ಆಶಾಕರ್ಯಕರ್ತೆಯರ ಬೇಡಿಕೆ ಈಡೇರಿಸುವಂತೆ ಮನವಿ

ಹೆಮ್ಮಾರಿ ಕೊರೊನಾ ಮೆಟ್ಟಿನಿಂತೂ, ಸಂದಿಗ್ಧ ಪರಿಸ್ಥಿತಿಯಲ್ಲಿ ಜಾಗೃತಿ ಮೂಡಿಸಿದ ವಾರಿಯರ್ಸ್ಯಾದ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಯ ಈಡೇರಿಸುವಂತೆ ಕನಾರ್ಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆ ಹಾಗೂ ಬೆಳಗಾವಿ ಜಿಲ್ಲಾ ಸಮಿತಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಕೊರೊನಾ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ ಆಶಾ ಕಾರ್ಯಕರ್ತೆಯರ ಆರ್ಥಿಕ ಸಂಕಷ್ಟಕ್ಕಿಡಾಗಿದ್ದು ಸೇವೆಗೆ ನೈಜ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸರಕಾರ ಮಾಸಿಕ ೧೨ ಸಾವಿರ ವೇತನ ನೀಡಿ, ವಿಶೇಷ ಪ್ಯಾಕೇಜ್ ಘೋಷಿಸಬೇಕು. ಈಗಿರುವ ವೇತನದಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ ಅದಕ್ಕಾಗಿ, ಕೊರೊನಾ ಸೋಂಕು ನಿಯಂತ್ರಣಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರ ಆರೋಗ್ಯವನ್ನು ರಕ್ಷಿಸಲು ಅಗತ್ಯವಿರುವ ರಕ್ಷಣಾ ಸಾಮಗ್ರಿಗಳನ್ನು ನೀಡಬೇಕೆಂದರು. ಈ ಸಂದರ್ಭದಲ್ಲಿ  ಸುಜಾತಾ ಕಾಡಮಠ, ಜಯಶ್ರೀ ನಾವಿ, ಗೀತಾ ರಾಯಗೋಳ, ಲತಾ ಜಾಧವ , ರೂಪಾ ಅಂಗಡಿ, ಭಾರತಿ ಮಶಾಳ ಹಾಗೂ ಇತರರು ಇದ್ದರು.

Please follow and like us:

Leave a Reply

Your email address will not be published. Required fields are marked *

Next Post

ಪೋಟೊಗಳನ್ನ ದುರ್ಬಳಕೆ ಮಾಡುತ್ತಿದ್ದ ಆರೋಪಿಗಳು

Thu Jul 30 , 2020
ನಗರದ ಪ್ರಸಿದ್ದ ಕಾಲೇಜುಗಳ ವಿದ್ಯರ‍್ಥಿನಿಯರು, ಉಪನ್ಯಾಸಕಿಯರ ಹಾಗೂ ಸುಂದರ ನಟಿಯರ ಪೋಟೋಗಳನ್ನ ಅಶ್ಲೀಲ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದ ಆರೋಪಿಗಳು ಬಂಧಿತರಾಗಿದಗದಾರೆ. ನಟಿಯರು,ವಿದ್ಯರ‍್ಥಿನಿಯರು ಉಪನ್ಯಾಸಕಿಯರು ಪೋಟೊಗಳನ್ನ ಫೇಸ್ಬುಕ್, ಇನ್ಸ್ಟಾಗ್ರಾಂ ನಿಂದ ಕದ್ದು ಅಶ್ಲೀಲ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆ ಹಾಗೂ ಸಿಇಎನ್ ಠಾಣೆಗಳಲ್ಲಿ ಏಳು ಪ್ರಕರಣ ದಾಖಲಾಗಿದ್ದವು. ಈ ಹಿನ್ನೆಲೆ ವಿಶೇಷ ಕರ‍್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಅಜಯ್ ತನಿಕಾಚಲಂ, ಹಾಗೂ ವಿಶ್ವಕ್ಸೇನ್ […]

Advertisement

Wordpress Social Share Plugin powered by Ultimatelysocial