ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಜಯದ ಭರವಸೆಯಲ್ಲಿ ಬೆಂಗಳೂರು ಎಫ್‌ಸಿ.

ಬೆಂಗಳೂರು: ನೀರಸ ಪ್ರದರ್ಶನದ ಮೂಲಕ ನಿರಾಶೆ ಮೂಡಿಸಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಮತ್ತು ಎಫ್‌ಸಿ ಗೋವಾ ತಂಡಗಳು ಗೆಲುವಿನ ನಿರೀಕ್ಷೆಯೊಂದಿಗೆ ಭಾನುವಾರ ಕಣಕ್ಕೆ ಇಳಿಯಲಿವೆ. ಗೋವಾದ ಬ್ಯಾಂಬೊಲಿಮ್‌ನ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆಯುವ ಹಣಾಹಣಿಯ ಜಯ ಮುಂದಿನ ಹಂತಕ್ಕೆ ಸಾಗುವ ಹಾದಿಯಲ್ಲಿ ಉಭಯ ತಂಡಗಳಿಗೂ ಅನಿವಾರ್ಯವಾಗಿದೆ.

ಮೂರು ಡ್ರಾ ಸೇರಿದಂತೆ ಸತತ ಐದು ಪಂದ್ಯಗಳಲ್ಲಿ ಸೋಲರಿಯದ ಬೆಂಗಳೂರು ಎಫ್‌ಸಿ ಸದ್ಯ ಭರವಸೆಯಲ್ಲಿದೆ. 11 ತಂಡಗಳು ಪಾಲ್ಗೊಂಡಿರುವ ಟೂರ್ನಿಯ ಪಾಯಿಂಟ್ ಪಟ್ಟಿಯ 10ನೇ ಸ್ಥಾನದಲ್ಲಿದ್ದ ಬಿಎಫ್‌ಸಿ ಡಿಸೆಂಬರ್‌ ಮಧ್ಯದಿಂದ ಉತ್ತಮ ಸಾಮರ್ಥ್ಯ ತೋರುತ್ತಿದೆ. ಹೀಗಾಗಿ ಸದ್ಯ ಎಂಟನೇ ಸ್ಥಾನಕ್ಕೆ ಜಿಗಿದಿದೆ. ಗೋವಾ ಎದುರು ಗೆದ್ದರೆ 16 ಪಾಯಿಂಟ್‌ಗಳೊಂದಿಗೆ ಆರನೇ ಸ್ಥಾನಕ್ಕೇರಲಿದೆ.

ಹಾಲಿ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿ ಎದುರಿನ ಪಂದ್ಯದಲ್ಲಿ 3-0 ಅಂತರದ ಜಯ ಗಳಿಸಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮಾರ್ಕೊ ಪೆಜೊವೊಲಿ ಕೋಚ್ ಆಗಿರುವ ತಂಡದಲ್ಲಿ ಪ್ರಿನ್ಸ್ ಇಬಾರ ಮಿಂಚುತ್ತಿದ್ದಾರೆ. ಅವರಿಗೆ ರೋಷನ್ ಸಿಂಗ್‌ ಉತ್ತಮ ಸಹಕಾರ ನೀಡುತ್ತಿದ್ದಾರೆ. ಇಬಾರ ಗಳಿಸಿರುವ ಒಟ್ಟು ನಾಲ್ಕು ಗೋಲುಗಳ ಪೈಕಿ ಮೂರಕ್ಕೆ ರೋಷನ್ ‘ಅಸಿಸ್ಟ್‌’ ಮಾಡಿದ್ದರು.

ಇಂದಿನ ಪಂದ್ಯಗಳು

ಬೆಂಗಳೂರು ಎಫ್‌ಸಿ-ಎಫ್‌ಸಿ ಗೋವಾ

ಸ್ಥಳ: ಬ್ಯಾಂಬೊಲಿಮ್

ಆರಂಭ: ರಾತ್ರಿ 7.30

ಎಟಿಕೆ ಮೋಹನ್ ಬಾಗನ್‌-ಒಡಿಶಾ ಎಫ್‌ಸಿ

ಸ್ಥಳ: ಫತೋರ್ಡ

ಆರಂಭ: ರಾತ್ರಿ 9.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

IND VS SA:ಭಾರತ vs ದಕ್ಷಿಣ ಆಫ್ರಿಕಾ, 3ನೇ ODI:

Sun Jan 23 , 2022
ಭಾರತ vs ದಕ್ಷಿಣ ಆಫ್ರಿಕಾ, 3ನೇ ODI: ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಭಾರತ ವಿರುದ್ಧದ ಮೂರನೇ ODI ನಲ್ಲಿ ಆತಿಥೇಯ ತಂಡವು ಎರಡು ವಿಕೆಟ್ ಕಳೆದುಕೊಂಡ ನಂತರ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಮತ್ತು ಏಡೆನ್ ಮಾರ್ಕ್ರಾಮ್ ಕ್ರೀಸ್‌ನಲ್ಲಿದ್ದಾರೆ. ದೀಪಕ್ ಚಾಹರ್ ಅವರು ದಿನದ ಎರಡನೇ ಓವರ್‌ನಲ್ಲಿ ಜನ್ನೆಮನ್ ಮಲನ್ ಅವರನ್ನು ಕೆಎಲ್ ರಾಹುಲ್ ಅವರ ಅದ್ಭುತ ಎಸೆತದಲ್ಲಿ ತೆಂಬಾ ಬವುಮಾ ರನ್ ಔಟ್ ಮಾಡಿದರು. ಈಗಾಗಲೇ ಸರಣಿ […]

Advertisement

Wordpress Social Share Plugin powered by Ultimatelysocial