ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮುಖ್ಯಸ್ಥ ಮಹಾಂತ್ ನೃತ್ಯ ಗೋಪಾಲ್ ದಾಸ್ ಅಯೋಧ್ಯೆಯಲ್ಲಿ ಇಂದಿನಿಂದ ರಾಮಮಂದಿರ ನಿರ್ಮಾಣದ ಕಾಮಗಾರಿ ಕಾರ್ಯ ಪ್ರರಂಭವಾಗಿದೆ ಹೇಳಿಕೆ ನೀಡಿದ್ದಾರೆ. ಈ ಕಾಮಗಾರಿ ವೇಳೆಯಲ್ಲಿ ಶಿವಲಿಂಗ ಸೇರಿದಂತೆ ವಿವಿಧ ಮಾದರಿಯ ಕಲ್ಲಿನ ಸ್ತಂಭಗಳು ಸಿಕ್ಕಿರುವುದರಿಂದ ಅವಷೇಶನಗಳನ್ನು ತೆಗೆಯುವ ಕೆಲಸ ಸಂಪೂರ್ಣವಾಗಿದೆ.ಇಲ್ಲಿಯವರೆಗೂ ಮಂದಿರ ನಿರ್ಮಾಣದ ಸ್ಥಳದಲ್ಲಿ ಭೂಮಿ ಸಮಮಟ್ಟ ಮಾಡುವ ಕಾರ್ಯ ನಡೆಯುತಿತ್ತು. ಮಾನಸಭವನದಲ್ಲಿರುವ ರಾಮಲಲ್ಲಾ ಹಾಗೂ ಬಾಲರಾಮನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಮಂದಿರ ನಿರ್ಮಾಣ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಇನ್ನೂ ಲಾಕ್ಡೌನ್ ಅವಧಿಯಲ್ಲಿ ಮಂದಿರ ನಿರ್ಮಾಣ ಕಾರ್ಯಕ್ಕೆ ಸುಮಾರು 4.6 ಕೋಟಿ ರೂಪಾಯಿ ದೇಣಿಗೆ ಸಂದಾಯವಾಗಿದೆ ಎಂದು ಹೇಳಿದ್ದಾರೆ.
ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ

Please follow and like us: