ರಾಜಕೀಯದಲ್ಲಿ ಮುಸ್ಲೀಂ ಪ್ರಾತಿನಿಧ್ಯಕ್ಕಾಗಿ ಮುಸ್ಲೀಂ ಸಮುದಾಯ ಬೇಡಿಕೆ ಇಟ್ಟಿದೆ. ಬೆಂಗಳೂರಿನಲ್ಲಿ ಮುಸ್ಲೀಂ ಸಮುದಾಯದಿಂದ ಮಹತ್ವದ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ 2023ರಲ್ಲಿ ಮುಸ್ಲೀಂ ಅಭ್ಯರ್ಥಿಗಳು ಹೆಚ್ಚೆಚ್ಚು ಟಿಕೆಟ್‌ ಪಡೆಯಬೇಕು ಅನ್ನೋ ವಿಚಾರದ ಬಗ್ಗೆ   ಸಭೆಯಲ್ಲಿ ಚರ್ಚೆ ನಡೆಸಲಾಯ್ತು. ಮುಸ್ಲಿಂ ನಾಯಕರ ಸಭೆಯಲ್ಲಿ ಮತ ವಿಭಜೆನ ಕುರಿತು ಚರ್ಚೆಯಾಗಿದೆ. ಗುಜರಾತ್‌ನಂತೆ ರಾಜ್ಯದಲ್ಲೂ ಮತ ವಿಭಜನೆ ಆತಂಕ ಎದುರಾಗಿದೆ. ಚುನಾವಣೆಗೆ 23-24 ಅಭ್ಯರ್ಥಿಗಳು ಮುಸ್ಲೀಂನಿಂದ ಟಿಕೆಟ್‌ ಪಡೆಯಬೇಕು. ಹೆಚ್ಚು ಟಿಕೆಟ್‌ ಕೇಳುವ ಅಗತ್ಯತೆ […]

ಹೆಚ್‌ ವಿಶ್ವನಾಥ್‌ ವಿರುದ್ಧ ಸಂಸದ ಶ್ರೀನಿವಾಸ್‌ ಗಂಭಿರ ಆರೋಪ ಮಾಡಿದ್ದಾರೆ. ಬೈ ಎಲೆಕ್ಷನ್‌ನಲ್ಲಿ ವಿಶ್ವನಾಥ್‌ 15 ಕೋಟಿ ತೆಗೆದುಕೊಂಡ್ರು 4-5 ಕೋಟಿ ಖರ್ಚು ಮಾಡಿ ಇನ್ನುಳಿದ 10 ಕೋಟಿ ಮನೆಗೆ ತೆಗೆದುಕೊಂಡು ಹೋದ್ರು ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಪೆಟ್ರೋಲ್‌ ಬಂಕ್‌, ಬಾರ್‌ ಮಾಡಿಕೊಂಡಿದ್ದು ಯಾರು ಎನ್ನುವ ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಶಾಸಕರ ವಿರುದ್ಧವೇ ಬಿಜೆಪಿ ಸಂಸದರು ಈ ರೀತಿ ಆರೋಪ ಮಾಡಿರೋದು ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ಬಹುದೊಡ್ಡ ಹೊಡೆತವಾಗಬಹುದು. […]

  ಕುಕ್ಕರ್‌ ಬ್ಲಾಸ್ಟ್‌  ಬಿಜೆಪಿ ಷಡ್ಯಂತ್ರ ಎಂದ ಡಿಕೆ ಶಿವಕುಮಾರ್ ಹೇಳಿಕೆಗೆ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಂತಹ ಘಟನೆ ಎಲ್ಲಿಯೂ ನಡೆಯಬಾರದು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೀತಾ ಇದೆ. ಯಾರನ್ನೂ ಸಮರ್ಥಿಸಿಕೊಳ್ಳಲ್ಲ. ಡಿಕೆಶಿ ಎಲ್ಲಿ ಹೇಳಿದ್ದಾರೆ? ಏನ್‌ ಹೇಳಿದ್ದಾರೆ ಗೊತ್ತಿಲ್ಲ ಅದರ ಬಗ್ಗೆ ನಾನೂ ಚರ್ಚೆ ಮಾಡ್ತೀನಿ ಎಂದು ಹೇಳಿದರು. ಆದರೆ ಮಂಗಳೂರಲ್ಲಿ ಕೋಮು ಸೌಹಾರ್ದ ಕದಡಲು ಇಂತಹ ಘಟನೆ ನಡೆಯುತ್ತೆ ಎಂದರು. […]

ಪಿಎಸ್‌ಐ (PSI) ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಡಿಜಿಪಿ (ADGP) ಅಮೃತ್‌ ಪೌಲ್‌ಗೆ ಜೈಲೆ ಗತಿಯಾಗಿದೆ. ಅಮೃತ್‌ ಪೌಲ್‌ ಜಾಮೀನು ಅರ್ಜಿಗೂ ತಿರಸ್ಕಾರ ಮಾಡಲಾಗಿದೆ. ಇದರ ಬನ್ನಲ್ಲೇ ಪೌಲ್‌ ಮಗಳು ನನ್ನ ತಂದೆ ಅಮಾಯಕ. ಯಾವುದೇ ತಪ್ಪು ಮಾಡಿಲ್ಲ. ತಂದೆ ಬಂಧನದಿಂದ ದೈಹಿಕ, ಮಾನಸಿಕ, ಆರ್ಥಿಕ ಕಷ್ಟ ಎದುರಾಗಿದೆ ಬ್ಯಾಂಕ್‌ ಲೋನ್‌ಗೆ ಇಎಂಐ ಕಟ್ಟೋಕೂ ಕೂಡ ಆಕ್ತಿಲ್ಲ ನಮಗೆ ನ್ಯಾಯ ಕೊಡಿಸಿ ಎಂದು ಪುತ್ರಿ ನುಹಾರ್‌ ಪತ್ರದ ಮೂಲಕ ಮನವಿ […]

ಕೇಂದ್ರ ಗೃಹ ಸಚಿವ ಅಮಿತ್‌ ಶಾ   ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಜೊತೆ ಸಭೆ ನಡೆಸಿದ್ದಾರೆ. ಇನ್ನೇನು ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಹೊತ್ತಿನಲ್ಲಿ ಅಮಿತ್‌ ಶಾ ಸಿಎಂ ಮಾತುಕತೆ ಭಾರೀ ಕುತೂಹಲ ಕೆರಳಿಸಿದೆ. ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನ ಫೈನಲ್‌ ಮಾಡುವ ತಯಾರಿಯಲ್ಲಿರುವ ಪಕ್ಷಕ್ಕೆ ಅಮಿತ್‌ ಶಾ ಏನಾದ್ರೂ ಸೂಚನೆ ನೀಡರಬಹುದಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಪ್ರಮುಖವಾಗಿ ನಿನ್ನೆ ನಡೆದ ಸಭೆಯಲ್ಲಿಸಚಿವಸಂಪುಟ ವಿಸ್ತರಣೆ ಬಗ್ಗೆ  ಸಿಎಂ ಪ್ರಸ್ತಾಪ […]

  ರಾಜಕೀಯವಾಗಿ ಯಾರೂ ಯಾರನ್ನೂ ಮುಗಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಬಿಎಸ್‌ವೈ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿ, ಬಸವರಾಜ್‌ ಬೊಮ್ಮಾಯಿಯವರನ್ನ ಸಿಎಂ ಮಾಡ್ತಾ ಇದ್ದಂತೆ, ಬಿಜೆಪಿಯಲ್ಲಿ ಬಿಎಸ್‌ಸವೈಗೆ ಬೆಲೆ ಇಲ್ಲ. ಇನ್ನು ಅವರಿಗೆ ಸ್ಥಾನಮಾನ ಸಿಗಲ್ಲ ಎಂಧು ಮಾತನಾಡಿಕೊಳುತ್ತಿದ್ದರು. ಈ ಮಾತು ಪದೇ ಪದೇ ಕೇಳಿ ಬರ್ತಾನೇ ಇರುತ್ತೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಸ್‌ವೈ ಮಾತನಾಡಿದ್ದಾರೆ. ಬಿಜೆಪಿಯಲ್ಲಿ ನನಗೆ ನನ್ನದೇ ಆದ ಶಕ್ತಿ ಇದೆ. […]

ಮಂಡ್ಯ ಜೆಡಿಎಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಸ್ವಪಕ್ಷೀಯ ಶಸಕರ ವಿರುದ್ಧವೇ ಮಾಜಿ ಎಮ್‌ಎಲ್‌ಸಿ ಅಸನಾಧಾನ ಹೊರಹಾಕಿದ್ದಾರೆ. ಶಾಸಕ ಸುರೇಶ್‌ ಗೌಡ ವಿರುದ್ಧ  ಅಪ್ಪಾಜಿ ಗೌಡ ಅಸಮಾಧಾನ ಹೊರಹಾಕಿದ್ದಾರೆ.  ಸುರೇಶ್‌ಗೌಡ ಚುನಾವಣೆಯಲ್ಲಿ ಆರ್ಥಿಕ ಸಹಾಯ ಮಾಡಿದ್ದೆ, ಶಿವರಾಮೇಗೌಡ ಚುನಾವಣೆಯಲ್ಲಿ ಸಹಾಯ ಮಾಡಿದ್ದೆ. ಆದರೆ ನನ್ನ ಚುನಾವಣೆಯಲ್ಲಿ ಯಾರೂ ಸಹಾಯ ಮಾಡಿಲ್ಲ ಎಂದು ಬಹಿರಂಗ ವೇದಿಕೆಯಲ್ಲಿಯೇ ಅಸಮಾಧಾನ ಹೊರಹಾಕಿದ್ದಾರೆ. ಸುರೇಶ್‌ ಗೌಡರಿಂಧ ಹಣ ಪಡೆದಿದ್ದೇನೆ ಎನ್ನುವ ಆರೋಪ ಮಾಡಿದ್ರು. ಆದರೆ ನಾಣು ಸುರೇಶ್‌ ಗೌಡರಿಂದ […]

ಈಗಾಗಲೇ ಆಪ್ತಮಿತ್ರ ಶ್ರೀರಾಮುಲು ಅವರನ್ನ ಕಳೆದಕೊಂಡ ರೆಡ್ಡಿಗೆ ಮತ್ತೊಂದು ಆಘಾತವಾಗಿದೆ. ಜನಾರ್ಧನ್‌ ರೆಡ್ಡಿ ಅವರ ಸಹೋದರ ಸೋಮಶೇಖರ್‌ ರೆಡ್ಡಿ ಸಹ ಅವರಿಂದ ದೂರವಾದಂತೆ ಕಾಣ್ತಿದೆ. ಯಾಕಂದ್ರೆ ಜನಾರ್ಧನ್‌ ರೆಡ್ಡಿ ಹೊಸ ಪಕ್ಷ ಕಟ್ಟಲ್ಲ. ಒಂದು ವೇಳೆ ಅವರು ಹೊಸ ಪಕ್ಷ ಕಟ್ಟಿದರೆ ನಾನು ಹೋಗಲ್ಲ ಎನ್ನುವ ಹೇಳಿಕೆ ಕೊಟ್ಟಿದ್ದರು. ಬಿಜೆಪಿಯಲ್ಲೇ ಇರ್ತೇನೆ ಎಂಧು ಹೇಳುವ ಮೂಲಕ ರೆಡ್ಡಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಒಂದು ಕಡೆ ಆಪ್ತಸ್ನೇಹಿತ ಶ್ರೀರಾಮುಲು, ಇನ್ನೊಂದು ಕಡೆ ಸಹೋದರ […]

ಇಂದು ಗಂಗಾವತಿಯಲ್ಲಿ ಜನಾರ್ಧನ್‌ ರೆಡ್ಡಿ ಅವರ ನೂತನ ಮನೆ ಪ್ರವೇಶ ಕಾರ್ಯಕ್ರಮ ನೆರವೇರಿತು. ತಮ್ಮ ಪತ್ನಿ ಲಕ್ಷ್ಮೀ ಅರುಣಾರಿಂದ ಗೃಹಪ್ರವೇಶ ಮಾಡಿದರು. ಗೃಹಪ್ರವೇಶ್ದಲ್ಲಿ 20ಕ್ಕೂ ಹೆಚ್ಚು ಅರ್ಚಕರು ಆಗಮಿಸಿದ್ದಾರೆ. ಅದ್ದೂರಿ ಪೂಜೆ ಮೂಲಕ ಗೃಹ ಪ್ರವೇಶ ಮಾಡಿದರು. ಆದರೆ ಗೃಹಪ್ರವೇಶಕ್ಕೆ ರೆಡ್ಡಿ ಗೈರುಹಾಜರಾಗಿದ್ದಾರೆ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

ರಾಜ್ಯ ಕಾಂಗ್ರೆಸ್ನಲ್ಲಿ ಯಾತ್ರೆ ಪರ್ವ ಆರಂಭವಾಗಿದೆ. ಬಸ್‌ ಯಾತ್ರೆಗೂ ಮೊದಲು ಹೆಲಿಕಾಪ್ಟರ್‌ ಯಾತ್ರೆಗೆ ನಾಯಕರು ಮುಂದಾಗಿದ್ದಾರೆ. ಜನವರಿ 9ರಿಂದ 25ರವರೆಗೂ, ಸಿದ್ದು, ಡಿಕೆಶಿ ಒಟ್ಟಿಗೆ ಒಟ್ಟಿಗೇ ಪ್ರಯಾಣ ಮಾಡಲು ತಯಾರಿ ನಡೆಸಿದ್ದಾರೆ. 20 ಜಿಲ್ಲೆಗಳಲ್ಲಿ 150 ಕ್ಷೇತ್ರಗಳಲ್ಲಿ ಸಮಾವೇಶ ನಡೆಸೋದಕ್ಕೆ ಪ್ಲ್ಯಾನ್‌ ಮಾಡಿದ್ದಾರೆ. ನಿತ್ಯವೂ 2 ಜಿಲ್ಲೆಯಂತೆ 15 ದಿನಗಳಲ್ಲಿ 20 ಜಿಲ್ಲೆಗಳಲ್ಲಿ ಸಮಾವೇಶ ನಡೆಸಿ ಕ್ಷೇತ್ದ ಸಮಸ್ಯೆ ಆಲಿಸಿ, ಈ ಮೂಲಕ 2023 ರ ಚುನಾವಣೆಗೆ ಒಗ್ಗಟ್ಟಿನ ಮಂತ್ರ […]

Advertisement

Wordpress Social Share Plugin powered by Ultimatelysocial