ವೆಡ್ಡಿಂಗ್‌ ಆನಿವರ್ಸರಿ  ಬೆಳ್ಳಿ ಹಬ್ಬಕ್ಕೆ ಜನ ಜಾತ್ರೆ..!

ಉತ್ತರ ಪ್ರದೇಶದ : ಉತ್ತರ ಪ್ರದೇಶದ ಅಲಿಗಢದಲ್ಲಿ ಕೊರೊನಾ ವೈರಸ್ ಕಂಟೈನ್‌ಮೆಂಟ್‌ ಝೋನ್ ಒಂದರಲ್ಲಿ ಸಂಭ್ರಮವೋ ಸಂಭ್ರಮ. ಸಾಮಾನ್ಯವಾಗಿ ಈ ವಲಯದಲ್ಲಿ ಮನೆಯಿಂದ ಹೊರಗೆ ಬರುವಂತೆಯೇ ಇಲ್ಲ. ಆದ್ರೆ, ವ್ಯಕ್ತಿಯೊಬ್ಬ ತನ್ನ 25ನೇ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ಇದೀಗ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಕಂಟೈನ್‌ಮೆಂಟ್‌ ಝೋನ್‌ನಲ್ಲಿ ಕಾನೂನು ಪಾಲಿಸದೆ, ಸಾಮಾಜಿಕ ಅಂತರ ಪಾಲಿಸದೆ 15ಕ್ಕೂ ಹೆಚ್ಚು ಜನರನ್ನು ಸೇರಿಸಿ ಬೇಜವಾಬ್ದಾರಿತನ ಮೆರೆದಿದ್ದಾನೆ. ವಿವಾಹ ವಾರ್ಷಿಕೋತ್ಸವದ ಬೆಳ್ಳಿ ಹಬ್ಬ ಆಚರಿಸಿದ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪವನ್ ಎಂಬ ಈ ಅಡುಗೆ ಭಟ್ಟ, ತನ್ನ ಮದುವೆಯಾಗಿ 25 ವರ್ಷವಾಗಿದೆ ಎಂಬ ಸಂಭ್ರಮದಲ್ಲಿ 15ಕ್ಕೂ ಹೆಚ್ಚು ಜನರನ್ನು ಸೇರಿಸಿ ರಸ್ತೆಯಲ್ಲೇ ಕುಣಿದು ಕುಪ್ಪಳಿಸಿದ್ದಾನೆ. ಈತನ ಮನೆ ಇರುವ ಪ್ರದೇಶ ಕಂಟೈನ್‌ಮೆಂಟ್‌ ಝೋನ್‌ನಲ್ಲಿ ಇದ್ದರೂ ಕೂಡಾ, ಇವರ್ಯಾರಿಗೂ ಕೊರೊನಾ ವೈರಸ್‌ ಭಯವೂ ಇಲ್ಲ, ಕಾನೂನಿನ ಭಯವೂ ಇಲ್ಲ.

Please follow and like us:

Leave a Reply

Your email address will not be published. Required fields are marked *

Next Post

ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫ್ ಖ್ಯಾತಿಯ ಮೆಬೀನಾ ಮೈಕೆಲ್ ದುರ್ಮರಣ

Wed May 27 , 2020
ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದ್ದ ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು ಸೀಸನ್ ೪ರ ಮೇಬಿನಾ ಮೈಕಲ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ರಾಷ್ಟಿçÃಯ ಹೆದ್ದಾರಿ ೭೫ರಲ್ಲಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಹೋಗುತ್ತಿದ್ದಾಗ ಟ್ರಾö್ಯಕ್ಟರ್‌ಗೆ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತ ನಡೆದ ಕೂಡಲೇ ಮಬೀನಾಗೆ ಪ್ರಥಮ ಚಿಕಿತ್ಸೆ ನೀಡಿ, ಬೆಂಗಳೂರಿನ ಆಸ್ಪತ್ರೆಗೆ ಕರೆದೋಯ್ಯುವ ವೇಳೆ ಮಾರ್ಗಮದ್ಯದಲ್ಲಿಯೇ ಸಾವನ್ನಪ್ಪಿದ್ದು, ಇನ್ನು ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ […]

Advertisement

Wordpress Social Share Plugin powered by Ultimatelysocial