ಸ್ಯಾಂಡಲ್ ವುಡ್ ಗೆ ತಮನ್ನಾ ಎಂಟ್ರಿ ..?

ಮಿಲ್ಕ್ ಬ್ಯೂಟಿ ಖ್ಯಾತಿಯ ನಟಿ ತಮ್ಮನ್ನಾ ಭಾಟೀಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಿರೋ ಇನ್ ಆಗಿ ಮೇರೆಯುತ್ತಿದ್ದಾರೆ..ಬಾಲಿವುಡ್ ಗೂ ಕಾಲಿಟ್ಟು ಕೆಲವೇ ಕೆಲವು ಸಿನಿಮಾ ಮಾಡಿದ್ದಾರೆ.. ತಮನ್ನಾಗೆ ಸೌತ್ ಇಂಡಸ್ಟ್ರೀಯಲ್ಲಿ ಸಿಕ್ಕಷ್ಟು ಯಶಸ್ಸು ಬಾಲಿವುಡ್ ನಲ್ಲಿ ಸಿಕ್ಕಿಲ್ಲ..ಈಗ ಸ್ಯಾಂಡಲ್ ವುಡ್ ಗೆ ತಮನ್ನಾ ಎಂಟ್ರಿಯಾಗೋ ಎಲ್ಲಾ ಲಕ್ಷಣ ಕಾಣುತ್ತಿದೆ..ಅದ್ರಲ್ಲೂ ಕನ್ನಡ ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಗಾಂಧೀನಗರದಲ್ಲಿ ಹರಿದಾಡುತ್ತಿದೆ..ಈ ಹಿಂದೆ ತಮನ್ನಾ ಭಾಟಿಯಾ ಜಾಗ್ವರ್, ಕೆಜಿಎಫ್ ಚಿತ್ರಗಳಲ್ಲಿ ಐಟಂ ಸಾಂಗ್ ನಲ್ಲಿ ಡ್ಯಾನ್ಸ್ ಮಾಡಿ ಪಡ್ಡೆಗಳ ನಿದ್ದೆಗೆಡಿಸಿದ್ರು.. ಯಶ್ ಜೊತೆಗೆ ಭರ್ಜರಿ ಕ್ಲಬ್ ನಲ್ಲಿ ಸ್ಟೇಪ್ ಹಾಕೋ ಮೂಲಕ ಸುದ್ದಿಯಾಗಿದ್ರು..ಯಶ್ ಮುಂಬರುವ ಚಿತ್ರವೊಂದರಲ್ಲಿ ಯಶ್ ಗೆ ನಾಯಕಿಯಾಗಿ ನಟಿಸಲು ತಮನ್ನಾ ಅವರನ್ನು ಸಂಪರ್ಕಿಸಲಾಗಿದೆ ಎಂಬ ಗಾಳಿ ಸುದ್ದಿ ಕೇಳಿ ಬಂದಿದೆ.. ಇದು ಕೆಜಿಎಫ್ ನಂತಹ ಬಹುಭಾಷಾ ಸಿನಿಮಾವಾಗಿದೆ ಅಂತ ಹೇಳಲಾಗುತ್ತಿದೆ..  ಕೆಜಿಎಫ್: 2 ಬಿಡುಗಡೆಯ ನಂತರ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಮುಫ್ತಿ ಖ್ಯಾತಿಯ ನಾರ್ಥನ್ ಹೆಲ್ಮೆಟ್ ನಿರ್ದೇಶನ ಮಾಡ್ತಾರೆ ಎನ್ನಲಾಗಿದೆ… ಈ ಹಿಂದೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಉಗ್ರಾಮ್ ಚಿತ್ರಕ್ಕೆ ನರ್ತನ್ ಕೆಲಸ ಮಾಡಿದ್ರು.. ಮುಫ್ತಿಯೊಂದಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ನರ್ಥಾನ್ ಪಣತಟ್ಟಿದ್ದಾರೆ..

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ವಲಸೆ ಕಾರ್ಮಿಕರಿಗೆ ಸರ್ಕಾರದಿಂದ ಗುಡ್‌ನ್ಯೂಸ್

Sat May 2 , 2020
ಲಾಕ್‌ಡೌನ್‌ನಿಂದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ನಿಗದಿಯಾದ ಬಸ್ಸುಗಳ ಪ್ರಯಾಣಕ್ಕೆ ದುಪ್ಪಟ್ಟು ದರ ವಿಧಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಅಲ್ಲದೆ ಸರ್ಕಾರಿ ಬಸ್ಸುಗಳಲ್ಲಿ ಮೂಲದರದೊಂದಿಗೆ ಊರಿಗೆ ತೆರಳಲು ಅನುಮತಿ ನೀಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. ತಮ್ಮ ಊರುಗಳಿಗೆ ಹೊರಟಿದ್ದ ವಲಸೆ ಕಾರ್ಮಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿತ್ತು. ಇದಕ್ಕೆ ಬ್ರೇಕ್ ಹಾಕಲು ಬಿ.ಎಸ್. ಯಡಿಯೂರಪ್ಪ ಹಾಗೂ […]

Advertisement

Wordpress Social Share Plugin powered by Ultimatelysocial