ದಾಸವಾಳದ ಚಹಾ ಬೆಸ್ಟ್ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ!

ಅಧಿಕ ರಕ್ತದೊತ್ತಡವು ಹೃದಯದಲ್ಲಿನ ರಕ್ತಕೊರತೆ ಮತ್ತು ಸೆರೆಬ್ರೊವಾಸ್ಕುಲರ್ (ಮೆದುಳಿಗೆ ಸಂಬಂಧಿಸಿದ) ಕಾಯಿಲೆ ಜೊತೆಗೆ ಮತ್ತು ಮೂತ್ರಪಿಂಡದಲ್ಲಿ ದೀರ್ಘಕಾಲೀನ ಕಾಯಿಲೆ ಸೇರಿದಂತೆ ಅನೇಕ ರೀತಿಯ ಗಂಭೀರ ಅನಾರೋಗ್ಯಗಳಿಗೆ ಕಾರಣವಾಗಬಹುದು.ಅಧಿಕ ರಕ್ತದೊತ್ತಡವು ಅಂಗವೈಕಲ್ಯ ಹೆಚ್ಚಿಸಿ, ಅಕಾಲಿಕ ಸಾವುಗಳಿಗೆ ವಿಶ್ವಾದ್ಯಂತ ಕಾರಣವಾಗುತ್ತಾ ಬಂದಿದೆ.ಅನೇಕ ಸಂದರ್ಭಗಳಲ್ಲಿ ರೋಗಿಯ ರಕ್ತದೊತ್ತಡವು ಸ್ಥಿರವಾಗಿಲ್ಲದ ಕಾರಣ ವೈದ್ಯರು ಕೆಲವು ಶಸ್ತ್ರಚಿಕಿತ್ಸೆಗಳನ್ನು ಮಾಡಲು ಸಾಧ್ಯವಾಗದೇ ಇರುವ ಪ್ರಸಂಗ ನೀವು ಕೇಳಿರಬಹುದು.ಹೌದು, ಆಧುನಿಕ ಔಷಧಿಗಳ ಮೂಲಕ ರಕ್ತದೊತ್ತಡದ ಮಟ್ಟವನ್ನು ನಿರ್ವಹಿಸಬಹುದು, ಆದರೆ ಈ ಔಷಧಿಗಳ ದೀರ್ಘಾವಧಿಯ ಬಳಕೆಯು ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂದು ಸಾಬೀತಾಗಿದೆ.ಹಾಗಾದರೆ, ನೈಸರ್ಗಿಕ ಅಂಶಗಳು ಮತ್ತು ಆಹಾರಗಳೊಂದಿಗೆ ಅಧಿಕ ರಕ್ತದೊತ್ತಡವನ್ನು ನಿರ್ವಹಿಸುವ ವಿಧಾನಗಳು ಯಾವುವು ?‘ಹಾರ್ವರ್ಡ್ ಹೆಲ್ತ್’ ನಿಯತಕಾಲಿಕೆಯ ವರದಿಗಳ ಪ್ರಕಾರ ದಾಸವಾಳದ (ಹೈಬಿಸ್ಕಸ್) ಚಹಾವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನವು ತೋರಿಸಿದೆ. ಈ ಗಿಡಮೂಲಿಕೆ ಚಹಾ ಕೊಡಮಾಡುವ ಮತ್ತೊಂದು ಆಸಕ್ತಿದಾಯಕ ಹೃದಯ ರಕ್ತನಾಳ ಸಂಬಂಧಿ ಪ್ರಯೋಜನವೆಂದರೆ ಎಲ್ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯ ವೃದ್ಧಿ. ದಾಸವಾಳದ ಚಹಾ ಅಥವಾ ಸಾರವನ್ನು ಸೇವಿಸುವುದರಿಂದ ಕೆಟ್ಟ ಎಲ್‌ಡಿಎಲ್‌ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟಗಳು ಕಡಿಮೆಯಾಗುತ್ತವೆ ಎಂದು ಸಂಶೋಧನಾ ವಿಮರ್ಶೆಯೊಂದು ತೋರಿಸಿದೆ.ದಾಸವಾಳದ ಚಹಾದ ಬಗ್ಗೆ ಹಾರ್ವರ್ಡ್ ಸಂಶೋಧನೆ ಹೀಗೆಲ್ಲಾ ಹೇಳುತ್ತದೆ:ಹೈಬಿಸ್ಕಸ್ ಚಹಾವು ರಕ್ತದೊತ್ತಡವನ್ನು ಕಡಿಮೆ ಮಾಡುವ ಪರಿಣಾಮವನ್ನು ಹೊಂದಿದೆ ಎಂದು ಸ್ಥಾಪಿತವಾಗಿದೆ.ದಾಸವಾಳದ ಚಹಾ ಅಥವಾ ಸಾರವನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್‌) ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.ದಾಸವಾಳದ ಚಹಾವನ್ನು ದಾಸವಾಳ ಸಸ್ಯದ ಗಾಢ ಬಣ್ಣದ ಹೂವುಗಳಿಂದ ತಯಾರಿಸಲಾಗುತ್ತದೆ.ದಾಸವಾಳದ ಚಹಾದಲ್ಲಿ ಒಣಗಿದ ಕ್ಯಾಲಿಸಸ್ ಅನ್ನು ಬಳಸಲಾಗುತ್ತದೆ, ಇದು ರಿಫ್ರೆಶ್ ಆದರೆ ಟಾರ್ಟ್ ಪರಿಮಳವನ್ನು ನೀಡುತ್ತದೆ.ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒದಗಿಸುವುದರ ಜೊತೆಗೆ, ದಾಸವಾಳದ ಚಹಾವು ಸಣ್ಣ ಪ್ರಮಾಣದ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಇತರ ಖನಿಜಗಳನ್ನು ಹೊಂದಿರುತ್ತದೆ.ದಾಸವಾಳ ಚಹಾವು ಆಂಟಿವೈರಲ್ ಮತ್ತು ಹೃದಯರಕ್ತನಾಳದ ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ನೀಡುತ್ತದೆ, ಮುಖ್ಯವಾಗಿ “ಆಂಥೋಸಯಾನಿನ್ಸ್” ಅಂಶದ ಕಾರಣದಿಂದ.ಈ ಗಿಡಮೂಲಿಕೆ ಚಹಾವು ಹಕ್ಕಿ ಜ್ವರದ ಕೆಲವು ಸ್ಟ್ರೇನ್‌ಗಳ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ನಿರೂಪಿತವಾಗಿದೆ.ಎಚ್ಚರಿಕೆಯ ಮಾತು: ನೀವು ಮೂತ್ರವರ್ಧಕ ಔಷಧಿ ಹೈಡ್ರೋಕ್ಲೋರೋಥಿಯಾಜೈಡ್‌ಅನ್ನು ತೆಗೆದುಕೊಳ್ಳುವವರಾದರೆ, ದಾಸವಾಳದ ಚಹಾ ಕುಡಿಯುವುದನ್ನು ತಪ್ಪಿಸಬೇಕು ಎಂದು ಹಾರ್ವರ್ಡ್ ಹೆಲ್ತ್ ಎಚ್ಚರಿಸಿದೆ. ಏಕೆಂದರೆ ಈ ಎರಡೂ ಮದ್ದುಗಳು ಪರಸ್ಪರ ಋಣಾತ್ಮಕವಾಗಿ ಸಂವಹನ ನಡೆಸುವ ಸಾಧ್ಯತೆಗಳಿವೆ.ದಾಸವಾಳದ ಚಹಾವು ಆಸ್ಪಿರಿನ್ ಪರಿಣಾಮಗಳೊಂದಿಗೆ ಮಧ್ಯಪ್ರವೇಶಿಸುವ ಸಾಧ್ಯತೆ ಇರುವ ಕಾರಣದಿಂದ ಈ ಎರಡನ್ನೂ ಸೇವಿಸುವ ನಡುವೆ 3-4 ಗಂಟೆಗಳ ಅಂತರವಿರಲಿ ಎಂದು ಆರೋಗ್ಯ ವೃತ್ತಿಪರರು ಶಿಫಾರಸು ಮಾಡುತ್ತಾರೆ. ಆದರೆ ಇದೆಲ್ಲದಕ್ಕೂ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಸಕ್ತ ವರ್ಷದಲ್ಲಿ ಎರಡು ಲಕ್ಷ ಉದ್ಯೋಗ ಸೃಷ್ಟಿ -ಸಚಿವೆ ನಿರ್ಮಲಾ ಸಿತಾರಾಮನ್

Tue Feb 1 , 2022
ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಕೇಂದ್ರ ಬಜೆಟ್ ಮಂಡಿಸುತ್ತಿದ್ದು, ದೇಶಾದ್ಯಂತ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು ಸರ್ಕಾರದ ಗುರಿ ಎಂದು ಹೇಳಿದ್ದಾರೆ.ಮೇಕ್ ಇನ್ ಇಂಡಿಯಾ ಮೂಲಕ 60 ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ಮುಂದಿನ ಐದು ವರ್ಷಗಳಲ್ಲಿ 60 ಲಕ್ಷ ಹೊಸ ಉದ್ಯೋಗಗಳು ಮತ್ತು 30 ಲಕ್ಷ ಕೋಟಿ ಹೆಚ್ಚುವರಿ ಉತ್ಪಾದನೆಯನ್ನು ರಚಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದು ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಬಜೆಟ್‌ನಲ್ಲಿ […]

Advertisement

Wordpress Social Share Plugin powered by Ultimatelysocial