ಮೇ ಅಂತ್ಯಕ್ಕೆ ರಾಜ್ಯದಲ್ಲಿ 60 ಕೋವಿಡ್‌ ಪರೀಕ್ಷಾ ಲ್ಯಾಬ್‌ ಗಳು

ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಅಗತ್ಯವಿರುವ ಲ್ಯಾಬ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ ಎಂದು  ಸಚಿವ ಸುಧಾಕರ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಮೇ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ 60 ಕೋವಿಡ್‌ ಪರೀಕ್ಷಾ ಲ್ಯಾಬ್‌ಗಳನ್ನು ಸ್ಥಾಪನೆ ಮಾಡಲು ಸರ್ಕಾರ ಗುರಿ ಹೊಂದಿದೆ.  ರಾಜ್ಯದಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಗದಗ,ವಿಜಯಪುರ, ತುಮಕೂರು ಜಿಲ್ಲೆಗಳಲ್ಲೂ ಈಗ ಕೋವಿಡ್19 ಲ್ಯಾಬ್ ಕಾರ್ಯಾರಂಭ ಮಾಡಿವೆ. ಫೆಬ್ರವರಿಯಲ್ಲಿದ್ದ 2 ಲ್ಯಾಬ್ ನಿಂದ ಈಗ ನಾವು 26 ಲ್ಯಾಬ್‌ಗಳನ್ನು ಹೊಂದಿದ್ದು, ದಿನಕ್ಕೆ 5000 ಪರೀಕ್ಷೆ ಸಾಮರ್ಥ್ಯ ಪಡೆದಿದ್ದೇವೆ’ .  ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ತಪಾಸಣೆಯನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಅದಕ್ಕೆ ಅಧಿಕ ಸಂಖ್ಯೆಯ ಲ್ಯಾಬ್‌ಗಳ ಅಗತ್ಯವಿದ್ದು ಮೇ ಅಂತ್ಯಕ್ಕೆ 60 ಲ್ಯಾಬ್‌ಗಳನ್ನು ತೆರೆಯಲಾಗುತ್ತದೆ ಎಂದು ಟ್ವಿಟ್  ಮುಖಾಂತರ  ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರ ನೀಡುವ ಅಕ್ಕಿಯಿಂದ ಇಡ್ಲಿ-ದೋಸೆ ಮಾಡಿಕೊಂಡು ತಿಂದು ಕಾಲ ಕಳೆಯಿರಿ: ಶಿವಲಿಂಗೇಗೌಡರು

Fri May 1 , 2020
ಶಾಸಕ ಶಿವಲಿಂಗೇಗೌಡರು ಗ್ರಾಮೀಣ ಶೈಲಿಯ ಮಾತುಗಾರಿಕೆಗೆ ಪ್ರಸಿದ್ಧಿ..! ಸದನದ ಕಲಾಪ ವಿರಲಿ ಅಥವಾ ಗ್ರಾಮದಲ್ಲಿ ಭಾಷಣವೇ ಆಗಿರಲಿ ಜನರನ್ನು ತಮ್ಮತ್ತ ಸೆಳೆಯುವಲ್ಲಿ ವಿಭಿನ್ನ ಛಾಪು ಮೂಡಿಸುತ್ತಾರೆ. ಹಾಸನದಲ್ಲಿ ಮಾತನಾಡಿದ ಅವರು, ಸರ್ಕಾರ ಹಾಗೂ ನಮ್ಮಿಂದ ನಿಮಗೆ ಅಗತ್ಯ ನೆರವು ಸಿಗಲಿದೆ ‘ಹೇಗೋ …’ ಕೆಲದಿನಗಳ ಕಾಲ ಸರ್ಕಾರ ನೀಡುವ ಅಕ್ಕಿಯಿಂದ ಇಡ್ಲಿ-ದೋಸೆ ಮಾಡಿಕೊಂಡು ತಿಂದು ಕಾಲ ಕಳೆಯಿರಿ ಮುಂದಿನ ದಿನಗಳಲ್ಲಿ ತಿಂಗಳಿಗೆ ದುಪ್ಪಟ್ಟು ಸಂಪಾದನೆ ಮಾಡುವಿರಂತೆ’ ಎಂದು ತಮ್ಮದೇ ಶೈಲಿಯಲ್ಲಿ […]

Advertisement

Wordpress Social Share Plugin powered by Ultimatelysocial