ರಾಬರ್ಟ್ ಚಿತ್ರತಂಡ ಅಭಿಮಾನಿಗಳಿಗೆ ಒಂದಿಲ್ಲೊAದು ಕುತೂಹಲವನ್ನು ಮೂಡಿಸುತ್ತಲೇ ಇದೆ. ರಂಜಾನ್ ಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ರಾಬರ್ಟ್ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಚಿತ್ರದ ಹೊಸ ಕಲರ್ಫುಲ್ ಪೋಸ್ಟರ್ ರಿಲೀಸ್ ಮಾಡಿದೆ.
ಇದುವರೆಗೂ ರಿಲೀಸ್ ಆದ ಪೋಸ್ಟರ್ಗಳಲ್ಲಿ ೨ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದ ದರ್ಶನ್ ಈ ಪೋಸ್ಟರ್ನಲ್ಲಿ ಹೊಸ ಗೆಟಪ್ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಕ್ರಿಸ್ಮಸ್, ಸಂಕ್ರಾAತಿ, ಯುಗಾದಿ ಹಬ್ಬಗಳ ರೀತಿಯೆ ರಂಜಾನ್ ಪ್ರಯುಕ್ತವೂ ಹೊಸ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ದರ್ಶನ್ ಎಲ್ಲಾ ನಲ್ಮೆಯ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ನಮ್ಮ ರಾಬರ್ಟ್ ಚಿತ್ರದ ಪೋಸ್ಟರ್ ನಿಮಗಾಗಿ. ಎಲ್ಲರ ಜೀವನಶೈಲಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಚಿತ್ರವೂ ನಿಮ್ಮ ಮುಂದೆ ಬರಲಿದೆ ಎಂದು ಅಭಿಮಾನಿಗಳಿಗೆ ಶುಭಹಾರೈಸಿದ್ದಾರೆ.
ರಂಜಾನ್ ಹಬ್ಬಕ್ಕೆ ರಾಬರ್ಟ್ ಹೊಸ ಲುಕ್

Please follow and like us: