ನಕಾರಾತ್ಮಕ ವಹಿವಾಟು: 7 ದಿನದಲ್ಲಿ ₹ 10.42 ಲಕ್ಷ ಕೋಟಿ ನಷ್ಟ,

ವದೆಹಲಿ: ಮುಂಬೈ ಷೇರುಪೇಟೆಯಲ್ಲಿ (ಬಿಎಸ್‌ಇ) ನಡೆದ ಏಳು ದಿನಗಳ ನಕಾರಾತ್ಮಕ ವಹಿವಾಟಿನ ಪರಿಣಾಮವಾಗಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 10.42 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ. ಇದರಿಂದಾಗಿ ಸೋಮವಾರದ ಅಂತ್ಯಕ್ಕೆ ಷೇರುಪೇಟೆಯ ಒಟ್ಟು ಮೌಲ್ಯವು ₹ 257.88 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.ಏಳು ದಿನಗಳ ವಹಿವಾಟು ಅವಧಿಯಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ 2,031 ಅಂಶ ಇಳಿಕೆ ಕಂಡಿದೆ.ಅಭಿವೃದ್ಧಿ ಹೊಂದಿದ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಇನ್ನೂ ಹೆಚ್ಚಿನ ಬಡ್ಡಿದರ ಏರಿಕೆ, ಜಾಗತಿಕ ಷೇರುಪೇಟೆಗಳ ವಹಿವಾಟು ಇಳಿಮುಖವಾಗಿರುವುದು ಹಾಗೂ ವಿದೇಶಿ ಬಂಡವಾಳ ಹೊರಹರಿವಿನ ಕಾರಣಗಳು ದೇಶದ ಷೇರುಪೇಟೆಗಳಲ್ಲಿ ಹೂಡಿಕೆ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಟೆಸ್ಲಾ ಷೇರು ಝಗಮಗ; ಎಲಾನ್ ಮಸ್ಕ್ ಮತ್ತೆ ವಿಶ್ವ ನಂ. 1 ಶ್ರೀಮಂತ,

Tue Feb 28 , 2023
ಕಳೆದ ತಿಂಗಳು 108.10 ಡಾಲರ್​ನಷ್ಟಿದ್ದ ಟೆಸ್ಲಾ ಷೇರು ಬೆಲೆ ಇದೀಗ 200 ಡಾಲರ್​ಗೂ ಹೆಚ್ಚಾಗಿದೆ. ಇದರಿಂದ ಎಲಾನ್ ಮಸ್ಕ್ ಆಸ್ತಿ ಮೌಲ್ಯ 187 ಬಿಲಿಯನ್ ಡಾಲರ್​ಗೆ ಏರಿದೆ. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಬೆರ್ನಾರ್ಡ್ ಆರ್ನಾಲ್ಟ್ ಅವರನ್ನು ಹಿಂದಿಕ್ಕಿ ಮಸ್ಕ್ ಅಗ್ರಸ್ಥಾನಕ್ಕೇರಿದ್ದಾರೆ.ನವದೆಹಲಿ:ಟ್ವಿಟ್ಟರ್​ನ ಹೊಸ ಮಾಲೀಕ ಎಲಾನ್ ಮಸ್ಕ್ ಮತ್ತೆ ವಿಶ್ವದ ಅತಿಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಬ್ಲೂಮ್​ಬರ್ಗ್ ಬಿಡುಗಡೆ ಮಾಡಿದ ಸಿರಿವಂತರ ಪಟ್ಟಿಯಲ್ಲಿ ಮಸ್ಕ್ ಅಗ್ರಸ್ಥಾನಕ್ಕೆ ಏರಿದ್ದಾರೆ. ಮಸ್ಕ್ ಮಾಲೀಕತ್ವದ ಟೆಸ್ಲಾ ಕಂಪನಿಯ […]

Advertisement

Wordpress Social Share Plugin powered by Ultimatelysocial