ಸಾಮಾಜಿಕ ಕಾರ್ಯಕರ್ತನಿಗೆ ೩.೬೭ಲಕ್ಷ ಪಂಗನಾಮ

ಹೈದರಬಾದ್: ಮೋಸ ಹೋಗೋರು ಇರೋವರೆಗೂ ಮೋಸ ಮಾಡುವವರು ಸಹ ಇದ್ದೇ ಇರ್ತಾರೆ. ಮನೆಗೆ ನುಗ್ಗಿ ದರೋಡೆ ಮಾಡೋರನ್ನ ಮುಖ ಕಂಡ್ರೆ ಗುರುತಾದ್ರೂ ಹಿಡೀಬಹುದು. ಆದ್ರೆ, ಯಾರಿಗೂ ಕಾಣಿಸಿದೆ ಕಂಪ್ಯೂಟರ್‌ನ ಮುಂದೆ ಕುಳಿತು ಚಳ್ಳೆ ಹಣ್ಣು ತಿನ್ನಿಸೋ ಖತರ್ನಾಕ್‌ಗಳನ್ನ ಹಿಡಿಯೋದು ಸುಲಭದ ಮಾತಲ್ಲ.
ಸದ್ಯ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ, ಸಾರ್ವಜನಿಕರು ಹಾಗೂ ಅನೇಕ ಸಂಘ ಸಂಸ್ಥೆಗಳೂ ನೆರವಾಗುತ್ತಿವೆ. ಇದೇ ರೀತಿ ಹೈದರಾಬಾದ್‌ನ ರ‍್ರೇಡಪಲ್ಲಿಯ ವಿಶ್ವನಾಥನ್ ಎನ್ನುವ ಸಾಮಾಜಿಕ ಕಾರ್ಯಕರ್ತರೊಬ್ಬರು ಇಂಥವರಿಗೆ ಅನುಕೂಲವಾಗಲಿ ಎಂದು ಮಾಸ್ಕ್ ಮತ್ತು ಗ್ಲೌಸ್‌ಗಳನ್ನ ಹಂಚಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು ಇಂಡಿಯನ್ ಮಾರ್ಟ್ ಎಂಬ ಇ-ಕಾಮರ್ಸ್ ಸೈಟ್‌ನ ಮೊರೆ ಹೋಗಿದ್ದರು. ಅಲ್ಲಿ ತಮಗೆ ಅವಶ್ಯಕತೆ ಇದ್ದ ವಸ್ತುಗಳ ಬಗ್ಗೆ ಹುಡುಕಾಟ ನಡೆಸಿದ್ದಾರೆ ಅಷ್ಟೇ. ನಂತರ ಅವರಿಗೆ ಲೂಯಿಸ್ ರೈಸ್ ಎನ್ನುವ ವ್ಯಕ್ತಿ ಕರೆ ಮಾಡಿ, ತಾನು ಯುನೈಟೆಡ್ ಕಿಂಗ್‌ಡಮ್‌ನವನು. ನಿಮಗೆ ಪಿಪಿಇ ಕಿಟ್‌ಗಳನ್ನು ಸಪ್ಲೈ ಮಾಡ್ತೀನಿ ಅಂತ ಹೇಳಿದ್ದಾನೆ. ಇದಕ್ಕಾಗಿ ನೀವು ಹಣವನ್ನ ಮುಂಗಡವಾಗಿಯೇ ನನ್ನ ಬ್ಯಾಂಕ್ ಅಕೌಂಟ್‌ಗೆ ಹಾಕಬೇಕಾಗುತ್ತೆ ಎಂದಿದ್ದಾನೆ.
ಹೇಗಿದ್ರೂ ಪಿಪಿಇ ಕಿಟ್‌ಗಳು ಬರುತ್ತಲ್ವಾ ಅಂತ ವಿಶ್ವನಾಥನ್ ಆನ್‌ಲೈನ್‌ನಲ್ಲಿ ೩.೬ ಲಕ್ಷ ರೂಪಾಯಿ ಹಣವನ್ನ ಹಾಕಿದ್ದಾರೆ. ಆಮೇಲೆ ಪಿಪಿಇ ಕಿಟ್ ಕಳಿಸಬೇಕಾದ ಆಸಾಮಿ ಪತ್ತೆಯೇ ಇಲ್ಲ. ಲೂಯಿಸ್ ಈಗ ವಿಶ್ವನಾಥನ್ ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ. ಸದ್ಯ ಈ ಬಗ್ಗೆ ಸೈಬರ್ ಕ್ರೈಮ್ ಪೊಲೀಸರಲ್ಲಿ ವಿಶ್ವನಾಥನ್ ದೂರು ದಾಖಲಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರದ ವಿರುದ್ಧ ಕಮಲ್ ಹಾಸನ್ ಗರಂ

Wed May 6 , 2020
ಕರ್ನಾಟಕ ಸರ್ಕಾರ ಬಾರ್ ಓಪನ್ ಮಾಡಿ ಮದ್ಯಪ್ರಿಯರಿಗೆ ಕೊರೋನಾ ಗಿಫ್ಟ್ ನೀಡಿದ್ದಾರೆ. ಜನ ಜೀವಭಯದ ಜೊತೆಯೇ ಭರ್ಜರಿಯಾಗಿ ಎಣ್ಣೆ ಹೊಡಿತ್ತಿದ್ದಾರೆ. ಕರ್ನಾಟಕದ ನಿರ್ಧಾರ ನೋಡಿ ಈಗ ತಮಿಳುನಾಡು ಸರ್ಕಾರ ಕೂಡಾ ಬಾರ್ ಓಪನ್ ಮಾಡೋದಕ್ಕೆ ತಯಾರಿ ನಡೆಸಿದೆ. ಈಗಾಗ್ಲೇ ಆರ್ಥಿಕ ಸ್ಥಿತಿ ನೆಲಕಚ್ಚಿರೋದ್ರಿಂದ ಸರ್ಕಾರಗಳು ಅಬಕಾರಿ ಇಲಾಖೆ ಮೇಲೆ ಕಣ್ಣು ಹಾಯಿಸಿವೆ. ಮೇ ಏಳರ ನಂತ್ರ ತಮಿಳುನಾಡಿನಲ್ಲಿ ಬಾರ್ ಓಪನ್ ಮಾಡೋದಕ್ಕೆ ಸರ್ಕಾರ ಯೋಚಿಸಿದೆ. ಇದರ ವಿರುದ್ಧ ನಟ ಕಮಲ್ […]

Advertisement

Wordpress Social Share Plugin powered by Ultimatelysocial