ಮೇಕ್ ಇನ್ ಇಂಡಿಯಾಗೆ ಕೊರೊನಾ ವೈರಸ್ ವರವಾಗಿದೆ

ನವದೆಹಲಿ: ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ವಿವಿಧ ಚಟುವಟಿಕೆಗಳು ಆರಂಭವಾಗಿದ್ದು, ಇಂದೊಂದು ವರವಾಗಿ ಪರಿಣಮಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಜೈವಿಕ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ವರವೊಂದು ಸಾಂಕ್ರಾಮಿಕದ ವೇಷದಲ್ಲಿ ಭಾರತಕ್ಕೆ ಬಂದಿದೆ ಎಂದಿದ್ದಾರೆ.ಭಾರತದಲ್ಲಿ ಸಾಕಷ್ಟು ಚಟುವಟಿಕೆಗಳು ಪ್ರಾರಂಭವಾಗಿವೆ. ನಾವು ಪಿಪಿಇಗಳನ್ನು ತಯಾರಿಸುತ್ತಿದ್ದೇವೆ. ದೇಶದಲ್ಲಿ ನೂರಕ್ಕೂ ಹೆಚ್ಚು ಪಿಪಿಇ ತಯಾರಕರನ್ನು ಹೊಂದಿದಿದ್ದು, ಪ್ರತಿದಿನ ೧ ಲಕ್ಷದಿಂದ ೧.೫ ಲಕ್ಷ ಪಿಪಿಇಗಳನ್ನು ತಯಾರಿಸುತ್ತಿದ್ದೇವೆ ಎಂದಿದ್ದಾರೆ.ಹೊಸ ಔಷಧದ ಆವಿಷ್ಕಾರ ಅಥವಾ ಪ್ರಸ್ತುತ ಬಳಸುತ್ತಿರುವ ಔಷಧಿಗಳ ಯಶಸ್ವಿ ಪ್ರಯೋಗ. ಲಸಿಕೆ ಅಥವಾ ಸ್ಥಳೀಯ ಪರೀಕ್ಷಾ ಕಿಟ್‌ಗಳ ಆವಿಷ್ಕಾರದ ಬಗ್ಗೆ ಇಡೀ ದೇಶವೇ ಭಾರತೀಯ ವಿಜ್ಞಾನಿಗಳ ಕೊಡುಗೆಗಾಗಿ ಬಹಳ ಕುತೂಹಲದಿಂದ ಕಾಯುತ್ತಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಹೋರಾಟದಲ್ಲಿ ಪತ್ರಕರ್ತರ ಪಾತ್ರ ಪ್ರಮುಖ

Tue Apr 28 , 2020
ಮಾರಕ ಕೊರೊನಾ ವಿರುದ್ಧದ ಹೋರಾಟದಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್​ ಮೂಲಕ ಹೇಳಿದ್ದಾರೆ. ತಮ್ಮ ಜೀವ ಅಪಾಯದಲ್ಲಿದ್ದರೂ ಸಹ ಅದನ್ನು ಲೆಕ್ಕಿಸದೇ ಜನರಿಗೆ ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಮುದ್ರಣ ಹಾಗೂ ದೃಶ್ಯ ಮಾಧ್ಯಮದ ಪತ್ರಕರ್ತರಿಗೆ ಕನಿಷ್ಠ 25 ಲಕ್ಷ ರೂಪಾಯಿಗಳ ವಿಶೇಷ ಜೀವ ವಿಮಾ ಸೌಲಭ್ಯವನ್ನು ರಾಜ್ಯ ಸರ್ಕಾರ ಘೋಷಿಸಬೇಕು ಎಂದು ಹೇಳಿದ್ದಾರೆ.   Please follow and like us:

Advertisement

Wordpress Social Share Plugin powered by Ultimatelysocial