ಮುಲಾಜಿಲ್ಲದೆ ಬಂಧಿಸಿ ಎಂದ ಸಿಟಿ ರವಿ

ಪಾದರಾಯನಪುರದಲ್ಲಿ ವೈದ್ಯಕೀಯ ಹಾಗೂ ಪೊಲೀಸ್ ಸಿಬ್ಬಂದಿ ವಿರುದ್ದ ದೌರ್ಜನ್ಯ ನಡೆಸುವ ಪ್ರಯತ್ನ ಮಾಡಿದವರನ್ನು ಮುಲಾಜಿಲ್ಲದೆ ಬಂಧಿಸಿ ಕಠಿಣ‌‌ ಕ್ರಮ ಜರುಗಿಸಬೇಕು ಎಂದು  ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂತಹವರ ನಿಯಂತ್ರಿಸದಿದ್ದರೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ.‌ ಹೀಗಾಗಿ ಈ ರೀತಿ ಪುಂಡಾಟ ಮಾಡಿದವರನ್ನು ಕೂಡಲೇ  ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು. ಗೃಹ ಸಚಿವರು ಇಂತಹವರನ್ನು ಮಟ್ಟ ಹಾಕಬೇಕು ಎಂದು ಒತ್ತಾಯ ಮಾಡಿದ್ದೇನೆ. ಇಂತ ಜನರಿಗೆ ಸಂಯಮದ ಪಾಠ ಅಗತ್ಯವಿಲ್ಲ. ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಉತ್ತರ ನೀಡಬೇಕುಆಹಾರದಲ್ಲಿ ವ್ಯತ್ಯಯ ಆಗುತ್ತಿದ್ದು. ಇದರಿಂದ ಗಲಾಟೆ ನಡೆಯುವ ಬಗ್ಗೆ ಗುಪ್ತಚರ ಇಲಾಖೆ ಮೊದಲೇ ಎಚ್ಚರಿಕೆ ನೀಡಿತ್ತು. ಆದರೆ, ಸ್ಥಳೀಯ ಪೊಲೀಸರು ಆ ಬಗ್ಗೆ ತಲೆಕೆಡೆಸಿಕೊಂಡಿರಲಿಲ್ಲ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಯಾರೋ ಮಾಡಿದ ಕೃತ್ಯಕ್ಕೆ ಸಮಾಜವನ್ನು ದೂಷಿಸುವುದು ಸರಿಯಲ್ಲ

Mon Apr 20 , 2020
ಯಾರೋ ಕೆಲವರು ಮಾಡಿದ ಕೃತ್ಯಕ್ಕೆ ಒಂದು ಸಮಾಜವನ್ನು ದೂಷಿಸುವುದು ಮತ್ತು ನಾಯಕರು ಪ್ರಚೋಧನಾಕಾರಿ ಹೇಳಿಕೆ ನೀಡುವುದು ಸರಿಯಲ್ಲ” ಎಂದು  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಹೇಳಿದ್ದಾರೆ. ಇಂದು  ಬೆಂಗಳೂರಿನಲ್ಲಿ ಪಾದರಾಯನಪುರ ಗಲಾಟೆ ಸಂಬಂಧಿತ ಮುಸ್ಲಿಂ ನಾಯಕರ ಸಭೆ ನಡೆಸಿದ ಬಳಿಕ ಮಾತನಾಡಿರುವ ಅವರು,, “ಯಾರೋ ವ್ಯಕ್ತಿಗಳು ಮಾಡಿದ ಕೃತ್ಯಕ್ಕೆ ಇಡೀ ಸಮಾಜವನ್ನು ದೋಷಿಸುವುದು ಸರಿಯಲ್ಲ. ಪಾದರಾಯನಪುರ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಸರ್ಕಾರ ತೆಗೆದುಕೊಳ್ಳುವ ಎಲ್ಲಾ ಒಳ್ಳೆ ಯ ನಿರ್ಧಾರಗಳಿಗೆ […]

Advertisement

Wordpress Social Share Plugin powered by Ultimatelysocial