ಈ” ಮಾರ್ಗಗಳಲ್ಲಿ ಮಾರ್ಚ್ 4 ರವರೆಗೆ ರೈಲುಗಳನ್ನು ರದ್ದು ಮಾಡಿದ ಭಾರತೀಯ ರೈಲ್ವೆ, ಏಕೆ?

ವದೆಹಲಿ, ಫೆಬ್ರವರಿ, 22: ಲಕ್ನೋ ಮತ್ತು ಗೋರಖ್‌ಪುರ ರೈಲು ವಿಭಾಗಗಳಲ್ಲಿ ಇಂಟರ್‌ಲಾಕಿಂಗ್ ಮತ್ತು ಡಬ್ಲಿಂಗ್ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಭಾರತೀಯ ರೈಲ್ವೇಯು ಮೈಲಾನಿ-ಗೋರಖ್‌ಪುರ ಮಾರ್ಗದಲ್ಲಿ ಹಲವಾರು ರೈಲುಗಳನ್ನು ರದ್ದುಗೊಳಿಸಿ ಅವುಗಳನ್ನು ಬೇರೆಡೆಗೆ ತಿರುಗಿಸಿದೆ.

ಈಶಾನ್ಯ ರೈಲ್ವೆಯ ಲಕ್ನೋ ಮತ್ತು ಗೋರಖ್‌ಪುರ ವಿಭಾಗದ ದಲಿಗಂಜ್-ಬಾದ್‌ಶಾನಗರ-ಗೋಮ್ತಿನಗರ-ಮಲ್ಹೌರ್ ನಿಲ್ದಾಣಗಳ ಹಳಿಗಳನ್ನು ದ್ವಿಗುಣಗೊಳಿಸುವ ಕಾರ್ಯ ನಡೆಯಲಿದೆ. ಆದ್ದರಿಂದ ಕೆಲವು ರೈಲುಗಳ ಮಾರ್ಗಗಳನ್ನು ಬದಲಾಯಿಸಲು ರೈಲ್ವೇ ಇಲಾಖೆ ಮುಂದಾಗಿದೆ. ಲಕ್ನೋ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹೇಶ್ ಗುಪ್ತಾ ಈ ಬಗ್ಗೆ ಮಾತನಾಡಿ, ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ.

ರೈಲು ಸಂಖ್ಯೆ, ರದ್ದಾಗುವ ಮಾರ್ಗಗಳು, ದಿನಾಂಕ

1. ರೈಲು ನಂಬರ್‌ 05492: ಮೈಲಾನಿ- ಸೀತಾಪುರ್ ಎಕ್ಸ್‌ಪ್ರೆಸ್ (ಮಾರ್ಚ್ 1 ರಿಂದ ಮಾರ್ಚ್ 3ರವರೆಗೆ ಸಂಚಾರ ರದ್ದಾಗಲಿದೆ)

2. ರೈಲು ನಂಬರ್ 22531: ಛಪ್ರಾ-ಮಥುರಾ ಎಕ್ಸ್‌ಪ್ರೆಸ್ (20, 24, 27 ಫೆಬ್ರವರಿ, 01 ಮತ್ತು ಮಾರ್ಚ್ 3ರಂದು ರದ್ದಾಗಲಿದೆ)

3. ರೈಲು ನಂಬರ್ 22532: ಮಥುರಾ-ಛಾಪ್ರಾ ಎಕ್ಸ್‌ಪ್ರೆಸ್ (20, 24, 27 ಫೆಬ್ರವರಿ, 01 ಮತ್ತು ಮಾರ್ಚ್ 03)

4. ರೈಲು ನಂಬರ್ 15010: ಮೈಲಾನಿ- ಗೋರಖ್‌ಪುರ ಎಕ್ಸ್‌ಪ್ರೆಸ್ (ಫೆಬ್ರವರಿ 21- ಮಾರ್ಚ್ 4)

5. ರೈಲು ನಂಬರ್ 15009: ಗೋರಖ್‌ಪುರ- ಮೈಲಾನಿ ಎಕ್ಸ್‌ಪ್ರೆಸ್ (ಫೆಬ್ರವರಿ 20 ರಿಂದ ಮಾರ್ಚ್ 3)

6. ರೈಲು ನಂಬರ್- 05085: MLN-LJN ಎಕ್ಸ್‌ಪ್ರೆಸ್ (ಮಾರ್ಚ್ 1 ರಿಂದ ಮಾರ್ಚ್ 3)

7. ರೈಲು ನಂಬರ್ 05086: LJN-MLN ಎಕ್ಸ್‌ಪ್ರೆಸ್ (ಮಾರ್ಚ್ 1 ರಿಂದ ಮಾರ್ಚ್ 3)

8. ರೈಲು ನಂಬರ್ 05491: ಮೈಲಾನಿ- ಸೀತಾಪುರ್ ಎಕ್ಸ್‌ಪ್ರೆಸ್ (ಮಾರ್ಚ್ 1 ರಿಂದ ಮಾರ್ಚ್ 3)

9. ರೈಲು ನಂಬರ್ 15069: ಗೋರಖ್‌ಪುರ-ಐಶ್‌ಬಾಗ್ ಎಕ್ಸ್‌ಪ್ರೆಸ್ (ಫೆಬ್ರವರಿ 20 ರಿಂದ ಮಾರ್ಚ್ 4)

10. ರೈಲು ನಂಬರ್ 12532: ಲಕ್ನೋ Jn-ಗೋರಖ್‌ಪುರ ಎಕ್ಸ್‌ಪ್ರೆಸ್ (ಫೆಬ್ರವರಿ 20 ರಿಂದ ಮಾರ್ಚ್ 3)

11. ರೈಲು ನಂಬರ್ 15054: ಲಕ್ನೋ Jn – ಛಪ್ರಾ ಎಕ್ಸ್‌ಪ್ರೆಸ್ (ಫೆಬ್ರವರಿ 26 ರಿಂದ ಮಾರ್ಚ್ 2)

12. ರೈಲು ನಂಬರ್09566: ಭಾವನಗರ ಟರ್ಮಿನಸ್ -ಜೆಟಲ್‌ಸರ್ ಪ್ಯಾಸೆಂಜರ್ (ಫೆಬ್ರವರಿ 20)

13. ರೈಲು ನಂಬರ್ 09565: ಜೆಟಲ್‌ಸರ್ – ಭಾವನಗರ ಟರ್ಮಿನಸ್ ಪ್ಯಾಸೆಂಜರ್ (ಫೆಬ್ರವರಿ 20)

ರೈಲುಗಳು ಸಂಚರಿಸುವ ಮಾರ್ಗಗಳ ವಿವರ

1. ರೈಲು ನಂಬರ್ 02564: ನವದೆಹಲಿ-ಬರೌನಿ ವಿಶೇಷ ರೈಲು (ಫೆಬ್ರವರಿ 20 ರಿಂದ ಮಾರ್ಚ್ 02)

2. ರೈಲು ನಂಬರ್ 02570: ದರ್ಭಾಂಗ ವಿಶೇಷ ರೈಲು (ಫೆಬ್ರವರಿ 21 ರಿಂದ ಮಾರ್ಚ್ 03)

3. ರೈಲು ನಂಬರ್ 02569: ದರ್ಭಾಂಗಾ-ನವದೆಹಲಿ ವಿಶೇಷ ರೈಲು (ಫೆಬ್ರವರಿ 21 ರಿಂದ ಮಾರ್ಚ್ 03)

4. ರೈಲು ನಂಬರ್ 02563: ಬರೌನಿ-ನವದೆಹಲಿ ವಿಶೇಷ ರೈಲು (ಫೆಬ್ರವರಿ 20 ರಿಂದ ಮಾರ್ಚ್ 02)

5. ರೈಲು ನಂಬರ್12591: ಗೋರಖ್‌ಪುರ-ಯಶವಂತಪುರ ಎಕ್ಸ್‌ಪ್ರೆಸ್ (25 ಫೆಬ್ರವರಿ 2023)

6. ರೈಲು ನಂಬರ್ 12566: ನವದೆಹಲಿ-ದರ್ಬಂಗಾ ಎಕ್ಸ್‌ಪ್ರೆಸ್ (ಫೆಬ್ರವರಿ 27 ರಿಂದ ಮಾರ್ಚ್ 02, 2023)

7. ರೈಲು ನಂಬರ್ 22922: ಗೋರಖ್‌ಪುರ-ಬಾಂದ್ರಾ ಟರ್ಮಿನಸ್ ಎಕ್ಸ್‌ಪ್ರೆಸ್ (28 ಫೆಬ್ರವರಿ)

8. ರೈಲು ನಂಬರ್ 05087: ಮೈಲಾನಿಯಿಂದ ಡಾಲಿಗಾನಿ ಎಕ್ಸ್‌ಪ್ರೆಸ್ (ಮಾರ್ಚ್ 1 ರಿಂದ 3)

ಕಾರಗಾರಿ ನಡೆಯುವ ಕಾರಣ ಕೆಲವೊಂದು ರೈಲುಗಳ ಸಂಚಾರವನ್ನು ರದ್ದು ಮಾಡಿ, ಹಾಗೆಯೇ ರದ್ದು ಮಾಡಿದ ರೈಲುಗಳನ್ನು ಬೇರೆಡೆಗೆ ಓಡಿಸಲು ಭಾರತೀಯ ರೈಲ್ವೇ ನಿರ್ಧಾರ ಮಾಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶೀಘ್ರದಲ್ಲೇ ಭಾರತದಲ್ಲೂ ಟರ್ಕಿಯಂತಹ ಪ್ರಬಲ ಭೂಕಂಪ ಸಂಭವಿಸುವ ಸಾಧ್ಯತೆ; ವಿಜ್ಞಾನಿಯಿಂದ ಎಚ್ಚರಿಕೆ

Wed Feb 22 , 2023
ಹೈದರಾಬಾದ್: ಶೀಘ್ರದಲ್ಲೇ ಹಿಮಾಚಲ, ಉತ್ತರಾಖಂಡದಲ್ಲೂ ಟರ್ಕಿಯಂತಹ ಪ್ರಬಲ ಭೂಕಂಪ ಸಂಭವಿಸಬಹುದು ಎಂದು ರಾಷ್ಟ್ರೀಯ ಭೂ ಭೌತಶಾಸ್ತ್ರ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಎನ್.ಪೂರ್ಣಚಂದ್ರರಾವ್ ಎಚ್ಚರಿಕೆ ನೀಡಿದ್ದಾರೆ. ಉತ್ತರಾಖಂಡ ಪ್ರದೇಶದಲ್ಲಿ ಮೇಲ್ಮೈ ಅಡಿಯಲ್ಲಿ ಸಾಕಷ್ಟು ಉದ್ವಿಗ್ನತೆ ಸೃಷ್ಟಿಯಾಗುತ್ತಿದೆ. ದೊಡ್ಡ ಭೂಕಂಪ ಸಂಭವಿಸಿದಾಗ ಮಾತ್ರ ಈ ಉದ್ವಿಗ್ನತೆ ದೂರವಾಗುತ್ತದೆ. ವಿನಾಶವು ಒಂದು ಭೌಗೋಳಿಕ ಪ್ರದೇಶದಿಂದ ಇನ್ನೊಂದಕ್ಕೆ ಭಿನ್ನವಾಗಿರುವ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ. ಆದ್ರೆ, ವರದಿಯ ಪ್ರಕಾರ, ಭೂಕಂಪದ ದಿನಾಂಕ ಮತ್ತು ಸಮಯವನ್ನು […]

Advertisement

Wordpress Social Share Plugin powered by Ultimatelysocial