ಬೆಂಗಳೂರು ನಗರವನ್ನು ಮಾದರಿ ನಗರವಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ:ಸಿಎಂ ಬೊಮ್ಮಾಯಿ

ಬೆಂಗಳೂರು ನಗರವನ್ನು ಮಾದರಿ ನಗರವಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವಿಧಾನಸಭೆಗೆ ತಿಳಿಸಿದ್ದಾರೆ.ಇಂದು ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಸ್ಮಾರ್ಟ್ ಸಿಟಿ ಅನುದಾನ ಮಾತ್ರವಲ್ಲದೆ, ನಗರೋತ್ಥಾನ ಯೋಜನೆ, ಬಿಬಿಎಂಪಿ ಹಾಗೂ ಇತರ ಇಲಾಖೆಗಳ ಅನುದಾನವನ್ನು ಬಳಸಿಕೊಂಡು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಅತ್ಯಾಧುನಿಕ ಸಿಗ್ನಲ್ ವ್ಯವಸ್ಥೆ, ಸುವ್ಯವಸ್ಥಿತ ಪಾರ್ಕಿಂಗ್ ಮಾತ್ರವಲ್ಲದೆ ಪೊಲೀಸರಿಗೆ ವಿಶೇಷ ಸಮವಸ್ತ್ರ ಸೇರಿದಂತೆ ಸಣ್ಣಪುಟ್ಟ ವಿಷಯಗಳ ಬಗ್ಗೆಯೂ ಗಮನ ಹರಿಸಲಾಗುತ್ತಿದೆ ಎಂದರು.ಬೆಂಗಳೂರು ನಗರವನ್ನು ಮಾದರಿ ನಗರವಾಗಿ ಅಭಿವೃದ್ಧಿಪಡಿಸಿ, ಇದೇ ಮಾದರಿಯಲ್ಲಿ ರಾಜ್ಯದ ಇತರ ಪ್ರಮುಖ ನಗರಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಿಎಂ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮರೆಯಲಾಗದ ರುಚಿ ಚಿಕನ್ ಲಿವರ್ ಡ್ರೈ

Tue Dec 21 , 2021
ಅಡುಗೆಯಲ್ಲಿ, ವಿಶೇಷವಾಗಿ ಮಾಡುವ ಅಡುಗೆ ಮಾಂಸದ ಅಡುಗೆಯಾಗಿದೆ. ನಾವು ಅಡುಗೆ ಮಾಡಲು ಬಳಸುವ ಪದಾರ್ಥಗಳು ಹಿಡಿತದಲ್ಲಿದ್ದಾಗ ಮಾತ್ರ ಅಡುಗೆ ರುಚಿಯಾಗಿ ಆಗುತ್ತದೆ. ನಾವು ಇಂದು ಖಾರವಾದ ಅಡುಗೆ ತಿನ್ನಲು ಬಯಸುವವರಿಗಾಗಿ ರುಚಿಯಾದ ಖಾರವಾದ ಚಿಕನ್ ಲಿವರ್ ಡ್ರೈ ಮಾಡುವ ವಿಧಾನ ಹೇಳುತ್ತಿದ್ದೇವೆ ಬೇಕಾಗುವ ಸಾಮಗ್ರಿಗಳು * ಚಿಕನ್ ಲಿವರ್- ಅರ್ಧ ಕೆಜಿ * ಈರುಳ್ಳಿ-3 * ಟೊಮೆಟೊ- 1 * ಹಸಿಮೆಣಸಿನಕಾಯಿ -4 * ಕರಿಬೇವು – ಸ್ವಲ್ಪ, * ಶುಂಠಿ-ಬೆಳ್ಳುಳ್ಳಿ […]

Advertisement

Wordpress Social Share Plugin powered by Ultimatelysocial