KGF2:ಅಮೀರ್ ಖಾನ್ ನಿಂದ ಕೆಜಿಎಫ್2 ಪ್ರಮೋಷನ್;

ಕೆಜಿಎಫ್2.. ಯಾವಾಗ ಈ ಸಿನಿಮಾದ ದರ್ಶನವಾಗುತ್ತೋ… ಆ ದಿವ್ಯ ಘಳಿಗೆಗೆ ಸಮಯ ಬೇಗ ಒದಗಿ ಬರಬಾರದಾ ಎಂದು ಸಿನಿ ಪ್ರೇಮಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 14ರಂದು ಕೆಜಿಎಫ್ 2 ರಿಲೀಸ್ ಆಗುತ್ತೆ ಅಂತ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.

ಆದ್ರೆ ಅಷ್ಟು ದಿನಗಳನ್ನ ಕಾಯೋದಕ್ಕೂ ಫ್ಯಾನ್ಸ್ ಗೆ ಆಗ್ತಾ ಇಲ್ಲ. ಜಪ ಮಾಡಿಕೊಂಡು ಕೆಜಿಎಫ್ ಕೆಜಿಎಫ್ ಎಂದು ಜಪ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಖುಷಿಯ ಸುದ್ದಿ ಏನಪ್ಪ ಅಂದ್ರೆ ಲಾಲ್ ಸಿಂಗ್ ಚಡ್ಡಾ ನಮ್ಮ ಕೆಜಿಎಫ್ ಗೆ ಸಪೋರ್ಟ್ ಮಾಡ್ತೀನಿ ಎಂದಿದ್ದಾರೆ.

ಎಸ್.. ಕೆಜಿಎಫ್ 1 ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಅಷ್ಟೇ ಕಾತುರ ಕೆಜಿಎಫ್2 ನೋಡಲು ಎಲ್ಲರಲ್ಲೂ ಕಾಣ್ತಿದೆ. ಆದ್ರೆ ಈ ಮಧ್ಯೆ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಸಿನಿಮಾಗೆ ಸಪೋರ್ಟ್ ಮಾಡ್ತೀನಿ ಅಂತ ಹೇಳಿರೋ ಮಾತು ಎಲ್ಲರನ್ನ ಮತ್ತಷ್ಟು ಖುಷಿಗೊಳಿಸಿದೆ. ನನ್ನಿಂದ ಸಿನಿಮಾಗೆ ಏನು ಸಪೋರ್ಟ್ ಬೇಕಿದ್ದರು ಕೇಳಿ ಮಾಡ್ತೇನೆ ಅಂತ ಹೇಳಿದ್ದೀನಿ ಅಂತ ಅಮೀರ್ ಖಾನ್ ಹೇಳಿದ್ದಾರೆ.

ಇದಕ್ಕೂ ಮುನ್ನ ಅಮೀರ್ ಖಾನ್ , ರಾಕಿ ಬಾಯ್ ಬಳಿ ಕ್ಷಮೆ ಕೇಳಿದ್ದ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಆದ್ರೆ ಯಾಕೆ ಕ್ಷಮೆ ಕೇಳಿದ್ದಾರೆ ಎಂಬ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್, ಯಶ್, ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಗೊತ್ತು ಅಂತಷ್ಟೇ ಹೇಳಿದ್ರು. ಆದ್ರೂ ಅಭಿಮಾನಿಗಳಲ್ಲಿ ಅದೊಂದು ಪ್ರಶ್ನೆ ಈಗಲೂ ಕೊರೆಯುತ್ತಲೆ ಇದೆ. ಈಗಾಗ್ಲೇ ಕೆಜಿಎಫ್ 2 ಸಿನಿಮಾ ತನ್ನ ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಂಡಿದೆ. ಈ ಹಿನ್ನೆಲೆ ಸಾಕಷ್ಟು ಸಿನಿಮಾಗಳು ರಿಲೀಸ್ ಡೇಟ್ ಮುಂದೂಡಿದ್ದವು. ಆದ್ರೆ ಈ ಮಧ್ಯೆ ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಅದೇ ಡೇಟ್ ನಲ್ಲಿ ತೆರೆಗೆ ಬರಲು ಸಜ್ಜಾಗಿತ್ತು. ಇದೀಗ ಆ ನಿರ್ಧಾರದಿಂದಲೂ ಹಿಂದೆ ಸರಿದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುಳಸಿ, ಪವಿತ್ರ ಮೂಲಿಕೆ

Tue Jan 25 , 2022
ಭಾರತದಲ್ಲಿ ತುಳಸಿ ಎಂದು ಕರೆಯಲ್ಪಡುವ ಓಸಿಮಮ್ ಗರ್ಭಗುಡಿ (ಪವಿತ್ರ ತುಳಸಿ) ವೈದಿಕ ಸಂಪ್ರದಾಯದಲ್ಲಿ ಸರ್ವತ್ರವಾಗಿದೆ. ಬಹುಶಃ ಗುಣಪಡಿಸುವ ಮೂಲಿಕೆಯಾಗಿ ಅದರ ಪಾತ್ರವು ಅದರ “ಪವಿತ್ರ” ಸೂಚ್ಯಾರ್ಥದಲ್ಲಿ ಪ್ರಮುಖವಾಗಿದೆ. ತುಳಸಿ ಭಾರತದ ಎಲ್ಲಾ ಮನೆಯ ಸಸ್ಯಗಳಲ್ಲಿ ಅತ್ಯಂತ ಸಾಮಾನ್ಯ ಮತ್ತು ಪೂಜ್ಯವಾಗಿದೆ. ಶ್ರೀಕೃಷ್ಣನು ಹೇಳುತ್ತಾನೆ, “ನನಗೆ ಕೇವಲ ತುಳಸಿ ಎಲೆ ಮತ್ತು ಹಪ್ಪಳದ ನೀರನ್ನು ಅರ್ಪಿಸುವ ಭಕ್ತನಿಗೆ ನಾನು ನನ್ನನ್ನು ನೀಡುತ್ತೇನೆ”. ತುಳಸಿ (ಪವಿತ್ರ ತುಳಸಿ) ಸೂಕ್ಷ್ಮವಾದ ನೇರಳೆ ಮತ್ತು ಹಸಿರು […]

Advertisement

Wordpress Social Share Plugin powered by Ultimatelysocial