ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಲು ವಾಣಿಜ್ಯೀಕರಣ- ಸಚಿವ ಪ್ರಲ್ಹಾದ ಜೋಶಿ

ಆಮದು ಪ್ರಮಾಣ ಕಡಿಮೆ ಮಾಡಿ ದೇಶದಲ್ಲಿಯೇ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಕಲ್ಲಿದ್ದಲು ಗಣಿಗಾರಿಕೆಯನ್ನು ವಾಣಿಜ್ಯೀಕರಣ ಮಾಡಲಾಗುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ‘ಸದ್ಯಕ್ಕೆ ೩೦ ದಿನಗಳಿಗಾಗುವಷ್ಟು ಬೇಕಾಗುವ ಕಲ್ಲಿದ್ದಲು ನಮ್ಮಲ್ಲಿ ಸಂಗ್ರಹವಿದೆ. ೨೦೨೩ ಅಥವಾ ೨೦೨೪ರ ವೇಳೆಗೆ ಭಾರತಕ್ಕೆ ಬೇಕಾಗುವ ೧,೦೦೦ರಿಂದ ೧,೧೦೦ ಮಿಲಿಯನ್ ಟನ್ ಕಲ್ಲಿದ್ದಲನ್ನು ನಮ್ಮಲ್ಲಿಯೇ ಉತ್ಪಾದಿಸುವಂತೆ ಕೋಲ್ ಇಂಡಿಯಾ ಕಂಪನಿಗೆ ಸೂಚಿಸಲಾಗಿದೆ. ಈ ಕಂಪನಿ ವರ್ಷದ ಇಲ್ಲಿಯ ತನಕ ೬೦೬ ಮಿಲಿಯನ್ ಟನ್ ಉತ್ಪಾದನೆ ಮಾಡಿದೆ. ಹೋದ ವರ್ಷ ೨೫೧ ಮಿಲಿಯನ್ ಟನ್ ಆಮದು ಮಾಡಿಕೊಳ್ಳಲಾಗಿತ್ತು’ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ ವಿರುದ್ಧ ಕಾರಜೋಳ ಆಕ್ರೋಶ

Tue Jul 7 , 2020
ಯಾರದ್ದೋ ಬೇಸ್ ಲೆಸ್ ಆರೋಪಕ್ಕೆ ನಾನು ಉತ್ತರ ಕೊಡಬೇಕಾಗಿಲ್ಲ ಎಂದು ಡಿಸಿಎಂ ಗೋವಿಂದ್ ಕಾರಜೋಳ ಹೇಳಿದ್ದಾರೆ. ಕೋವಿಡ್ ಪರಿಕರ ಖರೀದಿ ಹಗರಣ ಆರೋಪ ಹಿನ್ನೆಲೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಾಡಿರುವ ಆರೋಪ ಬೇಸ್‌ಲೆಸ್ ಆರೋಪ ಇದೇ ಮಾತನ್ನು ಹತ್ತು ಸಾರಿ ಹೇಳ್ತೇನೆ,ವಿಧಾನಸಭೆ ಕಲಾಪದಲ್ಲೂ ಹೇಳ್ತೇನೆ. ಸಮಾಜಕಲ್ಯಾಣ ಇಲಾಖೆಯಡಿ ಸ್ಯಾನಿಟೈಸ್ ಮಾಸ್ಕ್ ಇವುಗಳಲ್ಲಿ ಯಾವುದೇ ಗೋಲ್‌ಮಾಲ್ ಹಗರಣ ಆಗಿಲ್ಲ. ದಲಿತ ಸಂಘರ್ಷ ಸಮಿತಿಯವರಿಗೂ ಮಾಹಿತಿ ಕೊರತೆ ಇದೆ. ಈ ರೀತಿಯ ಬೇಸ್‌ಲೆಸ್ […]

Advertisement

Wordpress Social Share Plugin powered by Ultimatelysocial