ಮೂರು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ ಬಲ್ಬೀರ್ ಸಿಂಗ್ (೯೬) ಮೊಹಾಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ವಿಪರೀತ ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದ ಕಾರಣ ಮೇ ೮ರಂದು ರ್ಧ ಕೋಮಾ ಸ್ಥಿತಿಯಲ್ಲಿದ್ದ ಬಲ್ಬೀರ್ ಸಿಂಗ್ ಮೊಹಾಲಿಯ ಫರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ವಿದಿವಶರಾಗಿದ್ದಾರೆ. ಬಲ್ಬೀರ್ ಸಿಂಗ್, ೧೯೪೮ರ ಲಂಡನ್ ಒಲಿಂಪಿಕ್ಸ್, ೧೯೫೨ರ ಹೆಲ್ಸಿಂಕಿ ಒಲಿಂಪಿಕ್ಸ್ ಮತ್ತು ೧೯೫೬ರ ಮೆಲ್ಬರ್ನ್ ಒಲಿಂಪಿಕ್ಸ್ನಲ್ಲಿ ಸ್ರ್ಣ ಸಾಧನೆಗೈದ ಭಾರತ ತಂಡದ ಸದಸ್ಯರಾಗಿದ್ದರು. ಪುರುಷರ ಹಾಕಿಯ ಒಲಿಂಪಿಕ್ಸ್ ಫೈನಲ್ನಲ್ಲಿ ಅತಿ ಹೆಚ್ಚು ವೈಯಕ್ತಿಕ ಗೋಲ್ ದಾಖಲಿಸಿದ ದಾಖಲೆ ಈಗಲೂ ಬಲ್ಬೀರ್ ಹೆಸರಲ್ಲಿ ಇರುವುದು ವಿಶೇಷ. ೧೯೫೨ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಒಲಿಂಪಿಕ್ಸ್ ಫೈನಲ್ ಪಂದ್ಯದಲ್ಲಿ ಬಲ್ಬೀರ್ ಸಿಂಗ್ ೫ ಗೋಲ್ ಬಾರಿಸಿ ಭಾರತ ತಂಡಕ್ಕೆ ನೆರ್ಲೆಂಡ್ಸ್ ವಿರುದ್ಧ ೬-೧ರ ರ್ಜರಿ ಜಯ ತಂದುಕೊಟ್ಟಿದ್ದರು. ೧೯೫೭ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಆಗಿರುವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಬಲ್ಬೀರ್ ಸಿಂಗ್, ೨೦೧೪ರಲ್ಲಿ ಹಾಕಿ ಇಂಡಿಯಾದಿಂದ ಜೀವಮಾನದ ಶ್ರೇಷ್ಠ ಸಾಧನೆಗೆ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ ಸ್ವೀಕರಿಸಿದ್ದರು. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ವಿಶ್ವದಾದ್ಯಂತ ಆಧುನಿಕ ಒಲಿಂಪಿಕ್ಸ್ನ ಶ್ರೇಷ್ಠರ ಸಾಲಿಗೆ ಆಯ್ಕೆಯಾದ ಏಷ್ಯಾದ ೧೬ ಅಥ್ಲೀಟ್ಗಳ ಪೈಕಿ ಬಲ್ಬೀರ್ ಏಕಮಾತ್ರ ಭಾರತೀಯರಾಗಿದ್ದರು. ಭಾರತೀಯ ಹಾಕಿಯ ದಿಗ್ಗಜ ಆಟಗಾರ ಬಲ್ಬೀರ್ ಸಿಂಗ್ ಸೀನಿಯರ್ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಇಬ್ಬರು ಸಂತಾಪ ಸೂಚಿಸಿದ್ದಾರೆ.
ಹಾಕಿ ದಿಗ್ಗಜ ಬಲ್ಬೀರ್ ಸಿಂಗ್ ಇನ್ನಿಲ್ಲ

Please follow and like us: