುವವರಿಗೆ ನಗದು ಬಹುಮಾನ ನೀಡುವುದಾಗಿಯೂ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಆನ್ ಲೈನ್ನಲ್ಲಿ ಸಿನಿಮಾ ಬಿಡುಗಡೆ: ಥಿಯೇಟರ್ ಮಾಲೀಕರ ವಿರೋಧ

Sat Apr 25 , 2020
ಚೆನೈ:ಕಳೆದೊಂದು ತಿಂಗಳಿನಿAದ ಇಡಿ ಚಿತ್ರರಂಗವೇ ಕೆಲಸವಿಲ್ಲದೆ ಖಾಲಿ ಕುಳಿತಿವೆ. ಬೇಕಾದಷ್ಟೂ ಸಿನಿಮಾಗಳಿದ್ದರೂ ಲಾಕ್‌ಡೌನ್ ಚಿತ್ರರಂಗವನ್ನೆ ಸ್ತಬ್ದಗೊಳಿಸಿವೆ. ಇದರ ನಡುವೆ ಈಗಾಗಲೇ ಸಿದ್ಧವಾಗಿರುವ ಫಿಲ್ಮ್ಗಳು, ಪ್ರೇಕ್ಷಕರ ಮನಸೂರೆಗೊಳ್ಳಲು ಹೊಸ ದಾರಿ ಕಂಡುಕೊಳ್ಳುತ್ತಿವೆ. ಆದರೆ ಅದನ್ನು ಥಿಯೇಟರ್ ಮಾಲೀಕರು ಒಪ್ಪುತ್ತಿಲ್ಲ. ತಮಿಳಿನ ೨ಡಿ ಎಂಟರ್‌ಟೇನ್ಮೆAಟ್ ಜ್ಯೋತಿಕಾ ಅಭಿನಯದ ಪೊನ್ನಮಗಳ್ ವಂದಾಲ್ ಎನ್ನುವ ಸಿನಿಮಾವನ್ನು ಆನ್‌ಲೈನ್‌ನ ಅಮೆಜಾನ್‌ನಲ್ಲಿ ಮುಂದಿನ ತಿಂಗಳು ರಿಲೀಸ್ ಮಾಡಲು ಮುಂದಾಗಿದೆ. ಈ ಕಾರಣಕ್ಕೆ ಖ್ಯಾತ ನಟ ಸೂರ್ಯರ ಚಿತ್ರ ನಿರ್ಮಾಣ […]

Advertisement

Wordpress Social Share Plugin powered by Ultimatelysocial