ದೇವರ ಬಗ್ಗೆ ಅಸಂಬದ್ಧ ಹೇಳಿಕೆ: ನಟಿ ಶ್ವೇತಾ ತಿವಾರಿ

ಭೂಪಾಲ್: ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ನಟಿ ಶ್ವೇತಾ ತಿವಾರಿ ಧಕ್ಕೆ ತಂದಿದ್ದಾರೆ ಎಂದು ಆರೋಪದ ಮೇಲೆ ದೂರು ದಾಖಲಾಗಿದೆ.

ನಟಿಯ ಹೇಳಿಕೆಯನ್ನು ತನಿಖೆ ಮಾಡಿ ವರದಿ ಸಲ್ಲಿಸುವಂತೆ ನಗರ ಪೊಲೀಸರಿಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ತಿವಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಿವಾರಿ ಅವರು ಬುಧವಾರ ಭೋಪಾಲ್‌ನಲ್ಲಿ ತಮ್ಮ ವೆಬ್ ಸರಣಿ “ಶೋ ಸ್ಟಾಪರ್” ಪ್ರಚಾರದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ತಿವಾರಿ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾನೆ ಎಂದು ಮಾತಿನ ಭರದಲ್ಲಿ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅನೇಕ ಬಳಕೆದಾರರು, ದೇವರ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಕ್ಕೆ ಕಿಡಿಕಾರಿದ್ದಾರೆ.

ಮಾಧ್ಯಮದವರೊಂದಿಗೆ ಸಂವಾದದ ವೇಳೆ ಆಕೆ ಈ ಹೇಳಿಕೆ ನೀಡಿದಾಗ ಆಕೆಯ ಸಹ ಕಲಾವಿದರು ಕೂಡ ಹಾಜರಿದ್ದರು. ಶುಕ್ರವಾರ ಮುಂಜಾನೆ ಶ್ವೇತಾ ತಿವಾರಿ ವಿರುದ್ಧ ಐಪಿಸಿ ಸೆಕ್ಷನ್ 295 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಶ್ಯಾಮಲಾ ಹಿಲ್ಸ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೃದ್ರೋಗದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತೆ ಈ ಚಟುವಟಿಕೆ

Fri Jan 28 , 2022
ಕಳೆದ ಕೆಲವು ದಶಕಗಳಿಂದ ಭಾರತದಲ್ಲಿ ಹೃದ್ರೋಗದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿವೆ. ಅಕಾಲಿಕ ಸಾವುಗಳಿಗೂ ಈ ಹೃದ್ರೋಗ ಕಾರಣವಾಗುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ದೈಹಿಕವಾಗಿ ಸಕ್ರಿಯವಾಗಿರುವ ಮೂಲಕ ಹೃದ್ರೋಗದ ಸಾಧ್ಯತೆಗಳನ್ನು ತಗ್ಗಿಸಬಹುದು. ದೈಹಿಕವಾಗಿ ಆಲಸ್ಯರಾದಷ್ಟೂ ಹೃದ್ರೋಗದ ಸಾಧ್ಯತೆಗಳು ಜೋರಾಗುತ್ತವೆ. ಹೃದಯದ ಆರೋಗ್ಯದಲ್ಲಿ ದೈಹಿಕ ಚಟುವಟಿಕೆಯ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು ಹೃದಯರಕ್ತನಾಳದ ಕಾಯಿಲೆಗಳು (CVD) ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಅಸ್ವಸ್ಥತೆಗಳ ಒಂದು ಸಮೂಹ. ನಿಮಗೆ ತಿಳಿದಿದೆಯೇ? ಇದು […]

Advertisement

Wordpress Social Share Plugin powered by Ultimatelysocial