RSS ಇಲ್ಲದಿದ್ದಿದ್ದರೆ ಇಷ್ಟೋತ್ತಿಗೆ ನಮ್ಮ ದೇಶ ಪಾಕಿಸ್ತಾನ ಆಗ್ತಿತ್ತು; ಕೆ.ಎಸ್‌ ಈಶ್ವರಪ್ಪ

ಬಾಗಲಕೋಟೆದೇಶದ ಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಮತ್ತು ಅವರ ಪುತ್ರಿ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಗಲಕೋಟೆಯಲ್ಲಿಂದು ಮಾತನಾಡಿದ ಅವರು, ಆರ್ ಎಸ್ ಎಸ್ ಬಗ್ಗೆ ನೆಹರೂ, ಇಂದಿರಾ ಗಾಂಧಿಯವರು ಮಾತನಾಡಿದಾಗಲೇ ಹಚಾ ಅಂತ ಹೋದ್ವಿ, ಇನ್ನು ಇವರೆಲ್ಲಾ ನಮಗೆ ಯಾವ ಲೆಕ್ಕಕ್ಕೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿಯವರವರಿಗೆ ಕಟುವಾಗಿ ಟೀಕಿಸಿದ್ದಾರೆ.

ಆರ್ ಎಸ್ ಎಸ್ ಇಡೀ ದೇಶದ ಯುವಕರಿಗೆ ರಾಷ್ಟ್ರಭಕ್ತಿಯನ್ನು ಮೂಡಿಸುವಂತಹ ಒಂದು ದೊಡ್ಡ ಸಂಸ್ಥೆ. ಆರ್ ಎಸ್ ಎಸ್ ಇಲ್ಲದಿದ್ದಿದ್ದರೆ ಇಷ್ಟೋತ್ತಿಗೆ ನಮ್ಮ ದೇಶ ಪಾಕಿಸ್ತಾನ ಆಗಿ ಹೋಗಿರುತ್ತಿತ್ತು. ಐಎಎಸ್. ಐಪಿಎಸ್ ಅಧಿಕಾರಿಗಳ ಮೂಲಕ ಆರ್ ಎಸ್ ಎಸ್ ಅಧಿಕಾರ ನಡೆಸುತ್ತಿದೆ ಎನ್ನುವುದು ಮೆದುಳಿಗೆ ಪೊರೆ ಬಂದವರು ನೀಡುವಂತಹ ಹೇಳಿಕೆಗಳು ಎಂದು ಗುಡುಗಿದ್ದಾರೆ.

ಮುಸಲ್ಮಾನರು, ಕ್ರಿಸ್ತಿಯನ್ನರ ವೋಟ್ ಗಳ ಮೇಲೆ ಕಣ್ಣಿಟ್ಟು ಆರ್ ಎಸ್ ಎಸ್ ನ್ನು ಬೈಯುತ್ತಿದ್ದಾರೆ. ಆರ್ ಎಸ್ ಎಸ್ ನ್ನು ಬೈದುಬಿಟ್ಟರೆ ಅಲ್ಪಸಂಖ್ಯಾತರು ಮತ ಹಾಕುತ್ತಾರೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನವರು ಇದ್ದಾರೆ. ಮುಂಚೆ ಬಿಜೆಪಿಯನ್ನು ಬ್ರಾಹ್ಮಣರ ಪಕ್ಷ ಎಂದು ಕರೆಯುತ್ತಿದ್ದರು, ಇವತ್ತು ಹಿಂದುಳಿದವರು, ದಲಿತರು ಕೂಡ ಬಿಜೆಪಿಯನ್ನು ಬೆಂಬಲಿಸುತ್ತಿರುವುದರಿಂದ ಅವರಿಗೆ ಬೇರೆ ದಾರಿ ತೋಚುತ್ತಿಲ್ಲ, ಭ್ರಮ ನಿರಸನವಾಗಿದ್ದಾರೆ. ಇವತ್ತು ಭೂತಕನ್ನಡಿ ಹಿಡಿದುಕೊಂಡು ದೇಶದಲ್ಲಿ ಕಾಂಗ್ರೆಸ್ ಎಲ್ಲಿ ಅಧಿಕಾರದಲ್ಲಿದೆ ಎಂದು ಹುಡುಕಬೇಕು ಹಾಗಾಗಿದೆ ಈಗಿನ ಪರಿಸ್ಥಿತಿ.

Please follow and like us:

Leave a Reply

Your email address will not be published. Required fields are marked *

Next Post

ಡಿ.ಕೆ.ಶಿ ಕಾರು ತಡೆದ ಚುನಾವಣಾಧಿಕಾರಿ- ಆಗಿದೇನು ಗೋತ್ತಾ..!

Fri Oct 8 , 2021
ಡಿ.ಕೆ.ಶಿ ಕಾರು ತಪಾಸಣೆ ಮಾಡಿದ ಚುನಾವಣಾಧಿಕಾರಿಗಳು ಬೆಂಗಳೂರು, ಅ.8- ಸಿಂಧಗಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದಾರೆ. ಹೆಲಿಕಾಫ್ಟರ್‍ನಲ್ಲಿ ತೆರಳಿದ ಡಿ.ಕೆ.ಶಿವಕುಮಾರ್ ಅವರು ಸಿಂಧಗಿಗೆ ಹೋಗುವ ಮಾರ್ಗ ಮಧ್ಯೆ ಮೊರಟಗಿ ಚೆಕ್ ಪೋಸ್ಟ್‍ನಲ್ಲಿ ಚುನಾವಣಾ ಅಧಿಕಾರಿಗಳು ಬೆಂಗಾವಲು ವಾಹನ ಮತ್ತು ಕಾರುಗಳನ್ನು ತಡೆದಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ತಮ್ಮ ಕಾರಿನ ಬಾಗಿಲು ತೆಗೆದು […]

Advertisement

Wordpress Social Share Plugin powered by Ultimatelysocial