ಆರೋಗ್ಯಕ್ಕೆ ರಾಮಬಾಣವಾದ ಈರುಳ್ಳಿ |onion uses|

ಸಣ್ಣ ಗಾತ್ರದ ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿರುತ್ತವೆ. ಈರುಳ್ಳಿಯಲ್ಲಿರುವ ಖಾರದ ರುಚಿಗೆ ಈರುಳ್ಳಿಯಲ್ಲಿರುವ ಅಲೈಲ್ ಪ್ರೊಪೈಲ್ ಡೈಸಲ್ಫೈಡ್ ಎಂಬ ಚಂಚಲತೈಲವೇ ಕಾರಣವಾವಿದೆ. ಈರುಳ್ಳಿಯ ಪ್ರಬಲ ರಾಸಾಯನಿಕವು – ಅದನ್ನು ಹಸಿಯಗಿ ತಿಂದಾಗ ಹೆಚ್ಚಿನ ಪ್ರಮಾಣದಲ್ಲಿ ದೇಹದಲ್ಲಿ ಉಳಿದು ಕೊಳ್ಳುತ್ತದೆ. ಈ ರಾಸಾಯನಿಕಗಳ ಅಣುಗಾತ್ರ ಎಷ್ಟು ಚಿಕ್ಕದಾಗಿರುತ್ತದೆಂದರೆ ಹಸಿ ಈರುಳ್ಳಿಯನ್ನು ತಿಂದ ನಂತರ ಹಲ್ಲನ್ನು ತಿಕ್ಕಿದಾಗಲೂ ಈ ಅಣುಗಳು ಸಾಕಷ್ಟು ಪ್ರಮಾಣದಲ್ಲಿ ಬಾಯಲ್ಲಿ ಉಳಿದುಕೊಳ್ಳುವುದರಿಂದ ಈರುಳ್ಳಿಯ ವಾಸನೆ ಹಾಗೆಯೇ ಇರುತ್ತದೆ. ಈರುಳ್ಳಿಯ ಹಸಿವಾಸನೆ ತಿಂದವನಿಗೆ ತೃಪ್ತಿ ಕೊಟ್ಟರು ಹಸಿ ಈರುಳ್ಳಿ ತಿಂದವನ ಹತ್ತಿರ ಹೋಗುವವರಿಗೆ ದುರ್ವಾಸನೆ ಕಾಡುತ್ತದೆ. ಈರುಳ್ಳಿ ತಿಂದವನೇ ಮತ್ತೊಬ್ಬ ಈರುಳ್ಳಿ ತಿಂದವನ ವಾಸನೆಗೆ ಹೇಸಿಗೆ ಪಟ್ಟುಕೊಳ್ಳುವುದು ಸಾಮಾನ್ಯ! ಏನೇ ಆಗಲಿ ಹಸಿ ಈರುಳ್ಳಿ ಮಾತ್ರ ನಮ್ಮ ದೇಹದಲ್ಲಿ ಸರಿಯದ ರೀತಿಯಲ್ಲಿ ಜೀರ್ಣವಾಗುತ್ತದೆ. ಹುರಿದ ಅಥವಾ ಬೇಯಿಸಿದ ಈರುಳ್ಳಿ ಜೀರ್ಣವಾಗುವುದು ಕಷ್ಟ. ಈರುಳ್ಳಿಯ ರಸದಲ್ಲಿರುವ ರಾಸಾಯನಿಕಗಳು ರೋಗಾಣುಗಳಿಗೆ ಇಷ್ಟವಾಗುವುದಿಲ್ಲ. ಈರುಳ್ಳಿ ರಸ ಒಂದು ಸುಲಭ ಜೀವಿರೋಧಕವೆಂಬ ಅಭಿಪ್ರಾಯವು ಇದೆ. ನಮಗೆ ಬರುವ ಅನೇಕ ರೋಗಗಳ ರೋಗಾಣುಗಳು ನಮ್ಮ ದೇಹವನ್ನು ಪ್ರವೇಶಿಸುವುದು ಬಾಯಿ, ಮೂಗಿನಿಂದ. ರಷ್ಯಾದ ವೈದ್ಯ ಬಿ.ಪಿ ತೊಹ್ಕಿನ್ ಎಂಬಾತ ಹೇಳುತ್ತಾನೆ – ‘ಈರುಳ್ಳಿಯ ಚೂರುಗಳನ್ನು ಬಾಯಲ್ಲಿಟ್ಟುಕೊಂಡು ೨-೩ ನಿಮಿಷಗಳವರೆಗೆ ಅಗಿಯುತ್ತಿದ್ದರೆ ಬಾಯಲ್ಲಿರುವ ರೋಗಾಣುಗಳೆಲ್ಲ ನಾಶವಾಗುತ್ತವೆ. ಬಾಯಿ ಮೂಗಿನ ಮೂಲಕ ರೋಗಾಣುಗಳು ಒಳಬರಲಾರವು’. ಇದು ಒಂದು ಪ್ರಬಲ ವಾಸನಾ ದ್ರವ್ಯವಾಗಿದೆ. ಇದರಿಂದ ಅನೇಕ ರೀತಿಯ ಪ್ರಯೋಜನಗಳು ಇವೆ. ಮೂರ್ಛೆ ಹೋದವರಿಗೆ ಈರುಳ್ಳಿಯನ್ನು ಮೂಸುವಂತೆ ಮಾಡಿದರೆ ಮೂರ್ಛೆ ತಿಳಿದು ಏಳುತ್ತಾರೆ. ಪ್ರಜ್ಞೆ ತಪ್ಪಿದವರಿಗೂ ಇದೇ ಚಿಕಿತ್ಸೆ ಫಲಕಾರಿಯಗುತ್ತದೆ. ತಲೆ ನೋವು ಇದ್ದಾಗ ಹಣೆಗೆ ಈರುಳ್ಳಿ ರಸ ಹಚ್ಚಿಕೊಂಡರೆ ನೋವು ನಿವಾರಣೆಯಾಗುತ್ತದೆ.

  • ಈರುಳ್ಳಿಯನ್ನು ಪ್ರತೀನಿತ್ಯ ಸೇವಿಸುವುದರಿಂದ ಬಾಯಿಯ ಆರೋಗ್ಯ ಉತ್ತಮವಾಗಿರುತ್ತದೆ. ಈರುಳ್ಳಿಯನ್ನು ಜಗಿದು ತಿನ್ನುವುದರಿಂದ ಇದು ಹಲ್ಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಪ್ರತೀ ನಿತ್ಯ 3 ನಿಮಿಷಕ್ಕಿಂತ ಹೆಚ್ಚಾಗಿ ಈರುಳ್ಳಿಯನ್ನು ಜಗಿಯುವುದರಿಂದ ಇದು ಹಲ್ಲಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.
  • ಈರುಳ್ಳಿಯನ್ನು ಹೇರಳವಾಗಿ ತಿನ್ನುವುದರಿಂದ ಇದು ದೇಹದಲ್ಲಿ ಉತ್ಪತ್ತಿಯಾಗುವ ಗ್ಲೂಕೋಸ್ ನ್ನು ಕಡಿಮೆ ಮಾಡಿ,ಇನ್ಸುಲಿನ್ ನ್ನು ಹೆಚ್ಚಾಗುವಂತೆ ಮಾಡುತ್ತದೆ.ಇದರಿಂದ ನಾವು ಸಕ್ಕರೆ ಖಾಯಿಲೆಯಿಂದ ದೂರವಿರಬಹುದು.
  • ಈರುಳ್ಳಿಯಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಕ್ಯಾನ್ಸರ್ ನಂತಹ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ.ಸಕ್ಕರೆ ಖಾಯಿಲೆಯಿಂದ ದೂರವಿರಬಹುದು.
  • ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಈರುಳ್ಳಿ ಒಳ್ಳೆಯ ಔಷಧಿ.ರಾತ್ರಿ ಊಟಕ್ಕೂ ಮುನ್ನ ಈರುಳ್ಳಿ ಸೂಪ್ ಸೇವಿಸಿದರೆ ಚೆನ್ನಾಗಿ ನಿದ್ರೆ ಬರುತ್ತದೆ.
  • ಈರುಳ್ಳಿರಸಕ್ಕೆ ಜೇನುತುಪ್ಪ ಸೇರಿಸಿ ಸಮಪ್ರಮಾಣದಲ್ಲಿ ಸೇವಿಸುವುದರಿಂದ ಅಸ್ತಮಾದಿಂದ ದೂರವಿರಬಹುದು.̤
  • ಈರುಳ್ಳಿಯ ಔಷಧೀಯ ಗುಣಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿವೆ. ಈರುಳ್ಳಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆ ಮತ್ತು ಗ್ಯಾಸ್ ನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಲಬದ್ಧತೆಯ ಸಮಸ್ಯೆ ಇಲ್ಲದಿದ್ದರೆ, ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುತ್ತದೆ.
  • ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

    https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ರೈಲ್ವೆಯು ರೈಲುಗಳಲ್ಲಿ ಜೋರಾಗಿ ಸಂಗೀತ, ಜೋರಾಗಿ ಮಾತನಾಡುವುದನ್ನು ನಿಷೇಧಿಸಿದೆ.

Mon Jan 24 , 2022
  ಪ್ರಯಾಣವನ್ನು ಹೆಚ್ಚು ಆರಾಮದಾಯಕ ಮತ್ತು ಪ್ರಯಾಣಿಕರಿಗೆ ಹಿತವಾಗಿಸಲು, ಭಾರತೀಯ ರೈಲ್ವೇ ಹೊಸ ನಿಯಮಗಳನ್ನು ರಚಿಸಿದೆ. ಭಾರತೀಯ ರೈಲ್ವೆಯಿಂದ ಜೋರಾಗಿ ಸಂಗೀತ ಮತ್ತು ಜೋರಾಗಿ ಫೋನ್‌ಗಳಲ್ಲಿ ಮಾತನಾಡುವುದನ್ನು ನಿಷೇಧಿಸುವ ಮೂಲಕ ವಿಮೆ ಬರುತ್ತದೆ. ಜೋರಾಗಿ ಮಾತನಾಡುವಾಗ ಅಥವಾ ಜೋರಾಗಿ ಸಂಗೀತ ನುಡಿಸುವಾಗ ಸಿಕ್ಕಿಬಿದ್ದ ಪ್ರಯಾಣಿಕರ ವಿರುದ್ಧ ಕಟ್ಟುನಿಟ್ಟಾಗಿ ವ್ಯವಹರಿಸಲಾಗುವುದು. ಜತೆಗೆ ಯಾವುದೇ ಪ್ರಯಾಣಿಕರಿಗೆ ತೊಂದರೆಯಾದರೆ ಅದಕ್ಕೆ ರೈಲಿನ ಸಿಬ್ಬಂದಿಯೇ ಹೊಣೆಯಾಗುತ್ತಾರೆ. ರೈಲ್ವೆ ಸಚಿವಾಲಯಕ್ಕೆ ಈ ಸಮಸ್ಯೆಗೆ ಸಂಬಂಧಿಸಿದಂತೆ ಹಲವು ದೂರುಗಳು […]

Advertisement

Wordpress Social Share Plugin powered by Ultimatelysocial