ಉತ್ತರ ಕೊರಿಯಾಗೆ ೧೦ಲಕ್ಷ ಡಾಲರ್ ಮೊತ್ತದ ಔಷಧಗಳು

ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಸ್ವೀಕರಿಸಿದ ಮನವಿಯ ಅನ್ವಯ ಭಾರತವು ಉತ್ತರ ಕೊರಿಯಾಗೆ ೧೦ ಲಕ್ಷ ಡಾಲರ್ ಮೊತ್ತದ ಔಷಧಗಳು ಮತ್ತು ಇತರ ಉಪಕರಣಗಳನ್ನು ಕಳುಹಿಸಿಕೊಡಲು ಒಪ್ಪಿಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ. ಉತ್ತರ ಕೊರಿಯಾದ ಜನರು ಔಷಧಗಳ ಕೊರತೆಯಿಂದ ಕಂಗಾಲಾಗಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರವು ಮಾನವೀಯ ದೃಷ್ಟಿಯಿಂದ ೧೦ ಲಕ್ಷ ಡಾಲರ್ ಮೊತ್ತದ ಕ್ಷಯದ ಔಷಧಿಗಳನ್ನು ಕಳುಹಿಸಿಕೊಡಲು ನಿರ್ಧರಿಸಿತು ಎಂದು ಇಲಾಖೆಯ ವಕ್ತಾರರು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಉತ್ತರ ಕೊರಿಯಾದಲ್ಲಿ ನಿರ್ವಹಿಸುತ್ತಿರುವ ಕ್ಷಯ ರೋಗ ನಿವಾರಣಾ ಚಟುವಟಿಕೆಗಳಿಗೆ ಪೂರಕವಾಗಿ ಈ ಔಷಧಗಳನ್ನು ಕಳುಹಿಸಿಕೊಡಲಾಗುತ್ತಿದೆ. ಹೀಗಾಗಿ ಈ ನೆರವಿಗೆ ಅಮೆರಿಕದ ನಿರ್ಬಂಧದ ಸಮಸ್ಯೆ ಇರುವುದಿಲ್ಲ.

Please follow and like us:

Leave a Reply

Your email address will not be published. Required fields are marked *

Next Post

ದೇಶಾದ್ಯಂತ ೪೮,೬೬೧ ಮಂದಿಗೆ ಸೋಂಕು ಪತ್ತೆ

Sun Jul 26 , 2020
ಭಾರತದಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಒಂದೇ ದಿನದಲ್ಲಿ 48,661 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,85,522ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 705 ಮಂದಿ ಮಹಾಮಾರಿ ವೈರಸ್ ಗೆ ಬಲಿಯಾಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 32,063ಕ್ಕೆ ಏರಿಕೆಯಾಗಿದೆ. 13,85,522 ಮಂದಿ ಸೋಂಕಿತರ ಪೈಕಿ 8,85,577 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇಶದಲ್ಲಿನ್ನೂ 4,67,882 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಎಂದು ಕೇಂದ್ರ […]

Advertisement

Wordpress Social Share Plugin powered by Ultimatelysocial