ಇ -ಕಾಮರ್ಸ್ ಕಾರ್ಮಿಕರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ 4 ಲಕ್ಷ ವಿಮೆ

ಬೆಂಗಳೂರು:ರಾಜ್ಯದಲ್ಲಿ ಇ ಕಾಮರ್ಸ್ ಕಂಪನಿಗಳಾದ ಅಮೇಜಾನ್,ಸ್ವಿಗ್ಗಿ, ಪ್ಲಿಪ್ಕಾರ್ಟ್ ಝೊಮಾಟೋ ಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 4 ಲಕ್ಷ ವಿಮೆ ಸೌಲಭ್ಯ ಒದಗಿಸುವ ‘ರಾಜ್ಯ ಗಿಗ್ ಕಾರ್ಮಿಕ ವಿಮಾ ಯೋಜನೆ ‘ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

 

ಈ 4 ಲಕ್ಷ ವಿಮೆಯಲ್ಲಿ 2 ಲಕ್ಷ ಅಪಘಾತ ವಿಮೆ, ಇನ್ನೆರಡು ಲಕ್ಷ ಜೀವವಿಮೆ ಇರಲಿದೆ.ಕಳೆದ ಬಜೆಟ್ ನಲ್ಲಿ ಜಾರಿಗೊಳಿಸಲು ಘೋಷಣೆ ಮಾಡಿದ್ದರು.

ಹೇಗೆ ನೋಂದಣಿ ಮಾಡುವುದು ?
ಗಿಗ್ ಕಾರ್ಮಿಕರು ರಾಜ್ಯ ಸರ್ಕಾರದ ಸೇವಾ ಸಿಂಧು ವೆಬ್ಸೈಟ್ ನಲ್ಲಿ ಅಗತ್ಯ ದಾಖಲೆ ಸಲ್ಲಿಸಿ ಅರ್ಜಿ ಸಲ್ಲಿಸಬೇಕು.
_
18 ರಿಂದ 60 ವರ್ಷದ ಗಿಗ್ ಕಾರ್ಮಿಕರು ಅರ್ಹರಾಗಿರುತ್ತಾರೆ .ಇಪಿಎಫ್ ,ಇಎಸ್‌ಐ ಸೌಲಭ್ಯ ಹೊಂದಿರಬಾರದು.ಉದ್ಯೋಗ ಪತ್ರ,,ಇ- ಶ್ರಮ ಗುರುತಿನ ಚೀಟಿ ,ಬ್ಯಾಂಕ್ ಪಾಸ್ ಬುಕ್,ವಿಳಾಸದ ಗುರುತಿಗೆ ಆಧಾರ್ ಕಾರ್ಡ್ ದಾಖಲೆಗಳನ್ನು ಸಲ್ಲಿಸಬೇಕು.

ಯೋಜನೆಯ ಲಾಭ :
ಫಲಾನುಭವಿಯ ಮರಣದ ನಂತರ ಕಾನೂನು ಬದ್ದ ವಾರಾಸುದಾರರಿಗೆ 2 ಲಕ್ಷ ವಿಮಾ ಸೌಲಭ್ಯ ಸಿಗಲಿದೆ.ಜೊತೆಗೆ ವಿಮಾ ಪರಿಹಾರ 2 ಲಕ್ಷ ಸೇರಿ 4 ಲಕ್ಷ ಪರಿಹಾರ ಸಿಗಲಿದೆ. ಅಪಘಾತದಿಂದ ಉಂಟಾಗುವ ಸಂಪೂರ್ಣ ಅಥವಾ ಭಾಗಶ ಅಂಗವೈಕಲ್ಯ ಪರಿಹಾರವಾಗಿ 2 ಲಕ್ಷ ಹಾಗೂ ಆಸ್ಪತ್ರೆ ವೆಚ್ಚ ಮರುಪಾವತಿ 1 ಲಕ್ಷದವರೆಗೆ ಸಿಗಲಿದೆ

Please follow and like us:

tmadmin

Leave a Reply

Your email address will not be published. Required fields are marked *

Next Post

ನಾನು ಯಾವುದೇ ಅವ್ಯವಹಾರ, ಭ್ರಷ್ಟಾಚಾರ ನಡೆಸಿಲ್ಲ, ಸೂಕ್ತ ಮಾಹಿತಿಯಿಲ್ಲದೆ ಸಿಐಡಿ ನನ್ನನ್ನು ಬಂಧಿಸಿದೆ: ಚಂದ್ರಬಾಬು ನಾಯ್ಡು

Sat Sep 9 , 2023
ನಾನು ಯಾವುದೇ ಅವ್ಯವಹಾರ ಅಥವಾ ಭ್ರಷ್ಟಾಚಾರ ಮಾಡಿಲ್ಲ. ಸೂಕ್ತ ಮಾಹಿತಿಗಳಿಲ್ಲದೆಯೇ ಸಿಐಡಿ ಅಧಿಕಾರಿಗಳು ನನ್ನನ್ನು ಬಂಧನಕ್ಕೊಳಪಡಿಸಿದ್ದಾರೆಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಶನಿವಾರ ಹೇಳಿದ್ದಾರೆ. ಕರ್ನೂಲ್: ನಾನು ಯಾವುದೇ ಅವ್ಯವಹಾರ ಅಥವಾ ಭ್ರಷ್ಟಾಚಾರ ಮಾಡಿಲ್ಲ. ಸೂಕ್ತ ಮಾಹಿತಿಗಳಿಲ್ಲದೆಯೇ ಸಿಐಡಿ ಅಧಿಕಾರಿಗಳು ನನ್ನನ್ನು ಬಂಧನಕ್ಕೊಳಪಡಿಸಿದ್ದಾರೆಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು […]

Advertisement

Wordpress Social Share Plugin powered by Ultimatelysocial