ರಾಜಕೀಯದಲ್ಲಿ ಮುಸ್ಲೀಂ ಪ್ರಾತಿನಿಧ್ಯಕ್ಕಾಗಿ ಮುಸ್ಲೀಂ ಸಮುದಾಯ ಬೇಡಿಕೆ ಇಟ್ಟಿದೆ. ಬೆಂಗಳೂರಿನಲ್ಲಿ ಮುಸ್ಲೀಂ ಸಮುದಾಯದಿಂದ ಮಹತ್ವದ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ 2023ರಲ್ಲಿ ಮುಸ್ಲೀಂ ಅಭ್ಯರ್ಥಿಗಳು ಹೆಚ್ಚೆಚ್ಚು ಟಿಕೆಟ್‌ ಪಡೆಯಬೇಕು ಅನ್ನೋ ವಿಚಾರದ ಬಗ್ಗೆ   ಸಭೆಯಲ್ಲಿ ಚರ್ಚೆ ನಡೆಸಲಾಯ್ತು. ಮುಸ್ಲಿಂ ನಾಯಕರ ಸಭೆಯಲ್ಲಿ ಮತ ವಿಭಜೆನ ಕುರಿತು ಚರ್ಚೆಯಾಗಿದೆ. ಗುಜರಾತ್‌ನಂತೆ ರಾಜ್ಯದಲ್ಲೂ ಮತ ವಿಭಜನೆ ಆತಂಕ ಎದುರಾಗಿದೆ. ಚುನಾವಣೆಗೆ 23-24 ಅಭ್ಯರ್ಥಿಗಳು ಮುಸ್ಲೀಂನಿಂದ ಟಿಕೆಟ್‌ ಪಡೆಯಬೇಕು. ಹೆಚ್ಚು ಟಿಕೆಟ್‌ ಕೇಳುವ ಅಗತ್ಯತೆ […]

ಹೆಚ್‌ ವಿಶ್ವನಾಥ್‌ ವಿರುದ್ಧ ಸಂಸದ ಶ್ರೀನಿವಾಸ್‌ ಗಂಭಿರ ಆರೋಪ ಮಾಡಿದ್ದಾರೆ. ಬೈ ಎಲೆಕ್ಷನ್‌ನಲ್ಲಿ ವಿಶ್ವನಾಥ್‌ 15 ಕೋಟಿ ತೆಗೆದುಕೊಂಡ್ರು 4-5 ಕೋಟಿ ಖರ್ಚು ಮಾಡಿ ಇನ್ನುಳಿದ 10 ಕೋಟಿ ಮನೆಗೆ ತೆಗೆದುಕೊಂಡು ಹೋದ್ರು ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಪೆಟ್ರೋಲ್‌ ಬಂಕ್‌, ಬಾರ್‌ ಮಾಡಿಕೊಂಡಿದ್ದು ಯಾರು ಎನ್ನುವ ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಶಾಸಕರ ವಿರುದ್ಧವೇ ಬಿಜೆಪಿ ಸಂಸದರು ಈ ರೀತಿ ಆರೋಪ ಮಾಡಿರೋದು ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ಬಹುದೊಡ್ಡ ಹೊಡೆತವಾಗಬಹುದು. […]

  ಕುಕ್ಕರ್‌ ಬ್ಲಾಸ್ಟ್‌  ಬಿಜೆಪಿ ಷಡ್ಯಂತ್ರ ಎಂದ ಡಿಕೆ ಶಿವಕುಮಾರ್ ಹೇಳಿಕೆಗೆ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಂತಹ ಘಟನೆ ಎಲ್ಲಿಯೂ ನಡೆಯಬಾರದು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೀತಾ ಇದೆ. ಯಾರನ್ನೂ ಸಮರ್ಥಿಸಿಕೊಳ್ಳಲ್ಲ. ಡಿಕೆಶಿ ಎಲ್ಲಿ ಹೇಳಿದ್ದಾರೆ? ಏನ್‌ ಹೇಳಿದ್ದಾರೆ ಗೊತ್ತಿಲ್ಲ ಅದರ ಬಗ್ಗೆ ನಾನೂ ಚರ್ಚೆ ಮಾಡ್ತೀನಿ ಎಂದು ಹೇಳಿದರು. ಆದರೆ ಮಂಗಳೂರಲ್ಲಿ ಕೋಮು ಸೌಹಾರ್ದ ಕದಡಲು ಇಂತಹ ಘಟನೆ ನಡೆಯುತ್ತೆ ಎಂದರು. […]

ಪಿಎಸ್‌ಐ (PSI) ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಡಿಜಿಪಿ (ADGP) ಅಮೃತ್‌ ಪೌಲ್‌ಗೆ ಜೈಲೆ ಗತಿಯಾಗಿದೆ. ಅಮೃತ್‌ ಪೌಲ್‌ ಜಾಮೀನು ಅರ್ಜಿಗೂ ತಿರಸ್ಕಾರ ಮಾಡಲಾಗಿದೆ. ಇದರ ಬನ್ನಲ್ಲೇ ಪೌಲ್‌ ಮಗಳು ನನ್ನ ತಂದೆ ಅಮಾಯಕ. ಯಾವುದೇ ತಪ್ಪು ಮಾಡಿಲ್ಲ. ತಂದೆ ಬಂಧನದಿಂದ ದೈಹಿಕ, ಮಾನಸಿಕ, ಆರ್ಥಿಕ ಕಷ್ಟ ಎದುರಾಗಿದೆ ಬ್ಯಾಂಕ್‌ ಲೋನ್‌ಗೆ ಇಎಂಐ ಕಟ್ಟೋಕೂ ಕೂಡ ಆಕ್ತಿಲ್ಲ ನಮಗೆ ನ್ಯಾಯ ಕೊಡಿಸಿ ಎಂದು ಪುತ್ರಿ ನುಹಾರ್‌ ಪತ್ರದ ಮೂಲಕ ಮನವಿ […]

ಕೇಂದ್ರ ಗೃಹ ಸಚಿವ ಅಮಿತ್‌ ಶಾ   ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಜೊತೆ ಸಭೆ ನಡೆಸಿದ್ದಾರೆ. ಇನ್ನೇನು ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಹೊತ್ತಿನಲ್ಲಿ ಅಮಿತ್‌ ಶಾ ಸಿಎಂ ಮಾತುಕತೆ ಭಾರೀ ಕುತೂಹಲ ಕೆರಳಿಸಿದೆ. ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನ ಫೈನಲ್‌ ಮಾಡುವ ತಯಾರಿಯಲ್ಲಿರುವ ಪಕ್ಷಕ್ಕೆ ಅಮಿತ್‌ ಶಾ ಏನಾದ್ರೂ ಸೂಚನೆ ನೀಡರಬಹುದಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಪ್ರಮುಖವಾಗಿ ನಿನ್ನೆ ನಡೆದ ಸಭೆಯಲ್ಲಿಸಚಿವಸಂಪುಟ ವಿಸ್ತರಣೆ ಬಗ್ಗೆ  ಸಿಎಂ ಪ್ರಸ್ತಾಪ […]

ಮಂಡ್ಯ ಜೆಡಿಎಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಸ್ವಪಕ್ಷೀಯ ಶಸಕರ ವಿರುದ್ಧವೇ ಮಾಜಿ ಎಮ್‌ಎಲ್‌ಸಿ ಅಸನಾಧಾನ ಹೊರಹಾಕಿದ್ದಾರೆ. ಶಾಸಕ ಸುರೇಶ್‌ ಗೌಡ ವಿರುದ್ಧ  ಅಪ್ಪಾಜಿ ಗೌಡ ಅಸಮಾಧಾನ ಹೊರಹಾಕಿದ್ದಾರೆ.  ಸುರೇಶ್‌ಗೌಡ ಚುನಾವಣೆಯಲ್ಲಿ ಆರ್ಥಿಕ ಸಹಾಯ ಮಾಡಿದ್ದೆ, ಶಿವರಾಮೇಗೌಡ ಚುನಾವಣೆಯಲ್ಲಿ ಸಹಾಯ ಮಾಡಿದ್ದೆ. ಆದರೆ ನನ್ನ ಚುನಾವಣೆಯಲ್ಲಿ ಯಾರೂ ಸಹಾಯ ಮಾಡಿಲ್ಲ ಎಂದು ಬಹಿರಂಗ ವೇದಿಕೆಯಲ್ಲಿಯೇ ಅಸಮಾಧಾನ ಹೊರಹಾಕಿದ್ದಾರೆ. ಸುರೇಶ್‌ ಗೌಡರಿಂಧ ಹಣ ಪಡೆದಿದ್ದೇನೆ ಎನ್ನುವ ಆರೋಪ ಮಾಡಿದ್ರು. ಆದರೆ ನಾಣು ಸುರೇಶ್‌ ಗೌಡರಿಂದ […]

ಭಾರತ –ಚೀನಾ ಗಡಿ ಸಂಘರ್ಷ ನಡೀತಾ ಇದ್ದು, ನಮ್ಮ ಯೋಧರು ಚೀನಾ ಯೋಧರನ್ನ ಹಿಮ್ಮೆಟ್ಟಿಸಿದ್ದಾರೆ. ನಮ್ಮ ಸೈನಿಕರಿಗೆ ಗಂಭೀರವಾದ ಗಾಯಗಳಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ನಮ್ಮ ಗಡಿಯೊಳಗೆ ಚೀನೀ ಸೈನಿಕರ ಉಲ್ಲಂಘನೆಯ ಪ್ರಯತ್ನವನ್ನು ನಿಲ್ಲಿಸಲು ನಮ್ಮ ಸಶಸ್ತ್ರ ಪಡೆಗಳು ಯಾವಾಗಲೂ ಸಿದ್ಧವಾಗಿವೆ. ನಮ್ಮ ಸಶಸ್ತ್ರ ಪಡೆಗಳು ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿವೆ, ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯ, ಶೌರ್ಯ ಮತ್ತು ಬದ್ಧತೆಯನ್ನು ದೇಶದ […]

ಮುರುಘಾ ಮಠಕ್ಕೆ    ಹೊಸ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ್ ಅವರನ್ನ ಮುರುಘಾ ಮಠಕ್ಕೆ ಆಡಳಿತಾಧಿಕಾರಿಯಾಗಿ ನೇಮಿಸಿ ರಾಜ್ಯ ಸರ್ಕಾರ ಉಪಕಾರ್ಯದರ್ಶಿ ಟಿಸಿ ಕಾಂತರಾಜ್ ಆದೇಶ ಹೊರಡಿಸಿದ್ದಾರೆ. ಮುರುಘ ಮಠದ ಲೆಕ್ಕಪತ್ರ,  ಹಣಕಾಸು ನಿರ್ವಹಣೆ ಮುರುಘ ಮಠದ ಚರ, ಸ್ಥಿರಾಸ್ತಿ, ಟ್ರಸ್ಟ್ , ಶಿಕ್ಷಣ ಸಂಸ್ಥೆ ಜವಾಬ್ದಾರಿ ಹಣಕಾಸು ದುರುಪಯೋಗ ತಡೆಯಲು ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಮಾಜಿ ಸಚಿವ, ಕಾಂಗ್ರೆಸ್‌ ಲೀಡರ್‌, ರಾಜಾ ಪಟೇರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಪವಾಯಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುವ ವೇಳೆ ಸಂವಿಧಾನವನ್ನು ಉಳಿಸಲು ಮೋದಿಯನ್ನು ಕೊಲ್ಲಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ರಾಜಾ ಪಟೇರಿಯಾ ವಿವಾದ ಸೃಷ್ಟಿಸಿದ್ದರು. ಈ ಹೇಳಿಕೆ ಬೆನ್ನಲ್ಲೇ ವಿಶೇಷ ಪೊಲೀಸ್ ತಂಡ ದಾಮೋಹ್ ಜಿಲ್ಲೆಯ ಹಟಾ ಪಟ್ಟಣದಲ್ಲಿರುವ ಪಟೇರಿಯಾ ಅವರ ನಿವಾಸಕ್ಕೆ ಹೋಗಿ ಅವರನ್ನು ಬಂಧಿಸಿದೆ. ಇನ್ನು ಹೇಳಿಕೆಗೆ ಸಂಬಂಧಪಟ್ಟಂತೆ  ರಾಜ್ಯ ಕಾಂಗ್ರೆಸ್‌ ನಾಯಕರು, ಪಟೇರಿಯಾ ಹೇಳಿಕೆಗೂ ನಮಗೂ […]

ಇಂದು ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೀತಾ ಇದೆ.  ಪ್ರಧಾನಿ ಮೋದಿಯವರೂ ಕೂಡ ಅಹಮದಾಬಾದ್ ನ ಸಬರಿಮತಿ ಕ್ಷೇತ್ರದ ರಾಣಿಪ್ ಮತಗಟ್ಟೆಗೆ ಹೋಗಿ ಮತ ಚಲಾವಣೆ ಮಾಡಿದರು. ಮತಚಲಾವಣೆ ಬಳಿಕ  ಮಾತನಾಡಿದ ಪ್ರಧಾನಿ ಮೋದಿ – ದೇಶದಾದ್ಯಂತ ಚುನಾವಣೆಗಳು ನಡೀತಾ ಇದೆ. ಜೊತೆಗೆ ಸದ್ಯದಲ್ಲಿಯೇ ಸಾಕಷ್ಟು ಚುನಾವಣೆ ಎದುರಾಗ್ತಿದೆ. ಎಲ್ಲಾ ಚುನಾವಣೆಯಲ್ಲೂ ಮತದಾರರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತ ಚಲಾಯಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಜೊತೆಗೆ […]

Advertisement

Wordpress Social Share Plugin powered by Ultimatelysocial