‘ಕಾಶಿ – ಗಯಾ ಯಾತ್ರೆ’ ಗೆ ತೆರಳುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

‘ಕರ್ನಾಟಕ ಭಾರತ್ ಗೌರವ್ ಕಾಶಿ – ಗಯಾ ದರ್ಶನ’ ಯಾತ್ರೆಗೆ ತೆರಳುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಏಳು ದಿನಗಳ ಯಾತ್ರೆಯನ್ನು ಒಂಬತ್ತು ದಿನಗಳಿಗೆ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 23ರಂದು ಬೆಂಗಳೂರಿನಿಂದ ಯಾತ್ರೆ ಹೊರಡಲಿದೆ.

ಊಟ, ವಸತಿ, ಮೂರು ಟೈಯರ್ ಎಸಿ ರೈಲು ಪ್ರಯಾಣ ಒಳಗೊಂಡಿರುವ ಈ ಯಾತ್ರೆಯ ವೆಚ್ಚ 22,500 ರೂಪಾಯಿಗಳಾಗಿದ್ದು, ಈ ಪೈಕಿ ಕರ್ನಾಟಕ ಸರ್ಕಾರದ ವತಿಯಿಂದ 7,500 ರೂಪಾಯಿ ಸಹಾಯಧನ ಸಿಗಲಿದೆ.

 

ಕಾಶಿ – ಗಯಾ ಯಾತ್ರೆಗೆ ಈಗಾಗಲೇ 640 ಮಂದಿ ನೋಂದಣಿ ಮಾಡಿಕೊಂಡಿದ್ದು, ಇನ್ನೂ 60 ಮಂದಿಗೆ ಅವಕಾಶವಿದೆ. ಮುಂದಿನ ಯಾತ್ರೆ ಅಕ್ಟೋಬರ್ 7ರಂದು ಹೊರಡಲಿದ್ದು, ಇದಕ್ಕೆ ಈಗಾಗಲೇ 209 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. 491 ಸೀಟುಗಳು ಬಾಕಿ ಇದ್ದು, ಯಾತ್ರೆಗೆ ತೆರಳಬಯಸುವವರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಚಳಗೇರಿಯ ಕಟಗಿಹಳ್ಳಿ ಮಠದ ಮಹಾಂತೇಶ್‌ ಸ್ವಾಮೀಜಿ ಲಿಂಗೈಕ್ಯ..!

Sat Sep 16 , 2023
ಮಹಾಂತೇಶ್‌ ಸ್ವಾಮೀಜಿಯವರು ನಿಧನರಾಗಿದ್ದಾರೆ, ಇವರು  ಹಾವೇರಿ ಜಿಲ್ಲೆಯ ಚಳಗೇರಿ ನಡೆದಾಡುವ ದೇವರೇಂದೆ ಪ್ರಸಿದ್ದಿಯನ್ನು ಪಡೆದಿದ್ದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ಚಳಗೇರಿಯ ಕಟಗಿಹಳ್ಳಿಯಲ್ಲಿ,  ಮಠಾಧೀಶರಾಗಿದ್ದರು ಮತ್ತು ಮಹಾಂತೇಶ್‌ ಸ್ವಾಮೀಜಿಯವರು ಅನಾರೋಗ್ಯದ ಸಮಸ್ಯೆಯಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ವಿಧಿಯಾಟ ಬಲ್ಲವರಾರು..? ಅನಾರೋಗ್ಯದಿಂದ ಬಳಲುತ್ತಿದ್ದ ಚಳಗೇರಿಯ ಕಟಗಿಹಳ್ಳಿ ಮಠದ ಮಹಾಂತೇಶ್‌ ಸ್ವಾಮೀಜಿ ಚಿಕಿತ್ಸೆ ಫಲಕಾರಿಯಾಗದೆ ಚಿಕಿತ್ಸೆಗೆಂದು ದಾಖಲಾಗಿದ್ದ ಆಸ್ಪತ್ರೆಯಲ್ಲೇ ಚಿಕಿತ್ಸೆ ಫಲಕಾರಿಯಾಗದೆ ನಿಧಿವಶರಾಗಿದ್ದರೆ. ಅರವಿಂದ್ ಘೋಷ್ ಅವರ ಬಗ್ಗೆ ಸಂಶೋದನೆಯನ್ನು ಮಾಡಿ […]

Advertisement

Wordpress Social Share Plugin powered by Ultimatelysocial