ವಿಟಮಿನ್ ಎ, ಸಿ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ನಲ್ಲಿವೆ!

ಹಲಸಿನ ಹಣ್ಣು ಎಷ್ಟು ರುಚಿಕರವಾಗಿರುತ್ತದೆಯೋ ಅದೇ ರೀತಿ ಹಲಸಿನ ಕಾಯಿಯ ಮೇಲೋಗರಗಳು ಕೂಡ ಬಾಯಲ್ಲಿ ನೀರು ತರಿಸುತ್ತವೆ. ವಿಟಮಿನ್ ಎ, ಸಿ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಹಲಸಿನ ಹಣ್ಣಿನಲ್ಲಿವೆ. ಆದರೆ ಹಲಸಿನ ಹಣ್ಣು ತಿಂದ ನಂತರ ಕೆಲವೊಂದು ವಸ್ತುಗಳ ಸೇವನೆ ನಿಷಿದ್ಧ.

ಅವುಗಳನ್ನು ಸೇವಿಸಿದರೆ ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು.

ಪಪ್ಪಾಯ : ಹಲಸಿನ ಹಣ್ಣು ಅಥವಾ ಹಲಸಿನ ಕಾಯಿಯಿಂದ ಮಾಡಿದ ಅಡುಗೆಗಳನ್ನು ತಿಂದ ಮೇಲೆ ಪಪ್ಪಾಯ ತಿನ್ನಬಾರದು. ಅಕಸ್ಮಾತ್‌ ತಿಂದರೆ ಚರ್ಮದ ಅಲರ್ಜಿ ಉಂಟಾಗಬಹುದು. ಅಲ್ಲದೆ ಲೂಸ್‌ ಮೋಷನ್‌ ಸಮಸ್ಯೆಯಾಗುವ ಸಾಧ್ಯತೆಯೂ ಇರುತ್ತದೆ.

ಹಾಲು: ಹಲಸಿನ ಹಣ್ಣು ತಿಂದ ಮೇಲೆ ಅನೇಕರು ಹಾಲು ಕುಡಿಯುತ್ತಾರೆ, ಆದರೆ ಎಂದಿಗೂ ಈ ರೀತಿ ಮಾಡಬೇಡಿ. ಇದು ಹೊಟ್ಟೆಯಲ್ಲಿ ಊತದ ಜೊತೆಗೆ ಚರ್ಮದ ದದ್ದುಗಳಿಗೆ ಕಾರಣವಾಗಬಹುದು. ಅನೇಕರಿಗೆ ಬಿಳಿ ಚುಕ್ಕೆಗಳ ಸಮಸ್ಯೆ ಶುರುವಾಗುತ್ತದೆ.

ಬೆಂಡೆಕಾಯಿ: ಹಲಸಿನ ಹಣ್ಣು ತಿಂದ ಮೇಲೆ ಬೆಂಡೆಕಾಯಿ ಸೇವಿಸಿದ್ರೆ ನಿಮ್ಮ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವ ಅಪಾಯವಿರುತ್ತದೆ. ಇದಲ್ಲದೆ ಆಸಿಡಿಟಿ ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ.

ಪಾನ್:‌ ಹೆಚ್ಚಿನವರಿಗೆ ಊಟವಾದ ನಂತರ ಪಾನ್ ತಿನ್ನುವ ಅಭ್ಯಾಸವಿರುತ್ತದೆ. ಊಟಕ್ಕೆ ನೀವು ಹಲಸಿನ ಮೇಲೋಗರ ಅಥವಾ ಹಲಸಿನ ಹಣ್ಣಿನ ತಿನಿಸುಗಳನ್ನು ಸೇವಿಸಿದ್ದರೆ ಊಟವಾದ ಬಳಿಕ ಪಾನ್‌ ತಿನ್ನಬೇಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಐಎಸ್‌ಎಫ್‌ ಅಧಿಕಾರಿಗಳ ವಿರುದ್ಧ ನಟಿಯ ಪತಿ ದೂರು ನೀಡಿದ್ದಾರೆ.

Mon Apr 11 , 2022
ಬಾಲಿವುಡ್ ನಟಿ ಹಾಗೂ ಆಕೆಯ ಪತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಸಿಐಎಸ್‌ಎಫ್‌ ಅಧಿಕಾರಿಗಳ ವಿರುದ್ಧ ನಟಿಯ ಪತಿ ದೂರು ನೀಡಿದ್ದಾರೆ. ಬಾಲಿವುಡ್ ನಟಿ ಆಯೆಷಾ ಟಾಕಿಯಾ ಹಾಗೂ ಅವರ ಪತಿ ಫರ್ಹಾನ್ ಆಜ್ಮಿ ಹಾಗೂ ಅವರ ಪುತ್ರ ಗೋವಾದಿಂದ ಮುಂಬೈಗೆ ವಾಪಸ್ಸಾಗಬೇಕಾದರೆ ಗೋವಾ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳಿಂದ ಕಿರುಕುಳ ಅನುಭವಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಆಯೆಷಾ ಟಾಕಿಯಾ ಪತಿ ಫರ್ಹಾಣ್ ಆಜ್ಮಿ, ಗೋವಾ ವಿಮಾನ ನಿಲ್ದಾಣದಲ್ಲಿ ಆರ್‌ಪಿ […]

Advertisement

Wordpress Social Share Plugin powered by Ultimatelysocial