ರಾಮನಗರ ಜೈಲಿಗೆ ಆರೋಪಿಗಳು ಶಿಫ್ಟ್

ಬೆಂಗಳೂರು: ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕರ ತೀವ್ರ ವಿರೋಧದ ನಡುವೆಯೂ  ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿಗಳನ್ನ ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪಾದರಾಯನ ಪುರ ಗಲಭೆ ಪ್ರಕರಣದ 54 ಆರೋಪಿಗಳನ್ನು ನಿನ್ನೆ ರಾಮನಗರ ಕಾರಾಗೃಹಕ್ಕೆ ರವಾನಿಸಲಾಗಿತ್ತು. ಇವತ್ತು ಉಳಿದ 76 ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್​ ಮಾಡಲು ಸಿದ್ಧತೆ ನಡೆದಿದೆ.  ರಾಮನಗರ ಗ್ರೀನ್ ಝೋನ್ ಆಗಿರುವ ಹಿನ್ನೆಲೆ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗ್ತಿದೆ. ಅಲ್ಲಿನ ಕಾರಾಗೃಹಕ್ಕೆ ಶಿಫ್ಟ್ ಮಾಡುವ ಮುನ್ನ ಆರೋಪಿಗಳಿಗೆ ಕೋವಿಡ್- 19 ಪರೀಕ್ಷೆ ನಡೆಸಲಾಗುತ್ತದೆ.ನಿನ್ನೆ ಉಳಿದ 76 ಆರೋಪಿಗಳನ್ನು 3 ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಎಲ್ಲರಿಗೂ ಕೋವಿಡ್-19 ಟೆಸ್ಟ್ ಮಾಡಿಸಿ ಜೈಲಿಗೆ ಕಳುಹಿಸಿ ಎಂದು ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಕೋವಿಡ್-19 ಟೆಸ್ಟ್ ಮಾಡಿ ಆರೋಪಿಗಳನ್ನು ರಾಮನಗರ ಜೈಲಿಗೆ ರವಾನಿಸಲಾಗುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ಜುಬಿಲೆಂಟ್ ಕಾರ್ಖಾನೆಯಲ್ಲಿ ಕೊರೊನಾ ಭೀತಿ

Wed Apr 22 , 2020
 ಮೈಸೂರು : ನಂಜನಗೂಡು ಜ್ಯುಬಿಲೆಂಟ್ ಕಾರ್ಖಾನೆ ನೌಕರರಿಂದ ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಕಾರ್ಖಾನೆ ನೌಕರರ ಸಂಪರ್ಕ ಹೊಂದಿದ್ದ ಐದು ಗ್ರಾಮಗಳನ್ನ ಸೀಲ್ ಡೌನ್ ಮಾಡಲಾಗಿದೆ. ಕೂಗಲೂರು, ಬ್ಯಾಳೂರು, ದೇವರಸನಹಳ್ಳಿ, ಬಸಪುರ, ತಾಂಡಾಪುರ ಗ್ರಾಮಗಳನ್ನು ಸೀಲ್ ಡೌನ್ ಮಾಡಲು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಆದೇಶಿಸಿದ್ದಾರೆ. ಇನ್ನು ಸೀಲ್​ಡೌನ್​ ಆದ ಗ್ರಾಮಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಇನ್ನು ಜ್ಯುಬಿಲೆಂಟ್ ಕಾರ್ಖಾನೆಯ 52ನೇ ಸೋಂಕಿತನ ಸಂಪರ್ಕದಿಂದ ಈಗಾಗಲೇ 65 ಜನರು […]

Advertisement

Wordpress Social Share Plugin powered by Ultimatelysocial