ಸಿಂದಗಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಗಳ ಪರೇಡ್ : 112 ರೌಡಿ ಶೀಟರ್ ಗಳಲ್ಲಿ 73 ಜನ ಈ ಪರೇಡ್ ನಲ್ಲಿ ಗೈರು

ವಿಜಯಪುರ : ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಇಂದು (ಸಿಪಿಐ)  ರವಿ ಉಕ್ಕುಂದ್ ಹಾಗೂ ಪಿಎಸ್ಐ ನಿಂಗಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಇಂದು ಸಿಂದಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ರೌಡಿಶೀಟರ್ ಗಳ ಪರೇಡ್  ನಡೆಸಲಾಯಿತು.  ಈ ಪರೇಡ್ ನಲ್ಲಿ 39 ಜನ ರೌಡಿಶೀಟರ್ ಗಳು ಭಾಗಿಯಾಗಿದ್ದರು .   ರೌಡಿಶೀಟರ್ ಗಳ  ಪರೇಡ್ ನಂತರ ಮಾತನಾಡಿದ ಸಿಂದಗಿ( ಸಿಪಿಐ) ರವಿ ಉಕ್ಕುಂದ್ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 112 ರೌಡಿ ಶೀಟರ್ ಗಳು ಇದ್ದು,   ಆ ಪೈಕಿ A.B.C.  A  ಒಂದರಲ್ಲಿ 58 ಜನ B ಗುಂಪಿನಲ್ಲಿ 44 ಜನ C ಗುಂಪಿನಲ್ಲಿ 8 ಜನ ಇದ್ದು , ಇದರಲ್ಲಿ ಕೇವಲ 39 ಜನ ಪೆರೇಡ್‌ ಗೆ ಆಗಮಿಸಿದ್ದಾರೆ . ಇನ್ನೂ 73 ಜನ ರೌಡಿಶೀಟರ್ ಈ ಪೆರೇಡ್ ನಲ್ಲಿ ಬರದೇ ಇರುವ 73 ಜನ ರೌಡಿಶೀಟರ್ ಗಳನ್ನು ಆದಷ್ಟು ಬೇಗ ಠಾಣೆಗೆ ಕರೆಸಿ ಶಿಸ್ತಿನ ಕ್ರಮ ಜರುಗಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು. ಅದೇ ರೀತಿ ಸಿಂದಗಿ ಪೊಲೀಸ್ ಠಾಣಾ (ಪಿಎಸ್ಐ) ನಿಂಗಪ್ಪ ಪೂಜಾರಿ ಅವರು ಮಾತನಾಡಿ ಈಗ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕ್ರಿಮಿನಲ್ ಆಕ್ಟಿವಿಟಿಗಳು ನಡೆಯುತ್ತಿಲ್ಲ . ಮೊದಲಿನಂತೆ ಯಾರಾದರೂ ವರ್ತಿಸಿದರೆ ಅವರನ್ನು ನಾವು ಸುಮ್ಮನೆ ಬಿಡುವುದಿಲ್ಲ ಅದೇ ರೀತಿ ಮುಂಬರುವ ಹಬ್ಬ ಹರಿದಿನಗಳಲ್ಲಿ ಸಮಾಜದಲ್ಲಿ ಅಶಾಂತಿ ಕದಡಿಸಿದವರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಸಂಗೀತ ಪ್ರಿಯರಿಗೆ ದೇವಿ ಶ್ರೀ ಪ್ರಸಾದ್ ಯಾರು ಅಂತ ಹೇಳಬೇಕಾಗಿಲ್ಲ.

Sat Jul 2 , 2022
  ಸಂಗೀತ ಪ್ರಿಯರಿಗೆ ದೇವಿ ಶ್ರೀ ಪ್ರಸಾದ್ ಯಾರು ಅಂತ ಹೇಳಬೇಕಾಗಿಲ್ಲ. ಇತ್ತೀಚೆಗೆ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿರುವ ‘ಪುಷ್ಪ’ ಸಿನಿಮಾದ ಹಾಡುಗಳೇ ಇದಕ್ಕೆ ಸಾಕ್ಷಿ. ‘ಪುಷ್ಪ’ ಹಾಡುಗಳು ಸೂಪರ್‌ ಡೂಪರ್ ಹಿಟ್ ಆಗುತ್ತಿದ್ದಂತೆ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಸಿನಿಮಾದಿಂದ ಟಾಲಿವುಡ್‌ ಮ್ಯೂಸಿಕ್ ರೈರೆಕ್ಟರ್ ದೇವಿ ಶ್ರೀ ಪ್ರಸಾದ್ ಹೊರಬಂದಿದ್ದಾರೆ. ಅವರ ಜಾಗಕ್ಕೆ ‘ಕೆಜಿಎಫ್ 2’ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ […]

Advertisement

Wordpress Social Share Plugin powered by Ultimatelysocial