ಸಮಂತಾ ನಟನೆಯ ‘ಶಾಕುಂತಲಂ’ 25 ವರ್ಷದ ವೃತ್ತಿ ಜೀವನಕ್ಕೆ ದೊಡ್ಡ ಹೊಡೆತ: ನಿರ್ಮಾಪಕ ದಿಲ್​ ರಾಜು

ತ್ತೀಚೆಗೆ ಸಮಂತಾ ನಟನೆಯ ಶಾಕುಂತಲಂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಸಿನಿಮಾ ಕಲೆಕ್ಷನ್ ವಿಷಯದಲ್ಲಿ ಕಮಾಲ್ ಮಾಡಲು ಹಿಂದೇಟು ಹಾಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ದಿಲ್ ರಾಜು 25 ವರ್ಷಗಳ ವೃತ್ತಿಜೀವನದಲ್ಲಿ ಶಾಕುಂತಲಂ ಬಹು ದೊಡ್ಡ ಹಿನ್ನೆಡೆ ಎಂದಿದ್ದಾರೆ.

ಗುಣಶೇಖರ್​ ನಿರ್ದೇಶನದ, ನೀಲಿಮಾ ಗುಣ (ಗುಣಶೇಖರ್​ ಮಗಳು) ಮತ್ತು ದಿಲ್​ ರಾಜು ನಿರ್ಮಿಸಿದ ಪೌರಾಣಿಕ ಶಾಕುಂತಲಂ ನಿರೀಕ್ಷಿತ ಮಟ್ಟ ತಲುಪುವಲ್ಲಿ ಹಿನ್ನೆಡೆಯಾಯಿತು. ಇದೀಗ ಚಿತ್ರ ಫ್ಲಾಪ್​ ಆದ ಬಗ್ಗೆ ದಿಲ್​ ರಾಜು ಪ್ರತಿಕ್ರಿಯಿಸಿದ್ದಾರೆ. ಶಾಕುಂತಲಂ ಫಲಿತಾಂಶವು ತಮ್ಮ 25 ವರ್ಷಗಳ ವೃತ್ತಿಜೀವನದಲ್ಲಿ ಬಹು ದೊಡ್ಡ ಹಿನ್ನೆಡೆ ಆಗಿದೆ ಎಂದು ಇತ್ತೀಚೆಗೆ ಅವರು ಯೂಟ್ಯೂಬ್​ ಚಾನಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

“ಶಾಕುಂತಲಂ ನನ್ನ 25 ವರ್ಷಗಳ ಸಿನಿಮಾ ವೃತ್ತಿ ಬದುಕಿಗೆ ದೊಡ್ಡ ಹೊಡೆತವನ್ನು ನೀಡಿದೆ. ಪ್ರೇಕ್ಷಕರು ನೀಡಿದ ತೀರ್ಪನ್ನು ಸ್ವಾಗತಿಸುತ್ತೇನೆ. ನಾನು ಈ ಸಿನಿಮಾದಲ್ಲಿ ನಂಬಿಕೆ ಇಟ್ಟಿದ್ದೆ. ಪ್ರೇಕ್ಷಕರು ಇದನ್ನು ಇಷ್ಟಪಟ್ಟಿದ್ದರೆ ಬೆಂಬಲಿಸುತ್ತಾರೆ. ಅವರು ಇಷ್ಟಪಡದಿದ್ದರೆ, ನನ್ನ ತೀರ್ಪು ತಪ್ಪು ಎಂದು ನಾನು ಭಾವಿಸುತ್ತೇನೆ. ಆ ತಪ್ಪು ಹೇಗೆ ಮತ್ತು ಎಲ್ಲಿ ನಡೆದಿದೆ ಎಂಬುದನ್ನು ಒಮ್ಮೆ ಪರಿಶೀಲಿಸಿ ಮುಂದೆ ಸಾಗುತ್ತೇನೆ. ‘ಶಾಕುಂತಲಂ’ ಚಿತ್ರದಲ್ಲಿ ನನ್ನ ತೀರ್ಪು ತಪ್ಪಾಗಿದೆ. ನನ್ನ ಸುದೀರ್ಘ ವೃತ್ತಿ ಜೀವನದಲ್ಲಿ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದೇನೆ. ಅವುಗಳಲ್ಲಿ ನಾಲ್ಕೈದು ಮಾತ್ರ ಸೋಲು ಕಂಡಿವೆ. ಆ ಸಾಲಿಗೆ ಶಾಕುಂತಲಂ ಸಿನಿಮಾ ಕೂಡ ಸೇರಿದೆ” ಎಂದರು.

“‘ಶತಮಾನಂಭವತಿ’ ಸಿನಿಮಾದ ಸಮಯದಲ್ಲಿ ನಾವು ಒಂದು ದಿನ ಮೊದಲು ಯುಎಸ್​ನಲ್ಲಿ ಪ್ರೀಮಿಯರ್ ಮಾಡಿದ್ದೆವು. ಅಲ್ಲಿ ಎಲ್ಲರಿಗೂ ಇಷ್ಟವಾಯಿತು. ನಾಲ್ಕು ದಿನಗಳ ಹಿಂದೆ ‘ಶಾಕುಂತಲಂ’ ತೋರಿಸಲಾಗಿತ್ತು. ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಇಷ್ಟಪಡುತ್ತಾರೆ, ಇನ್ನೂ ಕೆಲವರು ಇಷ್ಟಪಡುವುದಿಲ್ಲ. ಹೀಗಾಗಿ ಕೆಲವೊಂದು ಮಾತುಗಳನ್ನು ಕೇಳಬೇಕಾಗುತ್ತದೆ. ಹೆಚ್ಚಿನವರಿಗೆ ಆ ಚಿತ್ರ ಇಷ್ಟವಾಗದಿದ್ದರೆ ಅದು ಫ್ಲಾಪ್ ಆಗಿದೆ ಎಂದರ್ಥ. ಶುಕ್ರವಾರ ಮುಗಿದರೆ ಆ ಸಿನಿಮಾದ ಫಲಿತಾಂಶದ ಬಗ್ಗೆ ಯೋಚಿಸುವುದನ್ನು ನಿಲ್ಲಿಸುತ್ತೇನೆ. ಶನಿವಾರದಿಂದ ಹೊಸ ಸಿನಿಮಾಗಳತ್ತ ಗಮನ ಹರಿಸುತ್ತೇನೆ. ತಪ್ಪುಗಳು ಮರುಕಳಿಸದಂತೆ ಮುಂದಿನ ಪ್ರಾಜೆಕ್ಟ್‌ಗಳನ್ನು ಎರಡು ಬಾರಿ ಪರಿಶೀಲಿಸುತ್ತೇನೆ” ಎಂದು ಹೇಳಿದರು.

ತಮಿಳಿನ ಹಿಟ್​ ಸಿನಿಮಾ 96 ತೆಲುಗು ರಿಮೇಕ್​ನಲ್ಲೂ ತಮ್ಮ ಭವಿಷ್ಯ ತಪ್ಪಾಗಿದೆ ಎಂದು ನಿರ್ಮಾಪಕ ದಿಲ್​ ರಾಜು ನೆನಪಿಸಿಕೊಂಡರು. “ಆ ಸಿನಿಮಾವನ್ನು ಅಲ್ಲು ಅರ್ಜುನ್, ನಾನಿ ಸೇರಿದಂತೆ ಇನ್ನೂ ಕೆಲವರಿಗೆ ತೋರಿಸಿದರೆ ತುಂಬಾ ಒಳ್ಳೆಯದು ಎಂದಿದ್ದಾರೆ. ಆದರೆ ಆ ಸಮಯದಲ್ಲಿ, ಕೊರೊನಾದಿಂದಾಗಿ ಚಿತ್ರವನ್ನು ಹೆಚ್ಚು ಜನರು OTT ನಲ್ಲಿ ವೀಕ್ಷಿಸಿದರು. ಆ ನಂತರ ‘ಜಾನು’ ಬಿಡುಗಡೆಯಾಯಿತು. ಆದರೆ ’96’ ಸಿನಿಮಾ ನೋಡಿದ ಫೀಲ್ ಅನ್ನು ಪ್ರೇಕ್ಷಕರಿಗೆ ಈ ಸಿನಿಮಾದಿಂದ ಎಂಜಾಯ್ ಮಾಡಲಾಗಲಿಲ್ಲ. ‘ಜಾನು’ ಮತ್ತು ‘ಜೆರ್ಸಿ’ ಸಿನಿಮಾಗಳ ಬಗ್ಗೆ ನಾನು ಅರ್ಥಮಾಡಿಕೊಂಡಿದ್ದು ಹೀಗೆ” ಎಂದಿದ್ದಾರೆ.

“ಒಟಿಟಿಯಲ್ಲಿ ಬಿಡುಗಡೆಯಾದ ನಂತರ ಯಾವುದೇ ಚಿತ್ರವನ್ನು ರಿಮೇಕ್ ಮಾಡಬಾರದು. ಆದರೆ ಈ ಎರಡು ಚಿತ್ರಗಳ ಬಗ್ಗೆ ನಾವು ಮೊದಲೇ ನಿರ್ಧರಿಸಿದ್ದರಿಂದ ಹಿಂತಿರುಗಲು ಸಾಧ್ಯವಾಗಲಿಲ್ಲ. ಸದ್ಯ ರಾಮ್ ಚರಣ್ ಜೊತೆ ‘ಗೇಮ್ ಚೇಂಜರ್’ ಮಾಡುತ್ತಿದ್ದೇನೆ. ಇದಾದ ನಂತರ ಎನ್ ಟಿಆರ್ ಮತ್ತು ಪ್ರಭಾಸ್ ಜೊತೆ ಸಿನಿಮಾ ಮಾಡುತ್ತೇನೆ. ಆದರೆ ಅವರಿಗೆ ಈಗಿರುವ ಸಿನಿಮಾಗಳ ಶೂಟಿಂಗ್​ ಮುಗಿದ ನಂತರವೇ ಚಿತ್ರ ನಮ್ಮ ಬ್ಯಾನರ್​ನಲ್ಲಿ ಬರಲಿದೆ” ಎಂದು ದಿಲ್​ ರಾಜು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ನನ್ನ ಸಾವಿಗೆ ಕಾರಣ ಯಾರು ಅಲ್ಲ..!

Sun Apr 30 , 2023
ಈ ಜೀವನದ ಮೇಲೆ ಜಿಗುಪ್ಸೆ ಬಂದಿದೆ,  ನಾನೇ ಸ್ವ ಇಚ್ಛೆಯಿಂದ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ. ನಾನು ನನ್ನ ಕುಟುಂಬಕ್ಕೆ ಹಾಗೂ ಭೀಮೇಶ್ ನಾಯಕ್ ಮೇಲೆ‌ ದೂರು ನೀಡಿದ್ದೆ, ನಾನು ನೀಡಿದ್ದ ಸುಳ್ಳು ದೂರಿನಿಂದ ಪಶ್ಚಾತ್ತಾಪ ಪಟ್ಟಿದ್ದೇನೆ.  ಭೀಮೇಶ್ ನಾಯಕ್ ತುಂಬ ಸೂಕ್ಷ್ಮ ಮತ್ತು ಮುಗ್ಧ ವ್ಯಕ್ತಿ, ಅವರ ಮತ್ತು ನನ್ನ ಮಧ್ಯೆ ಯಾವುದೇ ದೈಹಿಕ ಸಂಪರ್ಕ ಇರುವುದಿಲ್ಲ. ನಾನು ಮಾಡಿದ ಈ ಸುಳ್ಳು ಕೇಸಿನಿಂದಾಗಿ ಅವರ ತಂದೆ […]

Advertisement

Wordpress Social Share Plugin powered by Ultimatelysocial