ನವದೆಹಲಿ: ಗಾಲ್ವಾನ್‌ ಘರ್ಷಣೆಯಲ್ಲಿ ಸತ್ತವರಿಗಿಂತ ನದಿಯಲ್ಲಿ ಕೊಚ್ಚಿಹೋದ ಚೀನಾ ಸೈನಿಕರೇ ಅಧಿಕ

ನವದೆಹಲಿ: ಗಾಲ್ವಾನ್‌ ಕಣಿವೆಯಲ್ಲಿ ಭಾರತದೊಂದಿಗೆ 2020ರಲ್ಲಿ ನಡೆದ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಸೈನಿಕರ ಸಂಖ್ಯೆಯು ಅಧಿಕೃತ ಸಂಖ್ಯೆಗಿಂತಲೂ ಅಧಿಕವಾಗಿರುವ ಸಾಧ್ಯತೆಗಳಿವೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ಬುಧವಾರ ವರದಿ ಮಾಡಿದೆ.ಘರ್ಷಣೆಯಲ್ಲಿ ಮೃತಪಟ್ಟವರಿಗಿಂತಲೂ, ಗಾಲ್ವಾನ್‌ ನದಿಯನ್ನು ದಾಟುವ ಧಾವಂತದಲ್ಲಿ ಕೊಚ್ಚಿಹೋದವರ ಸಂಖ್ಯೆಯೇ ಅಧಿಕವಾಗಿದೆ. ಚೀನಾ ಈ ವಿಚಾರವನ್ನು ಹೊರ ಜಗತ್ತಿಗೆ ಬಹಿರಂಗಪಡಿಸಿಲ್ಲ ಎಂದು ‘ದಿ ಕ್ಲಾಕ್ಸನ್‌’ ವರದಿ ಮಾಡಿದೆ.ಸಂಶೋಧಕರು ಮತ್ತು ಚೀನಾದ ಬ್ಲಾಗರ್‌ಗಳ ಸಂಶೋಧನೆಗಳನ್ನು ಉಲ್ಲೇಖಿಸಿ ‘ಕ್ಲಾಕ್ಸನ್‌’ ವರದಿ ಮಾಡಿದೆ. ಮಾಹಿತಿ ಒದಗಿಸಿರುವವರು ಹೆಸರುಗಳನ್ನು ಭದ್ರತೆ ಭದ್ರತೆಯ ಕಾರಣದಿಂದ ಬಹಿರಂಗಪಡಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.’ಚೀನೀ ಸಾವು ನೋವುಗಳು ಅಧಿಕೃತ ಸಂಖ್ಯೆಗಿಂತಲೂ ಅಧಿಕ ಎಂಬ ವಾದಗಳು ಹೊಸದೇನಲ್ಲ. ಆದರೂ ಸಾಮಾಜಿಕ ಮಾಧ್ಯಮ ಸಂಶೋಧಕರ ಗುಂಪು ಒದಗಿಸಿದ ಪುರಾವೆಗಳ ಆಧಾರದ ಮೇಲೆ ಪ್ರಕಟಿಸಿರುವ ವರದಿಯು, ಮೃತಪಟ್ಟ ಸೈನಿಕರ ಸಂಖ್ಯೆ ಅಧಿಕ ಎಂಬುದನ್ನು ಬೆಂಬಲಿಸುತ್ತದೆ’ ಎಂದು ಪತ್ರಿಕೆ ಹೇಳಿಕೊಂಡಿದೆ.2020ರ ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದಿದ್ದ ಘರ್ಷಣೆಯ ನಂತರ ಪೂರ್ವ ಲಡಾಖ್ ಗಡಿ ಉದ್ವಿಗ್ನಗೊಂಡಿತ್ತು.ಭಾರತೀಯ ಸೇನೆಯ ಇಪ್ಪತ್ತು ಸಿಬ್ಬಂದಿ ಘರ್ಷಣೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ್ದರು. ಇದು ದಶಕಗಳಲ್ಲಿ ಎರಡು ಕಡೆಯ ನಡುವಿನ ಅತ್ಯಂತ ಗಂಭೀರವಾದ ಮಿಲಿಟರಿ ಸಂಘರ್ಷವೆಂದೇ ಗುರಿತಿಸಲ್ಪಟ್ಟಿತ್ತು.ಭಾರತೀಯ ಸೇನೆಯೊಂದಿಗಿನ ಘರ್ಷಣೆಯಲ್ಲಿ ಚೀನಾ ಸೇನೆಯ ಐವರು ಮಿಲಿಟರಿ ಅಧಿಕಾರಿಗಳು ಮತ್ತು ಸೈನಿಕರು ಮೃತಪಟ್ಟಿದ್ದಾರೆ ಎಂದು ಚೀನಾ ಅಧಿಕೃತವಾಗಿ ಒಪ್ಪಿಕೊಂಡಿತ್ತು. ಆದರೂ ಸಾವಿನ ಸಂಖ್ಯೆ ಹೆಚ್ಚು ಎಂಬ ವಾದ ವ್ಯಾಪಕವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೀವನ ಪ್ರಮಾಣ ಪತ್ರಗಳ ಬಯೊಮೆಟ್ರಿಕ್‌ ಪ್ರಮಾಣೀಕರಣ ಮಾಡುವ ಕುರಿತು ಇಲ್ಲಿದೆ ವಿವರ

Thu Feb 3 , 2022
ಪಿಂಚಣಿ ಸಂಬಂಧಿತ ಹಲವು ಸೌಲಭ್ಯಗಳನ್ನು ಅನುಭವಿಸಲು ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಅವಕಾಶ ಮಾಡಿಕೊಟ್ಟಿದೆ. ಆದರೆ, ನಿವೃತ್ತ ನೌಕರರು ಅಂದರೆ ಹಿರಿಯ ನಾಗರಿಕರು ಸಮೀಪದಲ್ಲಿನ ಇಪಿಎಫ್‌ಒ ಕಚೇರಿಗೆ ಭೇಟಿ ನೀಡಿ ಬಯೋಮೆಟ್ರಿಕ್‌ ಪ್ರಮಾಣೀಕರಣ (ಬೆರಳಚ್ಚು ಪ್ರಮಾಣೀಕರಣ) ಮಾಡಿಸುವುದು ಕಡ್ಡಾಯವಾಗಿದೆ.ಇದು ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಬಹಳ ಮುಖ್ಯ.ನಿವೃತ್ತ ನೌಕರರ ಹೆಸರಲ್ಲಿ ಬೇರೆಯವರು ಸಹಿ ಮಾಡುವುದು, ಜೀವಿತಾವಧಿ ಪ್ರಮಾಣಪತ್ರ ಸಲ್ಲಿಸಿ ಪಿಂಚಣಿ ನುಂಗುವುದನ್ನು ತಡೆಯಲು ಡಿಜಿಟಲ್‌ ಪ್ರಮಾಣಪತ್ರಗಳನ್ನು ಕೇಂದ್ರ ಸರಕಾರವು ಜಾರಿಗೆ […]

Advertisement

Wordpress Social Share Plugin powered by Ultimatelysocial