ಅಕ್ರಮವಾಗಿ ಶಸ್ತ್ರಾಸ್ತ್ರ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ಪೊಲೀಸರ ದಾಳಿ, ಇಬ್ಬರ ಬಂಧನ

 

ಲೌನ್ (ಯುಪಿ), ಫೆ. 10 – ಹಳ್ಳಿಯೊಂದರಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಖಚಿತ ಸುಳಿವಿನ ಮೇರೆಗೆ ಪೊಲೀಸರು ಅಕ್ರಮ ಪಿಸ್ತೂಲ್ ಮತ್ತು ಬಂದೂಕುಗಳನ್ನು ತಯಾರಿಸುತ್ತಿದ್ದ ಇಬ್ಬರನ್ನು ಬಂಧಿಸಿ ವಿಚಾರಣೆ ವೇಲೆ ಸಿಕ್ಕ ಮಾಹಿತಿ ಮೇರೆಗೆ ಬೋಹಾದ್‍ಪುರದ ಅರಣ್ಯದಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆಯನ್ನು ಭೇದಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಈರಾಜ್ ರಾಜಾ ತಿಳಿಸಿದಾರೆ.

ಏಳು 315-ಬೋರ್ ಪಿಸ್ತೂಲ್ , ಒಂದು ಡಬಲ್ ಬ್ಯಾರೆಲ್ ಗನ್, ಒಂದು 12-ಬೋರ್ ಪಿಸ್ತೂಲ್ ಸೇರಿದಂತೆ ಅಕ್ರಮವಾಗಿ ಆಯುಧಗಳನ್ನು ತಯಾರಿಸಲು ಬಳಸುತ್ತಿದ್ದ ವಸ್ತುಗಳು ಮತ್ತು ಎರಡು ಜೀವಂತ ಕಾಟ್ರಿಡ್ಜ್‍ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ,

ಬಂಧಿತರು 5,000 ರಿಂದ 7,000 ರೂ.ಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ ಇಬ್ಬರು ಆರೋಪಿಗಳಿಂದ ಈ ಶಸ್ತ್ರಾಸ್ತ್ರಗಳನ್ನು ಯಾರು ಖರೀದಿಸಿದ್ದಾರೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ತಿಳಿಸಿದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುತೂಹಲ ಹೊತ್ತ ‘ಮೇರಿ’ ಟ್ರೇಲರ್ ರಿಲೀಸ್- ಫೆಬ್ರವರಿ 24ಕ್ಕೆ ತೆರೆಗೆ ಬರಲಿದೆ ಸಿನಿಮಾ.

Fri Feb 10 , 2023
ಕುತೂಹಲ ಹೊತ್ತ ‘ಮೇರಿ’ ಟ್ರೇಲರ್ ರಿಲೀಸ್- ಫೆಬ್ರವರಿ 24ಕ್ಕೆ ತೆರೆಗೆ ಬರಲಿದೆ ಸಿನಿಮಾ ‘ಆನ’ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ಮನೋಜ್ ಪಿ ನಡಲುಮನೆ ನಿರ್ದೇಶನದ ಎರಡನೇ ಸಿನಿಮಾ ವೆಂಚರ್ ‘ಮೇರಿ’. ಫಸ್ಟ್ ಲುಕ್ ಮೂಲಕ ಗಮನ ಸೆಳೆದ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಥ್ರಿಲ್ಲರ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಇಂಟ್ರಸ್ಟಿಂಗ್ ಟ್ರೇಲರ್ ಹೊತ್ತು ಬಂದ ಚಿತ್ರತಂಡ ಸಿನಿಮಾ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದೆ. ‘ಮೇರಿ’ ಪಶ್ಚಿಮ ಘಟ್ಟದ […]

Advertisement

Wordpress Social Share Plugin powered by Ultimatelysocial