ಸ್ಯಾನಿಟೈಸರ್ ಬಳಸಿ ಮದ್ಯ ತಯಾರಿಸಿದ್ದವ ಕಂಬಿ ಹಿಂದೆ

ಮಧ್ಯಪ್ರದೇಶ: ಕೊರೊನಾ ಲಾಕ್ ಡೌನ್ ದೇಶದಾದ್ಯಂತ ಘೋಷಣೆ ಮಾಡಿದ ಮೇಲೆ ಮದ್ಯ ಮಾರಾಟ ಸಂಪೂರ್ಣ ನಿಂತುಹೋಗಿದೆ. ಒಂದಕ್ಕೆ ಎರಡು ಪಟ್ಟು, ಹತ್ತು ಪಟ್ಟು ಹಣ ಕೊಟ್ಟು ಖರೀದಿ ಮಾಡುತ್ತಿರುವ ಪ್ರಕರಣಗಳು ಅಲ್ಲಿಲ್ಲಿ ಕಂಡುಬರುತ್ತಿವೆ. ಆದರೆ ಮಧ್ಯಪ್ರದೇಶದಲ್ಲಿ ತೀರ ಅಪರೂಪದ ಪ್ರಕರಣವೊಂದು ಕಂಡುಬಂದಿದೆ. ಸ್ಯಾನಿಟೈಜರ್ ದ್ರವವನ್ನೇ ಬಳಸಿಕೊಂಡು ಮದ್ಯ ತಯಾರಿಸಿದ್ದ ವ್ಯಕ್ತಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ, ಹ್ಯಾಂಡ್ ಸ್ಯಾನಿಟೈಜರ್ ನಲ್ಲಿ ಇರುವ ಅತಿ ಮುಖ್ಯ ವಸ್ತುವೇ ಆಲ್ಕೋಹಾಲ್. ಆರೋಪಿಯ ಹೆಸರು ಇಂದಲ್ ಸಿಂಗ್ ರಜಪೂತ್. ಈತ ಸುಲ್ತಾನ್ ಪುರ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬೋರಿಯಾ ಜಾಗಿರ್ ಹಳ್ಳಿಯವನು ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಈಗ ಲಾಕ್ ಡೌನ್ ಇರುವುದರಿಂದ ಮಧ್ಯಪ್ರದೇಶದಲ್ಲೂ ಮದ್ಯ ಮಾರಾಟ ಮಳಿಗೆಗಳು ಮುಚ್ಚಿವೆ. ಆದರೆ ಅಲ್ಲಿನ ಸರ್ಕಾರವು ಹಲವು ಡಿಸ್ಟಿಲರಿಗಳಿಗೆ ಸ್ಯಾನಿಟೈಜರ್ ತಯಾರಿಸುವುದಕ್ಕೆ ಅನುಮತಿ ನೀಡಿದೆ. ಏಕೆಂದರೆ, ಕೊರೊನಾ ಸಮಯದಲ್ಲಿ ಸ್ಯಾನಿಟೈಜರ್ ಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಈಗ ಸ್ಯಾನಿಟೈಜರ್ ಬಳಸಿಕೊಂಡು ರಜಪೂತ್ ತಯಾರಿಸಿರುವ ಮದ್ಯದಲ್ಲಿ ಶೇಕಡಾ ೭೨ರಷ್ಟು ಆಲ್ಕೋಹಾಲ್ ಇದೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. “ಇದು ತೀರಾ ಅಪರೂಪದ ಪ್ರಕರಣ” ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಮೋನಿಕಾ ಶುಕ್ಲಾ ಅವರು ಹೇಳಿದ್ದಾರೆ. ರಜಪೂತ್ ವಿರುದ್ಧ ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ದೆಹಲಿಯ 135 ಯೋಧರಿಗೆ ಕೊರೊನಾ..!

Sun May 3 , 2020
ಕೊರೋನಾ ಭಾರತೀಯ ಸೇನೆಯನ್ನೂ ಆವರಿಸಿದ್ದು, ಇದೀಗ ದೆಹಲಿಯ 135 ಯೋಧರು ಕೊರೋನಾಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿನ ಸಿಆರ್‌ಪಿಎಫ್ ಹೆಡ್ ಕ್ವಾಟರ್ಸ್ ಅನ್ನು ಸೀಲ್ ಡೌನ್ ಮಾಡಲಾಗಿದೆ.ಬಿಎಸ್‌ಎಫ್ 126 ಬೆಟಾಲಿಯನ್ ಹಾಗೂ 178 ಬೆಟಾಲಿಯನ್ ಪಡೆಯ 15 ಮಂದಿ ಯೋಧರಲ್ಲಿ ವೈರಸ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 135ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹೆಡ್ ಕ್ವಾಟರ್ಸ್ ಅನ್ನು ಸೀಲ್ ಡೌನ್ ಮಾಡಲಾಗಿದೆ.ವಿಶೇಷ ಮಹಾನಿರ್ದೇಶಕ ಶ್ರೇಣಿಯ ಅಧಿಕಾರಿ, ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಸೇರಿದಂತೆ 40ಕ್ಕೂ […]

Advertisement

Wordpress Social Share Plugin powered by Ultimatelysocial