ಗರಿಷ್ಠ ತಾಪಮಾನ.

ವದೆಹಲಿ: ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಭಾಗಶಃ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನವು 22 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಲಿದೆ.

ಈ ಹಿಂದೆ ರಾಜ್ಯದಲ್ಲಿ ಸತತವಾಗಿ 8ಗಳ ದಿನ ಕಾಲ ಶೀತ ಗಾಳಿ ಬೀಸಿದೆ.

12 ವರ್ಷಗಳ ಬಳಿಕ ಜನವರಿ ತಿಂಗಳಲ್ಲಿ ನಿರಂತರ ಕನಿಷ್ಠ ತಾಪಮಾನ ದಾಖಲಾಗಿದೆ. ಇಂದು ಕೊಂಚ ಮೊದಲಿನ ಸ್ಥಿತಿಗೆ ಮರಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಇಂದು ಬೆಳಗ್ಗೆ 8:30ರ ಸುಮಾರಿಗೆ ಶೇ.83ರಷ್ಟು ಗಾಳಿಯ ಆರ್ದ್ರತೆ ದಾಖಲಾಗಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಅಂಕಿಅಂಶಗಳ ಪ್ರಕಾರ, ಬೆಳಿಗ್ಗೆ 9 ಗಂಟೆಗೆ ಒಟ್ಟಾರೆ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯುಐ) 277 ಕಳಪೆ ಪ್ರಮಾಣದಲ್ಲಿ ದಾಖಲಾಗಿದೆ ಎಂದು ಐಎಂಡಿ ಹೇಳಿದೆ.

ದೆಹಲಿ ವಾಯು ಮಾಲಿನ್ಯವು ಅಲ್ಲಿನ ಮಕ್ಕಳ ಹಾಗೂ ವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೈಗಾರಿಕೆಗಳು ಹೊರಸೂಸುವಿಕೆಯ ಅನಿಲಗಳ ಪ್ರಮಾಣವು ಪರಿಸರದ ಮೇಲೆ ಕೆಟ್ಟ ಪರಿಣಾಮಕ್ಕೆ ಕಾರಣವಾಗಿದೆ. ಮಾಲಿನ್ಯಕಾರಕ ನಗರ ಎಂಬ ಕುಖ್ಯಾತಿಗೆ ಹೆಸರಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುಖ ನಿದ್ರೆಗೆ ಮಾಲೀಕನ ಕೈ ಆಶ್ರಯಿಸಿದ ʻನಾಯಿಮರಿʼ.

Fri Jan 20 , 2023
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಸಾಕು ಪ್ರಣಿಗಳು ಎಲ್ಲರ ಅಚ್ಚುಮೆಚ್ಚು. ಅವುಗಳೂ ಕೂಡ ಮನೆಯ ಸದಸ್ಯನಂತೇ. ಎಲ್ಲಾದ್ರೂ ದೂರದ ಊರಿಗೆ ಪ್ರಯಾಣಿಸಬೇಕಾದ್ರೆ, ಅವುಗಳನ್ನೂ ಸಹ ನಮ್ಮೊಂದಿಗೆ ಕರೆದೊಯ್ಯುವುದು ಸಾಮಾನ್ಯ. ಈಗ ಅಂತದ್ದೇ ಒಂದು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ, ಪುಟ್ಟ ನಾಯಿಮರಿಯೊಂದು ಬ್ಯಾಗ್‌ ಒಳಗೆ ತನ್ನ ದೇಹವನ್ನಿರಿಸಿದ್ದು, ತನ್ನ ಮುಖವನ್ನು ಮಾಲೀಕನ ಕೈ ಮೇಲಿರಿಸಿ ನಿದ್ರಿಸುತ್ತಿದೆ. ಸ್ವಲ್ಪ ಸಮಯದ ನಂತ್ರ, ಅದಕ್ಕೆ ಎಚ್ಚರವಾಗಿದ್ದು, ಸುತ್ತಮುತ್ತ ನೋಡುತ್ತಿರುವುದನ್ನು ನೋಡಬಹುದು. […]

Advertisement

Wordpress Social Share Plugin powered by Ultimatelysocial