ಸಾವಿನ ಬಾಗಿಲು ಬಡಿದು ಬಂದಿದ್ದ ಬ್ರಿಟನ್ ಪ್ರಧಾನಿ

ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕಾಯಿಲೆ ಎದುರಿಸಿದ ಸನ್ನೀವೇಶಗಳನ್ನು ಬ್ರಿಟನ್‌ನ ದಿ ಸನ್ ಎಂಬ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದಿದ್ದು, ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂಬ ಅರಿವಾಗಿದ್ದು, ವೈದ್ಯರು ಸಾವಿನ ಘೋಷಣೆಗೆ ಸಿದ್ಧರಾಗಿದ್ದ ವಿಷಯವನ್ನುಹಂಚಿಕೊಂಡಿದ್ದಾರೆ . ಸ್ಟಾಲಿನ್ ಮಾದರಿಯ ಸಾವಿನ ಸನ್ನಿವೇಶವನ್ನು ನಿಭಾಯಿಸಲು ವೈದ್ಯರು ಸಿದ್ಧತೆ ಮಾಡುತ್ತಿದ್ದರು. ಒಂದು ವೇಳೆ ಪರಿಸ್ಥಿತಿ ಕೈಮೀರಿ ಹೋದರೆ ಏನು ಮಾಡೋದು ಎಂದು ವೈದ್ಯರು ಚರ್ಚಿಸುತ್ತಿದ್ದರು. ನಾನು ಉತ್ತಮ ಸ್ಥಿತಿಯಲ್ಲಿರಲಿಲ್ಲ. ಸಾವಿನ ಘೋಷಣೆ ಮಾಡಲು ದಿಢೀರ್ ವ್ಯವಸ್ಥೆಗಳು ನಡೆಯುತ್ತಿವೆ ಎಂಬುವುದು ಮಾತ್ರ ನನಗೆ ಗೊತ್ತಿತ್ತು. ಎಂದು ಬೋರಿಸ್ ಜಾನ್ಸನ್ ವಿವರಿಸಿದ್ದಾರೆ. ಈ ಕಾಯಿಲೆಯಿಂದ ಪಾರಾಗುವುದು ಹೇಗೆ ಎಂದು ಚಿಂತಿಸುತ್ತಿದ್ದ ನಾನು, ಸಾಯುತ್ತೇನೆ ಎಂದು ಯೋಚನೆ ಮಾಡಲಿಲ್ಲ. ಆಸ್ಪತ್ರೆಯಲ್ಲಿ ನನಗೆ ಲೀಟರ್ ಗಟ್ಟಲೆ ಆಕ್ಷಿಜನ್ ನೀಡುತ್ತಿದ್ದರು. ಕಾಯಿಲೆ ಭಾದಿಸುತ್ತಿದ್ದಾಗ ನಾನು ನಿರಾಶೆಗೊಂಡಿದ್ದೆ. ಐಸಿಯುಗೆ ನನ್ನನ್ನು ಸ್ಥಳಾಂತರಿಸಿ, ಆಕ್ಷಿಜನ್ ವ್ಯವಸ್ಯೆಯಲ್ಲಿಡುವುದೋ, ಬೇಡವೋ ಎಂದು ವೈದ್ಯರು ಸಮಾಲೋಚಿಸುತ್ತಿದ್ದರು. ಪರಿಸ್ಥಿತಿ ಸ್ವಲ್ಪ ಕಷ್ಟವಾಗಿದೆ ಎಂದಾಗ ನನಗೆ ವಾಸ್ತವದ ಅರಿವಾಯಿತು.
ಆರಂಭದಲ್ಲಿ ನಾನು ಆಸ್ಪತ್ರಗೆ ಹೋಗಲು ನಿರಾಕರಿಸಿದ್ದೆ. ಆದರೆ ನನ್ನ ದೇಹದಲ್ಲಿ ಆಕ್ಷಿಜನ್ ಪ್ರಮಾಣ ಕಡಿಮೆಯಾಗಿದ್ದರಿಂದ ನನಗೆ ಆಸ್ಪತ್ರೆಗೆ ದಾಖಲಾಗಲು ಒತ್ತಾಯಿಸಿದರು. ಅಂದು ಕೈಗೊಂಡ ನಿರ್ಧಾರ ಸರಿ ಇತ್ತು ಎಂದು ನನಗೆ ಈಗ ಅರ್ಥವಾಗಿದೆ. ನನಗೆ ಕೋವಿಡ್ ತಗುಲಿದ್ದು, ಗುಣಮುಖರಾಗಿದ್ದನ್ನು ಮರೆಲಾಗದು ಎಂದು ಜಾನ್ಸನ್ ಭಾವುಕರಾದರು.


ಮಾರ್ಚ್ ೨೭ ರಂದು ಜಾನ್ಸನ್ ಕೋವಿಡ್‌ಗೆ ತುತ್ತಾಗಿದ್ದಾರೆ ಎಂದು ಘೋಷಿಸಲಾಯಿತು. ಒಂದು ವಾರ ಪ್ರತ್ಯೇಕ ವಾಸದಲ್ಲಿಡಲಾಯಿತು. ನಂತರ ಏ.೫ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ಮೊದಲ ದಿನಕ್ಕೆ ಅವರನ್ನು ನಿಗಾ ಘಟಕದಲ್ಲಿಡಲಾಯಿತು. ವೈದ್ಯರ ಸತತ ಪ್ರಯತ್ನದಿಂದ ಜಾನ್ಸನ್ ಗುಣಮುಖರಾಗಿ ಏ.೧೨ರಂದು ಆಸ್ಪತ್ರೆಯಿಂದ ಹೊರ ಬಂದರು. ಜಾನ್ಸನ್ ಕಳೆದ ಸೋಮವಾರ ಕೆಲಸಕ್ಕೆ ಹಾಜರಾಗಿದ್ದಾರೆ. ಇದರ ಜತೆಗೆ ಅವರ ಗೆಳತಿ ಕ್ಯಾರಿ ಸೈಮಂಡ್ಸ್ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಜಾನ್ಸನ್ ತಂದೆಯಾದ ಋಷಿಯಲ್ಲಿದ್ದಾರೆ. ಇದರ ಜೊತೆಗೆ ಜಾನ್ಸನ್ ತಮ್ಮ ಮಗುವಿಗೆ ವಿಲ್ಫ್ರೆಡ್ ಲಾರಿ ನಿಕೋಲಸ್ ಜಾನ್ಸನ್ ಎಂದು ಹೆಸರಿಟ್ಟಿದ್ದಾರೆ. ಈ ಹೆಸರುಗಳು ಇಬ್ಬರ ವೈದ್ಯರ ಹೆಸರಾಗಿದೆ. ಈ ಹೆಸರಿಡಲು ಕಾರಣ ತಿಳಿಸಿದ್ದಾರೆ. ನನಗೆ ಕೊರೊನಾ ತಗುಲಿದಾಗ ನನ್ನನ್ನು ಈ ಇಬ್ಬರು ವೈದ್ಯರು ಚಿಕಿತ್ಸೆ ನೀಡಿದ್ದರು ಅದಕ್ಕೆ ಅವರಿಗೆ ಈರೀತಿಯಾಗಿ ಗೌರವ ನೀಡಿದ್ದೇನೆ ಎಂದು ಜಾನ್ಸನ್ ವಿವರಿಸಿದ್ದಾರೆ. ಅಲ್ಲದೆ ತನ್ನ ಪತ್ನಿಯ ಹೆರಿಗೆ ಸಮಯದಲ್ಲಿ ಶುಶ್ರೂಷೆ ಮಾಡಿದ ಲಂಡನ್ ವಿವಿ ಆಸ್ಪತ್ರೆಯ ವೈದ್ಯರ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

  ಕೊರೊನಾ ಯೋಧರಿಗೆ ಸೇನೆಯಿಂದ ಗೌರವ

Sun May 3 , 2020
ನವದೆಹಲಿ: ಕೋವಿಡ್-೧೯ ವಿರುದ್ಧದ ಹೋರಾಟದಲ್ಲಿ ತೊಡಗಿರುವ ದೇಶದ ಆರೋಗ್ಯ ಕಾರ್ಯಕರ್ತರ ಕೆಲಸ ಶಾಘಿಸಿ ಕೃತಜ್ಞತೆ ಸಲ್ಲಿಸುವಲ್ಲಿ ಸಶಸ್ತç ಪಡೆಗಳು ತಮ್ಮದೇ ಆದ ಸಾಂಪ್ರಾದಾಯಿಕ ಶೈಲಿಯಲ್ಲಿ ಹಲವು ವಿಶೇಷ ಚಟುವಟಿಕೆಗಳನ್ನು ನಡೆಸಿದವು. ಕಳೆದೆರಡು ತಿಂಗಳಿಂದ ಹಗಲಿರುಳೆನ್ನದೆ ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸರು ಸೇರಿದಂತೆ ಅಸಂಖ್ಯಾತ ಸ್ವಯಂ ಸೇವಕರೂ ಕುಟುಂಬ, ಸಂಸಾರದಿAದ ದೂರ ಉಳಿದು ಕರೊನಾ ವಿರುದ್ಧದ ಹೋರಾಟಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ತ್ಯಾಗ ಹಾಗೂ ಕಠಿಣ ಶ್ರಮದಿಂದ ಸೇವೆ […]

Advertisement

Wordpress Social Share Plugin powered by Ultimatelysocial