ಇಂಡಿಗೋ ವಿಮಾನದಲ್ಲಿ ತುರ್ತು ಬಾಗಿಲು ತೆರೆಯಲು ಮುಂದಾದ ಪ್ರಯಾಣಿಕ; ಕೆಲಕಾಲ ಗೊಂದಲ ಸೃಷ್ಟಿ!

ದೆಹಲಿಯಿಂದ ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಏಕಾಏಕಿ ವ್ಯಕ್ತಿಯೊಬ್ಬ ವಿಮಾನದ ತುರ್ತು ಗೇಟ್ ತೆರೆಯಲು ಯತ್ನಿಸಿದ್ದಾನೆ. ಇದಾದ ಬಳಿಕ ವಿಮಾನದಲ್ಲಿ ಭಾರೀ ಗಲಾಟೆ ನಡೆಯಿತು. ನವದೆಹಲಿ: ದೆಹಲಿಯಿಂದ ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಏಕಾಏಕಿ ವ್ಯಕ್ತಿಯೊಬ್ಬ ವಿಮಾನದ ತುರ್ತು ಗೇಟ್ ತೆರೆಯಲು ಯತ್ನಿಸಿದ್ದಾನೆ.
ಇದಾದ ಬಳಿಕ ವಿಮಾನದಲ್ಲಿ ಭಾರೀ ಗಲಾಟೆ ನಡೆಯಿತು. ಆಗಸದಲ್ಲಿ ನಡೆದ ಈ ಘಟನೆಯಿಂದ ವಿಮಾನದಲ್ಲಿ ಕುಳಿತಿದ್ದವರು ಭಯದ ವಾತಾವರಣಕ್ಕೆ ಸಿಲುಕಿದ್ದರು. ಆದರೆ, ವಿಮಾನದಲ್ಲಿದ್ದ ಸಿಬ್ಬಂದಿ ವ್ಯಕ್ತಿಯನ್ನು ತಡೆದರು. ಇದಾದ ಬಳಿಕ ವಿಮಾನ ಲ್ಯಾಂಡ್ ಆದ ನಂತರ ಸಿಬ್ಬಂದಿ ಆರೋಪಿ ಪ್ರಯಾಣಿಕನನ್ನು ಗುರುತಿಸಿ ಕ್ರಮಕ್ಕಾಗಿ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಮುಂಬೈ-ಗುವಾಹಟಿ ಇಂಡಿಗೋ ವಿಮಾನದಲ್ಲಿ ಲೈಂಗಿಕ ಕಿರುಕುಳ: ಪ್ರಯಾಣಿಕನ ವಿರುದ್ಧ ಕೇಸ್ ದಾಖಲುಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ ಇದಕ್ಕೂ ಮುನ್ನ ದೆಹಲಿಯಿಂದ ಬೆಂಗಳೂರಿಗೆ ಇಂಡಿಗೋದ 6ಇ 308 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಅಮಲೇರಿದ ಸ್ಥಿತಿಯಲ್ಲಿ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿದ್ದರು. ಆಗಲೂ ಸಿಬ್ಬಂದಿ ಆತನನ್ನು ಹಿಡಿದಿದ್ದರು. ಆಗ ಪ್ರತೀಕ್ ಮದ್ಯದ ಅಮಲಿನಲ್ಲಿ ವಿಮಾನದಲ್ಲಿ ಕುಳಿತಿದ್ದ ಇತರ ಪ್ರಯಾಣಿಕರಿಗೆ ಕಿರುಕುಳ ನೀಡಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಇದಲ್ಲದೇ ಜುಲೈ 8ರಂದು ಹೈದರಾಬಾದ್ನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಟೇಕ್ಆಫ್ ವೇಳೆ ವಿಮಾನದ ತುರ್ತು ಬಾಗಿಲು ತೆರೆದಿದ್ದ. ಪ್ರಯಾಣಿಕರು ಈ ರೀತಿ ಮಾಡುತ್ತಿದ್ದುದನ್ನು ಕಂಡ ಸಿಬ್ಬಂದಿ ತಕ್ಷಣ ಆತನನ್ನು ಅಲ್ಲಿಂದ ಹೊರ ಎಳೆದು ಬಾಗಿಲನ್ನು ಹಾಕಿದರು.

Please follow and like us:

tmadmin

Leave a Reply

Your email address will not be published. Required fields are marked *

Next Post

Darshan: ಕಾವೇರಿ ಹೋರಾಟ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್‌

Wed Sep 20 , 2023
ಕಾವೇರಿ ವಿವಾದ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಮತ್ತೆ 15 ದಿನ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನಿಯಂತ್ರಣ ಪ್ರಾಧಿಕಾರ ಆದೇಶ ನೀಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದನ್ನು ವಿರೋಧಿಸಿ ಹಲವು ಕನ್ನಡಪರ ಸಂಘಟನೆಗಳು, ಆಮ್ ಆದ್ಮಿ ಪಕ್ಷ, ರೈತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಹೋರಾಟದಲ್ಲಿ ನಿರತವಾಗಿದೆ.   ಇನ್ನು ಕಾವೇರಿ ವಿವಾದದ ಬಗ್ಗೆ ಈವರೆಗೂ ಯಾವೊಬ್ಬ ಜನಪ್ರಿಯ […]

Advertisement

Wordpress Social Share Plugin powered by Ultimatelysocial