ಅಥಣಿ ಪಟ್ಟಣದ ಚರ್ಮ ಕುಶಲ ಕರ್ಮಿಗಳಿಗೆ ಮನೆ ದುರಸ್ಥಿ ಮಾಡಿಕೊಳ್ಳಲು ಅನುದಾನ ಬಿಡುಗಡೆ ಸಮಾರಂಭ ನಡೆಯಿತು

ಅಥಣಿ ಪಟ್ಟಣದ ಬಾಬು ಜಗಜಿವನರಾಮ್ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮಲ್ಲಿ ಡಾ ಬಾಬು ಜಗಜಿವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ದಿಂದ 400 ಫಲಾನುಭವಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಅನುದಾನವನ್ನ ಚಕ್ ಮೂಲಕ ಶಾಸಕ ಮಹೇಶ್ ಕುಮಠಳ್ಳಿ ಫಲಾನುಭವಿಗಳಿಗೆ ವಿತರಿಸಿದರು

ನಂತರ ಮಾಧ್ಯಮದೊಂದಿಗೆ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಮಾತನಾಡಿ ಬಾಬು ಜಗಜಿವನರಾಮ್ ಕೈಗಾರಿಕಾ ಅಭಿವೃದ್ಧಿ ನಿಗಮ ದಿಂದ ನಾಲ್ಕು ಕೋಟಿ ರೂಪಾಯಿ ಅನುದಾನ ದಲ್ಲಿ ನಾಲ್ಕುನೂರು ಫಲಾನುಭವಿಗಳನ್ನೂ ಆಯ್ಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಮಂಜೂರು ಮಾಡುವ ಭರವಸೆ ನೀಡಿದರು

ಇನ್ನೂ ಕೆರೆ ಅಭಿವೃದ್ಧಿಯಲ್ಲಿ ಗುತ್ತಿಗೆದಾರರ ಕಳಪೆ ಕಾಮಗಾರಿ ಮಾಡಿದ ಪರಿಣಾಮ ನಿರ್ಮಾಣ ಹಂತದಲ್ಲೆ ತಡೆಗೋಡೆ ಕುಸಿದುಬಿದ್ದಿದೆ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕರು ಪುರಸಭೆ ಮುಖ್ಯಾಧಿಕಾರಿ ಗುತ್ತಿಗೆದಾರನಿಗೆ ನೋಟಿಸ್ ನೀಡಿದ್ದಾರೆ ಕುಸಿದು ಬಿದ್ದ ತಡೆಗೋಡೆಯನ್ನ ಗುತ್ತಿಗೆದಾರರ ತನ್ನ ಸ್ವಂತ ಖರ್ಚಿನಲ್ಲಿ ನಿರ್ಮಿಸಿ ಕೊಡುವುದಾಗಿ ಹೆಳಿದ್ದಾರೆ ಎಂದು ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನನ್ನ ಸಮರ್ಥಿಸಿಕೊಂಡಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ

ಇದೆ ಸಂದರ್ಭದಲ್ಲಿ ಹರಳಯ್ಯಾ ಸಮಾಜ ಮುಖಂಡರಾದ ಡಾ” ಅನೀಲ್ ಸೌದಾಗರ, ದಿಲೀಪ ಕಾಂಬಳೆ,ಶಿವಾನಂದ ಸೌದಾಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು

Please follow and like us:

Leave a Reply

Your email address will not be published. Required fields are marked *

Next Post

6 ತಿಂಗಳು ಕಲ್ಯಾಣ ಮಂಟಪಗಳನ್ನುಮುಚ್ಚಲು ಮಾಲೀಕರಿಗೆ ಸೂಚನೆ

Sat Apr 10 , 2021
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 6 ತಿಂಗಳವರೆಗೆ ಅನ್ವಯವಾಗುವಂತೆ ನಗರದಲ್ಲಿರುವ ಎಲ್ಲಾ ಛತ್ರಗಳನ್ನು(ಚೌಲ್ಟ್ರಿ) ಬಂದ್ ಮಾಡಲು ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವಾರಗಳಿಂದ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮದುವೆ ಮಂಟಪದಲ್ಲಿ ಹೆಚ್ಚು ಜನರು ಗುಂಪುಗೂಡುವುದನ್ನು ತಡೆಗಟ್ಟಬೇಕು. ಹೀಗಾಗಿ ಮುಂದಿನ ಆರು ತಿಂಗಳು ಮದುವೆ […]

Advertisement

Wordpress Social Share Plugin powered by Ultimatelysocial