ಅಸ್ಸಾಂನಲ್ಲಿ ಪ್ರವಾಹ  

ಅಸ್ಸಾಂನಲ್ಲಿನ ಪ್ರವಾಹವು ೨೬ ಜಿಲ್ಲೆಗಳ ಮೇಲೆ ಪರಿಣಾಮ ಬೀರಿದ್ದು, ಜುಲೈ ೨೨ ರವರೆಗೆ ೮೯ ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಎಎಸ್ ಡಿಎಂಎ ಬುಧವಾರ ನೀಡಿದ ವರದಿಯ ಪ್ರಕಾರ, ಬಾರ್ಪೆಟಾ, ದಿಬ್ರುಘರ್, ಕೊಕ್ರಜಾರ್, ಬೊಂಗೈಗಾAವ್, ಟಿನ್ಸುಕಿಯಾ, ಇತರ ಜಿಲ್ಲೆಗಳಲ್ಲಿ ಪ್ರವಾಹ ತೀವ್ರವಾಗಿ ಪರಿಣಾಮ ಬೀರಿದ್ದು ಅಪಾರ ನಷ್ಟ ಸಂಭವಿಸಿದೆ. ಮಾತ್ರವಲ್ಲದೆ ೨೬,೩೧,೩೪೩ ಜನರನ್ನು ಪ್ರವಾಹ ಬಾಧಿಸಿದೆ. ಬ್ರಹ್ಮಪುತ್ರ ಮತ್ತು ಅದರ ಉಪನದಿಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವ ಕಾರಣ ಸುಮಾರು ೨,೫೨೫ ಗ್ರಾಮಗಳು ಸಂಕಷ್ಟಕ್ಕೀಡಾಗಿದ್ದು, ೧,೧೫,೫೧೫,೨೫ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ನಾಶವಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಬೆಮೆಲ್ ಜತೆಗೆ ಕೈ ಜೋಡಿಸಿದ ರಕ್ಷಣ ಇಲಾಖೆ

Thu Jul 23 , 2020
ಮೇಕ್ ಇನ್ ಇಂಡಿಯಾ ಯೋಜನೆಗೆ ಸಹಕಾರ ನೀಡುವಲ್ಲಿ ಮತ್ತೂಂದು ಹೆಜ್ಜೆಯನ್ನಿಟ್ಟಿರುವ ರಕ್ಷಣ ಇಲಾಖೆ, ಬೆಂಗಳೂರಿನ ಭಾರತ್ ಅರ್ತ್ ಮೂವರ್ಸ್ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇತ್ತೀಚೆಗೆ ಗಾಲ್ವಾನ್ ಕಣಿವೆಯಲ್ಲಿ ಚೀನದೊಂದಿಗೆ ಮುಖಾಮುಖಿಯಾದಾಗ ಅಲ್ಲಿನ ದುರ್ಗಮ ಹಾದಿಯಲ್ಲಿ ಮುಂದುವರಿಯಲು ಟ್ಯಾಂಕರ್‌ಗಳಿಗೆ ಅಡಚಣೆಯಾಗಿದ್ದರಿಂದ ನೇಗಿಲು ಮಾದರಿಯ ಸಲಕರಣೆಯನ್ನು ಜೋಡಿಸಲು ನಿರ್ಧರಿಸಿದ್ದು, ಅದರಂತೆ ಸೇನೆಯ ಇಂಡಿಯನ್ ಆರ್ಮ್ಡ್ ಕಾರ್ಪ್ಸ್ ಬಳಸುವ ಟಿ-೯೦ ಎಸ್/ಎಸ್‌ಕೆ ಮಾದರಿಯ ಟ್ಯಾಂಕರ್ ಗಳಿಗೆ ೧,೫೧೨ ಕಬ್ಬಿಣದ ನೇಗಿಲುಗಳ ಮಾದರಿಯ ಸಾಮಗ್ರಿಗಳನ್ನು ತಯಾರಿಸಿಕೊಡುವಂತೆ […]

Advertisement

Wordpress Social Share Plugin powered by Ultimatelysocial