ಎಲ್‌ಐಸಿ ಕನ್ಯಾದಾನ್ ಪಾಲಿಸಿ: 121 ರೂ. ಪಾವತಿಸಿ, 27 ಲಕ್ಷ ರೂ ಪಡೆಯಿರಿ

ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ)ಸಮಾಜದ ಎಲ್ಲಾ ವರ್ಗಗಳಿಗೂ ಸರಿ ಹೊಂದುವ ಹಲವು ಯೋಜನೆಗಳನ್ನು ಹೊಂದಿದೆ. ಎಲ್‌ಐಸಿ ಪಾಲಿಸಿ ನಿಮ್ಮ ಎಲ್ಲಾ ಅಗತ್ಯ ಗಳನ್ನು ಪೂರೈಸುತ್ತದೆ ಎಂದರೆ ತಪ್ಪಾಗಲಾರದು.

ಇವುಗಳಲ್ಲಿ ನಾವು ನಮ್ಮ ಗುರಿಯನ್ನು ತಲುಪಲು ಸಾಧ್ಯವಾಗುವ ಪಾಲಿಸಿಗಳಿದ್ದು, ಇದರಿಂದಲೇ ಎಲ್‌ಐಸಿ ಪಾಲಿಸಿಗಳು ಜನಪ್ರಿಯವಾಗಿದೆ.

ಮಕ್ಕಳ ವಿದ್ಯಾಭ್ಯಾಸ, ವಿವಾಹಕ್ಕಾಗಿಯೇ ವಿನ್ಯಾಸಗೊಳಿಸಿರುವಂತಹ ಹಲವು ಪಾಲಿಸಿಗಳಿವೆ. ಇಂತಹ ಪಾಲಿಸಿಗಳ ಪೈಕಿ “ಎಲ್‌ಐಸಿ ಕನ್ಯಾದಾನ” ಪಾಲಿಸಿಯೂ ಒಂದು.

ಭಾರತದಲ್ಲಿ ಮದುವೆಯ ಬಜೆಟ್ ಸಾಮಾನ್ಯವಾಗಿ ಲಕ್ಷಗಟ್ಟಲೆ ಇರುತ್ತದೆ. ಆದರೆ “ಎಲ್‌ಐಸಿ ಕನ್ಯಾದಾನ” ಪಾಲಿಸಿ ಮಾಡಿದರೆ, ವಿವಾಹದ ಖರ್ಚಿನ ಬಗ್ಗೆ ತಲೆಕೆಡಿಸಿಕೊಳ್ಳುವುದು ಬಿಟ್ಟು ನಿಶ್ಚಿಂತರಾಗಬಹುದು. ಯಾಕೆಂದರೆ ಈ ಪಾಲಿಸಿ ನಿಮ್ಮ ಮಗಳ ಶಿಕ್ಷಣದ ಜೊತೆಜೊತೆಗೆ ವಿವಾಹದ ಖರ್ಚು ಭರಿಸುತ್ತದೆ. ಎಲ್‌ಐಸಿ ಕನ್ಯಾದಾನ ಪಾಲಿಸಿಯ ಮೂಲಕ ನೀವು ಹೇಗೆ 27 ಲಕ್ಷ ರೂ. ಗಳಿಸಬಹುದೆಂಬ ಮಾಹಿತಿ ಇಲ್ಲಿದೆ.

121 ರೂ. ಪಾವತಿಸಿ, 27 ಲಕ್ಷ ರೂ ಪಡೆಯುವುದು ಹೇಗೆ?

ಎಲ್‌ಐಸಿ ಕನ್ಯಾದಾನ ಪಾಲಿಸಿಯ ಅವಧಿ 25 ವರ್ಷಗಳಾಗಿರುತ್ತದೆ. ದಿನವೊಂದಕ್ಕೆ ನೀವು 121 ರೂ.ಗಳಂತೆ, ತಿಂಗಳಿಗೆ 3600 ರೂಪಾಯಿಗಳನ್ನು 22 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಇದಾದ ಬಳಿಕ ಮೂರು ವರ್ಷಗಳ ಲಾಕ್ ಇನ್ ಪಿರಿಯಡ್ ಇರುತ್ತದೆ. 25 ವರ್ಷಗಳ ನಂತರ 27ಲಕ್ಷ ರೂ. ಪಾಲಿಸಿದಾರರಿಗೆ ಹಸ್ತಾಂತರವಾಗುತ್ತದೆ. ಈ ವಿಮೆಯ ಕನಿಷ್ಟ ಅವಧಿ 13 ವರ್ಷಗಳಾಗಿದ್ದು, ಗರಿಷ್ಟ ಅವಧಿ 25 ವರ್ಷಗಳಾಗಿವೆ. ಕನಿಷ್ಟ ವಿಮಾ ಮೊತ್ತ 1 ಲಕ್ಷ ರೂ. ಆಗಿರುತ್ತದೆ.

ಈ ವಿಮೆ ಮಾಡಿಸುವ ಮಗುವಿನ ತಂದೆಯ ವಯಸ್ಸು 18 ಮತ್ತು 50ರ ನಡುವೆ ಇರಬೇಕಾಗುತ್ತದೆ. ಪುತ್ರಿಗೆ ಕನಿಷ್ಟ ಒಂದು ವರ್ಷ ಆಗಿರಬೇಕು. ನಿಮ್ಮ ಮಗುವಿನ ವಯಸ್ಸಿಗೆ ಅನುಗುಣವಾಗಿ ನೀವು ಪಾಲಿಸಿ ಅವಧಿಯನ್ನುಆಯ್ಕೆ ಮಾಡಿಕೊಳ್ಳಬಹುದು. ಮಗಳಿಗೆ 25 ವರ್ಷ ಪೂರ್ಣಗೊಂಡಾಗ ನಗದನ್ನು ಹಸ್ತಾಂತರಿಸಲಾಗುತ್ತದೆ. ಹೀಗಾಗಿ ಈ ಹಣವನ್ನು ಮದುವೆಯ ಜೊತೆ ಜೊತೆಗೆ ಆಕೆಯ ಉನ್ನತ ವ್ಯಾಸಂಗಕ್ಕೂ ಉಪಯೋಗಿಸಿಕೊಳ್ಳಬಹುದಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದರ್ಶನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ನಿಮ್ಮಲ್ಲಿ ಈ 2 ಬದಲಾವಣೆ ಆಗಬೇಕು ಎಂದ ಪ್ರಥಮ್;

Thu Feb 16 , 2023
    ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಇಂದು ( ಫೆಬ್ರವರಿ 16 ) 46ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಹಲವು ಕಾರಣಗಳಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇದ್ದ ನಟ ದರ್ಶನ್ ಈ ಬಾರಿ ಅಭಿಮಾನಿಗಳನ್ನು ಭೇಟಿಯಾಗಿ ಪ್ರೀತಿಯಿಂದ ನಡೆದುಕೊಂಡಿದ್ದಾರೆ. ಇನ್ನು ಈ ಬಾರಿಯ ಹುಟ್ಟುಹಬ್ಬಕ್ಕೆ ಕೇಕ್, ಹಾರ ಹಾಗೂ ಉಡುಗೊರೆ ತರುವ ಬದಲು ದಿನಸಿ ಸಾಮಗ್ರಿಗಳನ್ನು ತನ್ನಿ, ಹಸಿದವರ ಹೊಟ್ಟೆ ತುಂಬಿಸುವ ಕೆಲಸ […]

Advertisement

Wordpress Social Share Plugin powered by Ultimatelysocial